Saturday, July 27, 2024
spot_img
spot_img
spot_img
spot_img
spot_img
spot_img

ಸೀರೆಯುಟ್ಟು ಸಖತ್ ಮಿಂಚಿದ ಸ್ಟಾರ್ ನಟ ; ಪೋಟೋ ವೈರಲ್..!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾರಿಯರು ಸೀರೆಯುಡುವುದು ಕಾಮನ್ (common), ಆದರೆ ಸೀರೆಯುಟ್ಟು ಇಲ್ಲೊಬ್ಬ ಸ್ಟಾರ್ ನಟ (Star hero) ಸಖತ್ ಮಿಂಚಿದ್ದಾರೆ.

ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ (stylish star) ಅಂತ ಫೇಮಸ್ ಆಗಿರುವ ಅಲ್ಲು ಅರ್ಜುನ್​ ನಟನೆಯ, ಸುಕುಮಾರ್​ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇಲ್ಲಿ ತನಕ ಸಿನಿಮಾದ ಬಿಡುಗಡೆ ದಿನಾಂಕ, ಫಸ್ಟ್​ ಲುಕ್​ ಹಾಗೂ ಟೀಸರ್​ (teaser) ಚಿತ್ರ ಹೆಚ್ಚು ಸದ್ದು ಮಾಡಿತ್ತು.

ಇದೀಗ ಚಿತ್ರದ ಬಗೆಗಿನ ಮೇಜರ್​ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ (expectation) ಮೂಡಿಸಿದೆ.

ಈ ಹಿಂದೆ ಚಿತ್ರತಂಡ ಅಲ್ಲು ಅರ್ಜುನ್​ ಗಂಗಮ್ಮ ತಲ್ಲಿ ಕಾಸ್ಟ್ಯೂಮ್​ನಲ್ಲಿರುವ (costume) ಪೋಸ್ಟರ್​ ಒಂದನ್ನು ಚಿತ್ರತಂಡ ಹಂಚಿಕೊಂಡಿತ್ತು. ಆ ಲುಕ್​ ಸಖತ್​ ವೈರಲ್​ ಆಗಿತ್ತು ಮತ್ತು ಅಭಿಮಾನಿಗಳ (fans) ಕುತೂಹಲವನ್ನು ಕೆರಳಿಸಿತ್ತು.

ಇದೀಗ ಶೂಟಿಂಗ್​ ಸೆಟ್​ನಿಂದ (shooting set) ಫೋಟೋ ಒಂದು ವೈರಲ್​ ಆಗಿದೆ. ಸೀರೆಯುಟ್ಟು ಅಲ್ಲು ಅರ್ಜುನ್​ ಚೇರ್​ ಮೇಲೆ ಕುಳಿತುಕೊಂಡಿರುವ ಪೋಟೋ ಒಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪುಷ್ಪ-2 ಚಿತ್ರಕ್ಕೆ ಸಂಬಂಧಿಸಿದಂತೆ ಶೂಟಿಂಗ್​ ಸೆಟ್​ನಿಂದ ಯಾವುದೇ ಮಾಹಿತಿ ಹೊರಬಾರದಂತೆ ಚಿತ್ರತಂಡ ಎಚ್ಚರ ವಹಿಸಿದ್ದರು ಇದೀಗ ಈ ಪೋಟೋ ಲೀಕ್​ (photo leak) ಆಗಿದೆ.

ಒಂದು ವೇಳೆ ಈ ಫೋಟೋವನ್ನು ಚಿತ್ರತಂಡವೇ ಬೆಂಕಂತಲೇ ಲೀಕ್​ ಮಾಡಿದೆಯಾ ಅಥವಾ ಯಾರಾದರೂ ಖಾಸಗಿ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರಾ ಎಂದು ಈವರೆಗೆ ತಿಳಿದು ಬಂದಿಲ್ಲ.

spot_img
spot_img
- Advertisment -spot_img