Tuesday, September 16, 2025

Janaspandhan News

HomeViral VideoTeacher : ವಿದ್ಯಾರ್ಥಿನಿ ಜೊತೆ ಸ್ಟಾಫ್ ರೂಂನಲ್ಲಿ ಅಸಭ್ಯ ವರ್ತನೆ‌ : ಶಿಕ್ಷಕನ ವಿರುದ್ಧ ಆಕ್ರೋಶ.!
spot_img
spot_img
spot_img

Teacher : ವಿದ್ಯಾರ್ಥಿನಿ ಜೊತೆ ಸ್ಟಾಫ್ ರೂಂನಲ್ಲಿ ಅಸಭ್ಯ ವರ್ತನೆ‌ : ಶಿಕ್ಷಕನ ವಿರುದ್ಧ ಆಕ್ರೋಶ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಶಾಲೆಯೊಂದರ ಸ್ಟಾಫ್ ರೂಮಿನಲ್ಲಿ ಶಿಕ್ಷಕ (Teacher) ನೋರ್ವ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಸದ್ಯ ಅದರ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕರು ಶಿಕ್ಷಕನ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ಆಗುತ್ತಿದ್ದು, ಸದ್ಯ ವೈರಲ್ ಆಗಿರುವ ಈ ಒಂದು ವಿಡಿಯೋ ಕ್ಲಿಪಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!

ವೈರಲ್‌ ವಿಡಿಯೋದಲ್ಲಿ ಶಾಲೆಯೊಂದರ ಶಿಕ್ಷಕ (Teacher) ಹಾಗೂ ವಿದ್ಯಾರ್ಥಿನಿ ಸ್ಟಾಫ್ ರೂಮ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವುದು ಸೆರೆಯಾಗಿದೆ. ಈ ವಿಡಿಯೋ ನೀತಿ, ನೈತಿಕತೆ ಹಾಗೂ ಶಿಕ್ಷಕ-ವಿದ್ಯಾರ್ಥಿಗಳ ಸಂಬಂಧದ ಕುರಿತು ಬಹುಮಟ್ಟಿನ ಪ್ರಶ್ನೆಗಳನ್ನು ಎತ್ತಿದೆ.

ವೈರಲ್‌ ವಿಡಿಯೋದಲ್ಲೇನಿದೆ :

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಶಿಕ್ಷಕನೋರ್ವ ಸ್ಟಾಫ್ ರೂಮಿಗೆ ಪ್ರವೇಶಿಸುತ್ತಾನೆ. ಶಿಕ್ಷಕ (Teacher) ಪ್ರವೇಶಿಸಿದ ಕೂಡಲೇ ವಿದ್ಯಾರ್ಥಿನಿಯೂ ಸಹ ಸ್ಟಾಫ್ ರೂಮಿಗೆ ಆಗಮಿಸುತ್ತಾಳೆ. ಅವರ ಆಗಮನ ದೃಶ್ಯವು ವಿಡಿಯೋದಲ್ಲಿ ಕಂಡುಬರುತ್ತದೆ.

ಇದನ್ನು ಓದಿ : ಕಾಲೇಜಿನಲ್ಲಿ ಶಿಕ್ಷಕನಿಂದ Harassment ಆರೋಪ ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!

ನಂತರದ ದೃಶ್ಯಗಳಲ್ಲಿ, ಇಬ್ಬರೂ ಪರಸ್ಪರ ಅಪ್ಪಿ ಮುದ್ದಡುವ ರೀತಿ ಕಾಣುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಲೇ, ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ವಿಡಿಯೋ @ShoneeKapoor ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ “Shame on such teacher 😡, Shame on such student 😡. Seems, she is working hard to score high marks. Now whom should we blame here, the bribe-taking teacher or the bribe-giving girl?” ಎಂದು ಬರೆದುಕೊಂಡಿದ್ದಾರೆ.
Jul 14, 2025 ರಂದು ಹಂಚಿಕೊಂಡ ಈ ವಿಡಿಯೋ, ಇಲ್ಲಿಯವರೆಗೆ 1.7M Views ಪಡೆದುಕೊಂಡಿದೆ.
ನೆಟ್ಟಿಗರ ಪ್ರತಿಕ್ರಿಯೆ :

ಅನೇಕ ನೆಟ್ಟಿಗರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ಅಪ್ರಾಪ್ತ ವಿದ್ಯಾರ್ಥಿನಿಗೆ ಈ ರೀತಿಯ ವರ್ತನೆ ಕಲಿಸುವ ಜವಾಬ್ದಾರಿ ಶಿಕ್ಷಕ (Teacher) ರದ್ದೇ” ಎಂಬ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ನೆಟ್ಟಿಗರು ಶಿಕ್ಷಕರ ನೈತಿಕ ಹೊಣೆಗಾರಿಕೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!
ಶಾಲಾ ಆಡಳಿತದ ಪ್ರತಿಕ್ರಿಯೆ :

ವಿಡಿಯೋ ವೈರಲ್‌ ಆದ ತಕ್ಷಣ, ಶಾಲಾ ಆಡಳಿತ ಮಂಡಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಸಂಬಂಧ ತನಿಖೆ ಪ್ರಾರಂಭವಾಗಿದ್ದು, ಶಿಕ್ಷಕ (Teacher) ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿನಿಗೆ ಸಹಾಯವಾಗಿ ಸಮುದಾಯ ಕೌನ್ಸೆಲಿಂಗ್ ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ಜೊತೆ ಸ್ಟಾಫ್ ರೂಂನಲ್ಲಿ ಶಿಕ್ಷಕನ ಅಶ್ಲೀಲ್ ವರ್ತನೆ‌ಯ ವಿಡಿಯೋ :


 

Astrology : ಹೇಗಿದೆ ಗೊತ್ತಾ.? ಜುಲೈ 15 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

results of the twelve zodiac signs

*ಮೇಷ ರಾಶಿ*

ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಅಮೂಲ್ಯ ವಿಷಯಗಳನ್ನು ಚರ್ಚಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ದೂರದ ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಸಂಗಾತಿಯೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ವೃಷಭ ರಾಶಿ*

ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತದೆ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ. ಶತ್ರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ವೃತ್ತಿ ವ್ಯವಹಾರಗಳು ತೃಪ್ತಿಕರವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗುತ್ತವೆ.

*ಮಿಥುನ ರಾಶಿ*

ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ಇತರರೊಂದಿಗೆ ವಿವಾದಗಳಿರುತ್ತವೆ. ದೂರದ ಪ್ರಯಾಣದಲ್ಲಿ ಶ್ರಮ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ. ಉದ್ಯೋಗ ವಾತಾವರಣವು ಸ್ವಲ್ಪ ಕಿರಿಕಿರಿಯುಂಟುಮಾಡುತ್ತದೆ.

*ಕಟಕ ರಾಶಿ*

ಮನೆಯ ಹೊರಗೆ ಹೆಚ್ಚುವರಿ ಜವಾಬ್ದಾರಿಗಳು ಕಿರಿಕಿರಿಯನ್ನು ಹೆಚ್ಚಿಸುತ್ತವೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನೋವು ಉಂಟುಮಾಡುತ್ತವೆ. ಹೊಸ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಬಂಧು ಮಿತ್ರರೊಂದಿಗೆ ಸಣ್ಣ ವಿವಾದಗಳಿರುತ್ತವೆ. ವೃತ್ತಿಪರ ವ್ಯವಹಾರಗಳು ಸ್ವಲ್ಪ ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಆಕಸ್ಮಿಕ ಸ್ಥಾನ ಚಲನೆ ಸೂಚನೆಗಳಿವೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
*ಸಿಂಹ ರಾಶಿ*

ಕುಟುಂಬ ಸದಸ್ಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಎಲ್ಲಾ ಕಡೆಯಿಂದ ಆದಾಯ ಬರುತ್ತದೆ. ವ್ಯಾಪಾರ ವಿಸ್ತರಣೆಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಭೇಟಿ ಲಾಭದಾಯಕವಾಗಿರುತ್ತವೆ. ವೃತ್ತಿ ಮತ್ತು ಉದ್ಯೋಗಗಳು ನಿರೀಕ್ಷಿತವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆರ್ಥಿಕ ಅನುಕೂಲತೆ ಉಂಟಾಗುತ್ತದೆ.

*ಕನ್ಯಾ ರಾಶಿ*

ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳಲ್ಲಿ ದ್ವಿಸ್ವಭಾವ ಆಲೋಚನೆಗಳು ಒಳ್ಳೆಯದಲ್ಲ. ಪ್ರಮುಖ ವ್ಯವಹಾರಗಳು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ, ನಿರುದ್ಯೋಗಿಗಳು ಕೆಲವು ವಿಷಯಗಳಲ್ಲಿ ನಿರಾಶೆಗೊಳ್ಳುತ್ತಾರೆ.

*ತುಲಾ ರಾಶಿ*

ಸ್ನೇಹಿತರಿಂದ ಅನಿರೀಕ್ಷಿತ ಸಹಾಯವು ತೃಪ್ತಿಕರವಾಗಿರುತ್ತದೆ. ಹೊಸ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ಮನೆಯ ಹೊರಗೆ ಹೆಚ್ಚು ಉತ್ಸಾಹದಿಂದ ಮುನ್ನಡೆಯುತ್ತೀರಿ. ಔದ್ಯೋಗಿಕ ಕೆಲಸಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ಧಿ ಉಂಟಾಗುತ್ತದೆ. ದೂರದ ಸಂಬಂಧಿಕರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.

*ವೃಶ್ಚಿಕ ರಾಶಿ*

ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ನಿರುದ್ಯೋಗಿಗಳು ಸ್ವಲ್ಪ ತಾಳ್ಮೆಯಿಂದ ಪ್ರಯತ್ನಿಸಬೇಕು. ಕಣ್ಣಿನ ಸಂಬಂಧಿತ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಕೊರತೆ ಉಂಟಾಗಲಿದೆ. ಕುಟುಂಬದ ಸದಸ್ಯರ ವರ್ತನೆ ಅಚ್ಚರಿ ಮೂಡಿಸುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ಸಮುದಾಯದಲ್ಲಿ ಗೌರವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಅಪ್ರಯತ್ನ ಕಾರ್ಯ ಸಿದ್ಧತೆ ಉಂಟಾಗುತ್ತದೆ. ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ವ್ಯಾಪಾರಗಳು ಹೊಸ ಹೂಡಿಕೆಗಳನ್ನು ಪಡೆಯುತ್ತವೆ. ಹಣಕಾಸಿನ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ.

*ಮಕರ ರಾಶಿ*

ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಮತ್ತು ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

*ಕುಂಭ ರಾಶಿ*

ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಮನೆಯಲ್ಲಿ ಕೆಲವರ ವರ್ತನೆ ಭಾವನಾತ್ಮಕವಾಗಿ ನೋವುಂಟು ಮಾಡುತ್ತದೆ. ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಕೈಗೊಂಡ ವ್ಯವಹಾರಗಳಲ್ಲಿ ಋಣಾತ್ಮಕ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಮುಜುಗರಕ್ಕೆ ಒಳಗಾಗುತ್ತೀರಿ ವ್ಯವಹಾರದಲ್ಲಿ ಹಣಕಾಸಿನ ತೊಂದರೆಗಳು ಉಂಟಾಗುತ್ತವೆ.

*ಮೀನ ರಾಶಿ*

ಕುಟುಂಬ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮಯದೊಂದಿಗೆ ಕಡಿಮೆ ಫಲಿತಾಂಶಗಳನ್ನು ಪಡೆಯುತ್ತೀರಿ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ಹಣಕಾಸಿನ ತೊಂದರೆಗಳು ಬಾಧಿಸುತ್ತವೆ. ವಾಹನ ಪ್ರಯಾಣದಲ್ಲಿ ಜಾಗ್ರತೆ ವಹಿಸಬೇಕು. ವ್ಯಾಪಾರದಲ್ಲಿ ಏರುಪೇರು ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ.

Astrology

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments