ಜನಸ್ಪಂದನ ನ್ಯೂಸ್, ಥೈಲ್ಯಾಂಡ್ : ಮಲೇಷಿಯಾದ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಕಚೇರಿ ಕೆಲಸದ ನಿಮಿತ್ತ ಕೆಲ ದಿನಗಳು ಥೈಲ್ಯಾಂಡ್‌ಗೆ ಹೋಗಬೇಕಿದೆ ಎಂದು ಸುಳ್ಳು ಹೇಳಿದ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದೆ. ಗಂಡನ ಮಾತು ನಂಬಿದ ಪತ್ನಿ ಆತ ನಿಜವಾಗಿಯೂ ಆಫೀಸ್ ಟ್ರಿಪ್‌ಗೆ ಹೋಗಿದ್ದಾನೆ ಎಂದುಕೊಂಡಿದ್ದಳು. ಆದರೆ, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರವಾಹವೇ ಆತನ ‘ರಹಸ್ಯ ಪ್ರಯಾಣ’ವನ್ನು ಬಯಲು ಮಾಡಿದದ್ದು ವಿಚಿತ್ರ ಸಂಗತಿಯಾಗಿದೆ.
ಗರ್ಭಿಣಿ ಪತ್ನಿಗೆ ಸುಳ್ಳು ಹೇಳಿ ಥೈಲ್ಯಾಂಡ್‌ನಲ್ಲಿ ಪ್ರೇಯಸಿಯೊಂದಿಗೆ ಮಜಾ :
ಪತ್ನಿ ಸಹ ಪ್ರಯಾಣಕ್ಕೆ ಬರುವುದಾಗಿ ಹೇಳಿದಾಗ, ಗರ್ಭಿಣಿಯಾದ್ದರಿಂದ ವಿಮಾನಯಾನ ಬೇಡ ಎಂದು ಹೇಳಿ ಗರ್ಭಿಣಿ ಪತ್ನಿ ಬರದಂತೆ ಮಾಡಿ ತನ್ನ ಪ್ರೆಯಸಿಯ ಜೊತೆ ಟ್ರಿಪ್ ಹೋದನು. ಆತ ತನ್ನ ಲವರ್ ಜೊತೆಗೆ ಥೈಲ್ಯಾಂಡ್‌ನ ಹ್ಯಾಟ್ ಯಾಯ್ ಪ್ರದೇಶದ ಒಂದು ರೆಸಾರ್ಟ್‌ನಲ್ಲಿ ನಾಲ್ಕು ದಿನಗಳಿಂದ ಮೋಜುಮಸ್ತಿ ಮಾಡುತ್ತಿದ್ದ.
ಇದನ್ನು ಓದಿ : ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಗಂಡ ತನ್ನ ಸುಳ್ಳಿನ ಕಥೆಯ ಬಗ್ಗೆ ಪತ್ನಿಗೆ ತಿಳಿಯಲು ಯಾವುದೇ ಅವಕಾಶವೇ ಇಲ್ಲ ಎಂದು ಆತ ನಿಶ್ಚಿಂತೆಯಿಂದ ದಿನಗಳನ್ನು ಕಳೆಯುತ್ತಿದ್ದ. ಆದರೆ, ಎಲ್ಲವೂ ಯೋಜಿಸಿದಂತೆ ನಡೆಯುವುದಿಲ್ಲ.
ಥೈಲ್ಯಾಂಡ್‌ನಲ್ಲಿ ಪ್ರವಾಹ — ಕಾಣೆಯಾದ ಗಂಡ – ಪತ್ನಿಗೆ ಆತಂಕ :
ಥೈಲ್ಯಾಂಡ್‌ನಲ್ಲಿ ಅಚಾನಕ್ ಪ್ರವಾಹ ಉಂಟಾದ ಸುದ್ದಿ ಹರಿದಾಡುತ್ತಿದ್ದಾಗ, ಪತ್ನಿ ಟಿವಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳ ದೃಶ್ಯಗಳನ್ನು ನೋಡಿ ಆತಂಕಗೊಂಡಳು. ಗಂಡನಿಗೆ ಫೋನ್ ಮಾಡಿದಾಗ ಸಂಪರ್ಕವಾಗಲಿಲ್ಲ. ಆಕೆ ಆತ ನಿಜವಾಗಿಯೂ ಅಪಾಯದಲ್ಲಿ ಸಿಲುಕಿದ್ದಾನೆ ಎಂದು ಭಾವಿಸಿ, ತಕ್ಷಣ ಥೈಲ್ಯಾಂಡ್‌ನಲ್ಲಿ ಇರುವ ತನ್ನ ಆನ್‌ಲೈನ್ ಗೆಳೆಯನನ್ನು ಸಂಪರ್ಕಿಸಿ ಗಂಡನನ್ನು ರಕ್ಷಿಸಲು ವಿನಂತಿಸಿದಳು.
“ರೆಸಾರ್ಟ್ ವಿಳಾಸ ನೀಡಿದ ಪತ್ನಿ – ಬಯಲಾಯಿತು ಆಘಾತಕರ ಸತ್ಯ :
ಭಯಗೊಂಡ ಗರ್ಭಿಣಿ ಪತ್ನಿ ತನ್ನ ಗಂಡ ಉಳಿದುಕೊಂಡಿದ್ದ ವಿಳಾಸವನ್ನು ಗೆಳೆಯನಿಗೆ ಕಳುಹಿಸಿದ್ದಳು. ಆ ಗೆಳೆಯ ಸ್ಥಳಕ್ಕೆ ಸಂಪರ್ಕಿಸಲು ಯತ್ನಿಸಿದಾಗ, ಅಲ್ಲಿ ಆತನ ಜೊತೆ ‘ಸಹೋದ್ಯೋಗಿ’ ಹೆಸರಿನಲ್ಲಿ ಬಂದಿದ್ದ ಮಹಿಳೆ ಕೂಡ ಇದ್ದಳು ಎಂಬುದು ತಿಳಿದುಬಂತು.
ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಗಂಡನು “ಆಫೀಸ್ ಕೆಲಸಕ್ಕಾಗಿ” ಹ್ಯಾಟ್ ಯಾಯ್‌ನಲ್ಲಿ ಇದ್ದೇನೆ ಎಂದು ಹೇಳಿದ್ದರೂ, ವಾಸ್ತವದಲ್ಲಿ ಆತ ತನ್ನ ಪ್ರೇಯಸಿಯೊಂದಿಗೆ ರೆಸಾರ್ಟ್‌ನ ಅದೇ ರೂಮಿನಲ್ಲಿ ನಾಲ್ಕು ದಿನಗಳಿಂದ ವಾಸಿಸುತ್ತಿದ್ದನು ಎಂಬುದು ಬಹಿರಂಗವಾಗಿದೆ.
ಗಂಡನ ನಿಜಸ್ವರೂಪ ಬಯಲು ಮಾಡಿದ ಪ್ರವಾಹ :
ಥೈಲ್ಯಾಂಡ್‌ನ ಪ್ರವಾಹದಿಂದ ಮಹಿಳೆ ಗಂಡನ ಸುರಕ್ಷತೆಗಾಗಿ ಸಂಕಟಗೊಳ್ಳುತ್ತಿದ್ದಾಗಲೇ, ಆತನ ಸುಳ್ಳಿನ ಜೀವನ ಬಯಲಾಗಿರುವುದು ನೋವುತುಂಬಿದೆ. ಗರ್ಭಿಣಿ ಪತ್ನಿ ಮನೆಯಲ್ಲಿರುವಾಗ ಆತ ಪ್ರೇಯಸಿಯೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾನೆಂದು ಹರಿದಾಡುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.
ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

ಜನಸ್ಪಂದನ ನ್ಯೂಸ್, ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ (Doctor) ಗಂಭೀರ ನಿರ್ಲಕ್ಷ್ಯದ ಪ್ರಕರಣ ಹೊರಬಿದ್ದಿದೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ (Family planning surgery) ಗಾಗಿ ದಾಖಲಾಗಿದ್ದ ಬಾಲಯ್ಯ ನಗರದ ನಿವಾಸಿ ರಮಾದೇವಿ (22) ಅವರ ದೇಹದೊಳಗೆ ಶಸ್ತ್ರಚಿಕಿತ್ಸಾ ಬ್ಲೇಡ್ ಉಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ವೈದ್ಯರ (Doctor) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಮಾದೇವಿಗೆ ಕೆಲವು ದಿನಗಳ ಹಿಂದೆ ಡಾ. ನಾರಾಯಣ ಸ್ವಾಮಿ ಮತ್ತು ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರದಿಂದಲೇ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳತೊಡಗಿತು. ಆಸ್ಪತ್ರೆಗೆ ಹಲವಾರು ಬಾರಿ ದೂರು ನೀಡಿದರೂ ಸಿಬ್ಬಂದಿ “ನೋವು ಸಾಮಾನ್ಯ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದರು.
ವೈದ್ಯರ (Doctor) ನಿರ್ಲಕ್ಷ್ಯ ಬೆಳಕಿಗೆ :
ನೋವು ದಿನೇದಿನೇ ಹೆಚ್ಚುತ್ತಿದ್ದ ಕಾರಣ, ರಮಾದೇವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆಕೆಯ ಹೊಟ್ಟೆ (ಯೋನಿ) ಯ ಸಮೀಪ ಶಸ್ತ್ರಚಿಕಿತ್ಸಾ ಬ್ಲೇಡ್ ಇರುವುದಾಗಿ ವರದಿಯಲ್ಲಿ ಪತ್ತೆಯಾಯಿತು.
ಇದನ್ನು ಓದಿ : Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.
ಇದನ್ನು ನೋಡಿ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರು (Doctor) ಶಸ್ತ್ರಚಿಕಿತ್ಸೆಯ ವೇಳೆ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಸಂತ್ರಸ್ತೆಯ ಕುಟುಂಬದವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ ಉಚಿತವಾಗಿದ್ದರೂ, ಆಸ್ಪತ್ರೆ ಸಿಬ್ಬಂದಿ ರೂ.2,500/- ಹಣ ವಸೂಲಿ ಮಾಡಿದ್ದಾರೆಂದು ರಮಾದೇವಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಸ್ವಾಮಿ, “ಶಸ್ತ್ರಚಿಕಿತ್ಸೆಯ ನಂತರ ಮತ್ತೊಂದು ತುರ್ತು ಪ್ರಕರಣ ಇತ್ತು. ಕ್ಲೀನರ್‌ಗಳು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಾನು ಹೊರಟುಹೋಗಬೇಕಾಯಿತು. ಬ್ಲೇಡ್ ಉಳಿದಿರುವುದು ನನ್ನ ತಪ್ಪಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.
ಆದರೆ, ಜೀವ ಉಳಿಸಬೇಕಾದ ಸ್ಥಳದಲ್ಲೇ ವೈದ್ಯರ (Doctor) ಇಂತಹ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂಬ ಕಾರಣಕ್ಕೆ ಸಾರ್ವಜನಿಕರ ಮಧ್ಯೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಟುಂಬದವರು ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಬೇಜವಾಬ್ದಾರಿ (Doctor) ಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ರಮಾದೇವಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೂಡಾ ಅವರು ಬೇಡಿಕೆ ಇಟ್ಟಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






