Friday, October 18, 2024
spot_img
spot_img
spot_img
spot_img
spot_img
spot_img
spot_img

Donald Trump ಮೇಲೆ ದಾಳಿ ಮಾಡಿದಾತನನ್ನು ಹೊಡೆದುರುಳಿಸಿದ ಕಮಾಂಡೊ ; ವಿಡಿಯೋ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald trump) ಅವರ ಚುನಾವಣಾ ರ‍್ಯಾಲಿಯ ವೇಳೆ ಗುಂಡಿನ ದಾಳಿ ನಡೆದಿದ್ದು, ಘಟನೆಯಿಂದ ಟ್ರಂಫ್ ಮುಖವೆಲ್ಲ ರಕ್ತ ಸಿಕ್ತವಾಗಿದೆ. ಟ್ರಂಪ್‌ ಮೇಲಿನ ಗುಂಡಿನ ದಾಳಿಯ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ಟ್ರಂಪ್‌ ಮೇಲೆ ಗುಂಡು ಹಾರುತ್ತಿದ್ದಂತೆ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಪ್ರತಿದಾಳಿ ಮಾಡುವುದನ್ನು ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ಶೇರ್‌ ಆಗುತ್ತಿದೆ. ಟ್ರಂಪ್‌ ರ‍್ಯಾಲಿ ನಡೆಯುತ್ತಿದ್ದ ವೇದಿಕೆಯಿಂದ ಕೆಲವೇ ದೂರದಲ್ಲಿರುವ ಕಟ್ಟಡದ ಮೇಲೆಇಬ್ಬರು ಸ್ನೈಪರ್‌ ಗನ್‌ ಸಮೇತ ಟ್ರಂಪ್‌ ಭದ್ರತೆಗೆ ನಿಯೋಜನೆಗೊಂಡಿದ್ದರು.

ಇದನ್ನು ಓದಿ : Health : ಹೃದಯಾಘಾತಕ್ಕೂ 1 ತಿಂಗಳ ಮುಂಚೆಯೆ ದೇಹ ನೀಡುತ್ತೆ ಈ 6 ಎಚ್ಚರಿಕೆ ಸೂಚನೆಗಳನ್ನು.!

ಅವರಲ್ಲಿಯ ಓರ್ವ ಶೂಟರ್‌ ಕಂಡ ಕೂಡಲೇ ಶೂಟ್‌ ಮಾಡಿದ್ದಾನೆ. ಗುಂಡಿನ ಸದ್ದು ಕೇಳುತ್ತಿದತೆ ಟ್ರಂಪ್‌ ಸಮೇತ ಅಲ್ಲಿದ್ದ ಜನ ಕಕ್ಕಾಬಿಕ್ಕಿ ಆಗಿದ್ದಾರೆ. ಟ್ರಂಪ್‌ ತಕ್ಷಣ ಡಯಾಸ್‌ ಕೆಳಗೆ ಅವಿತು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಹೇಳಲಾಗುತ್ತಿದೆ. ಇನ್ನು ಡೊನಾಲ್ಡ್‌ ಟ್ರಂಪ್‌ ಮೇಲಿನ ಗುಂಡಿನ ದಾಳಿ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ FBI ಕೂಲಂಕುಷ ತನಿಖೆ ಕೈಗೆತ್ತಿಕೊಂಡಿದೆ.

ದಾಳಿಗೆ ನಿಜವಾದ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಆ ಬಗ್ಗೆ ತನಿಖೆ ಮುಂದುವರೆದಿದೆ ಎಂದು FBI ಹೇಳಿದೆ.

ಇದನ್ನು ಓದಿ : ಇಂದು “ಪುರಿ ಜಗನ್ನಾಥ”ನ “ರತ್ನ ಭಂಡಾರ”ದ ರಹಸ್ಯ ಬಯಲು ; ಭಂಡಾರಕ್ಕೆ ಇದೆಯಾ “ಸರ್ಪಗಳ ರಕ್ಷಣೆ”.?

ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ.

ಗುಂಡಿನ ದಾಳಿಯಿಂದ ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಇನ್ನು ಘಟನೆಯಲ್ಲಿ ಒಬ್ಬ ಶೂಟರ್ ಮತ್ತು ರ‍್ಯಾಲಿಯಲ್ಲಿ ಭಾಗವಹಿಸಿದ್ದವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img