Friday, June 14, 2024
spot_img
spot_img
spot_img
spot_img
spot_img
spot_img

ವಿಚಿತ್ರ tradition : ಇಲ್ಲಿ ಸತ್ತ ವ್ಯಕ್ತಿಯೊಂದಿಗೆ ಜೀವಂತ ವ್ಯಕ್ತಿಯ ವಿವಾಹ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಂಬಂಧಗಳಲ್ಲಿ ವಿವಾಹ (marriage) ಅನ್ನೋದು ಮುರಿಯಲಾರದ ಬಂಧ. ಈ ಸಂಬಂಧವು ಏಳು ಜನ್ಮದವರೆಗೆ ಮುಂದುವರೆಯುವ ಬಂಧ.

ಆದರೆ ಮದುವೆಯಾಗದೆ ಸತ್ತವರ ಬಗ್ಗೆ ಯೋಚನೆ ಮಾಡಿದ್ದೀರಾ.? ಸತ್ತ ಇಬ್ಬರು ವ್ಯಕ್ತಿಗಳು ಮದುವೆಯಾದರೆ ಏನಾಗುತ್ತದೆ ಗೊತ್ತಾ.? ಈ ಪ್ರಶ್ನೆಗಳು ವಿಚಿತ್ರವೆನಿಸಬಹುದು. ಸತ್ತ ವ್ಯಕ್ತಿಗೆ (dead person) ಮದುವೆಯೇ.? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದಿರಬಹುದು. ಆದರೆ ಈ ರೀತಿಯೂ ಮದುವೆಯಾಗುತ್ತೆ‌ ಕಣ್ರೀ.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ಅದು ಜೀವಂತ ಜನರು ಮೃತ ದೇಹಗಳನ್ನು ಮದುವೆಯಾಗುವ ದೇಶವೊಂದಿದೆ. ಮೃತ ದೇಹಗಳಿಗೆ ಪರ್ಫೆಕ್ಟ್ ಜೋಡಿಯನ್ನು ಸಹ ಕಂಡುಕೊಳ್ಳುತ್ತಾರೆ. ಈ ರೀತಿ ಯಾವ ದೇಶದಲ್ಲಿ ನಡೆಯುತ್ತದೆ ಅಥವಾ ಹೇಗೆ ಸಂಭವಿಸುತ್ತದೆ ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ? ಇದರ ಬಗ್ಗೆ ಮಾಹಿತಿ ಓದಿ.

ಚೀನಾ ದೇಶದಲ್ಲಿ ಸತ್ತ ಜನರನ್ನು ಮದುವೆಯಾಗುವ ಸಂಪ್ರದಾಯವಿದೆ. ಇದನ್ನು ಪ್ರೇತ ವಿವಾಹ (Ghost wedding) ಎಂದು ಕರೆಯಲಾಗುತ್ತದೆ. 3000 ವರ್ಷಗಳಿಂದ ಈ ಸಂಪ್ರದಾಯವನ್ನುಇಲ್ಲಿನ ಜನರು ನಂಬಿಕೊಂಡು ಬಂದಿದ್ದಾರೆ.

ಈ ಸಂಪ್ರದಾಯವನ್ನು ಏಕೆ ಆಚರಿಸಲಾಗುತ್ತದೆ.? ಏಕೆಂದರೆ ಅವಿವಾಹಿತರು ಮರಣದ ನಂತರ ಏಕಾಂಗಿಯಾಗಿ ಉಳಿಯಬಾರದು ಎನ್ನುವ ಕಾರಣಕ್ಕೆ ಮದುವೆ ಮಾಡಿಸಲಾಗುತ್ತದೆಯಂತೆ.

ಚೀನಾದಲ್ಲಿ, ಮೃತ ವ್ಯಕ್ತಿಯ ಕುಟುಂಬದ ಜನರು ತಮ್ಮ ಹುಡುಗ/ಹುಡುಗಿಗೆ ಸೂತಕ ವಧು ಮತ್ತು ವರನನ್ನು ಹುಡುಕಲು ಫೆಂಗ್ ಶೂಯಿ ಮಾಸ್ಟರ್ ಅನ್ನು ಮ್ಯಾಚ್ ಮೇಕರ್ ಆಗಿ ನೇಮಿಸಿಕೊಳ್ಳುತ್ತವೆ.

ಇನ್ನೂ ಜೀವಂತ ಇರೋವಾಗ ವರದಕ್ಷಿಣೆ ತೆಗೆದುಕೊಳ್ಳೋದು ಬೇರೆ ಮಾತು, ಇದೀಗ, ಸತ್ತ ವ್ಯಕ್ತಿಯ ಮದುವೆ ಮಾಡುವ ಸಂದರ್ಭದಲ್ಲಿಯೂ ವರದಕ್ಷಿಣೆ (dowry) ಬಗ್ಗೆ ಮಾತುಕತೆ ನಡೆದೇ ನಡೆಯುತ್ತೆ. ಇದು ಸಹ ಒಂದು ಸಂಪ್ರದಾಯವಂತೆ.

ಆದರೆ ಇದೆಲ್ಲವನ್ನೂ ಕಾಗದದಲ್ಲಿ ಬರವಣಿಗೆ ರೂಪದಲ್ಲಿ ಮಾತ್ರ ಇರುತ್ತದೆ. ನಿಜವಾಗಿ ಕೊಡೋದಿಲ್ಲ. ಆದರೆ ಸತ್ತ ವ್ಯಕ್ತಿಯನ್ನು ಜೀವಂತ ವ್ಯಕ್ತಿ ಮದುವೆಯಾಗೋದಾದರೆ ಆವಾಗ ಅವರಿಗೆ ಇಂತಿಷ್ಟು ಹಣ ಕೊಡಬೇಕಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ರೇಪ್ ಮಾಡಿದ್ದ ಯುವತಿಯನ್ನು ಆಕೆಯ ಮದುವೆ ದಿನವೇ ಕಿಡ್ನ್ಯಾಪ್ ಮಾಡಲು ಯತ್ನಿಸಿದ ನೀಚ ; video viral.!

ಅಲ್ಲದೇ ಚೀನಾದ ದೆವ್ವದ ಫಿಜಿಯಲ್ಲಿ ಶವಸಂಸ್ಕಾರದ ಮದುವೆಗಳನ್ನು ನಡೆಸಲಾಗುತ್ತದೆ. ಅಲ್ಲಿನ ದೇವರುಗಳು ಮತ್ತು ದೇವತೆಗಳು ಮದುವೆಯಾಗದೆ ಸಾಯುವವರ ಆತ್ಮವನ್ನು ಹಿಂಸಿಸುತ್ತಲೇ ಇರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಫಿಜಿಯಲ್ಲಿ ಈ ರೀತಿಯ ಮದುವೆಯ ಸಂಪ್ರದಾಯವು ಶತಮಾನಗಳಿಂದ ನಡೆಯುತ್ತಿದೆ.

ನಮ್ಮ ಕರ್ನಾಟಕದಲ್ಲೂ ಈ ರೀತಿಯ ಮದುವೆ ಇದೆ, ಆದರೆ ಇಲ್ಲಿ, ಸಾವನ್ನಪ್ಪಿದ ಪುರುಷ ಆತ್ಮದ ಜೊತೆ, ಸಾವನ್ನಪ್ಪಿದ ಮಹಿಳೆಯ ಆತ್ಮವನ್ನು ಮದುವೆ ಮಾಡಿಸುತ್ತಾರೆ. ಆದರೆ ಚೀನಾದಲ್ಲಿ ಜೀವಂತ ಜನರ ಜೊತೆ ಸತ್ತ ವ್ಯಕ್ತಿಯ ಮದುವೆ ಮಾಡಲಾಗುತ್ತದೆ.

spot_img
spot_img
- Advertisment -spot_img