Sunday, September 8, 2024
spot_img
spot_img
spot_img
spot_img
spot_img
spot_img
spot_img

ಬೆಂಗಳೂರು-ಹುಬ್ಬಳ್ಳಿ-ಪಂಢರಪುರ (via ಬೆಳಗಾವಿ) ನಡುವೆ ವಿಶೇಷ ರೈಲು ; ಇಲ್ಲಿದೆ ವೇಳಾಪಟ್ಟಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ನೈಋತ್ಯ ರೈಲ್ವೆಯು (SWR) ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ನೈಋತ್ಯ ರೈಲ್ವೆಯು (SWR) ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 06295 ಜುಲೈ 15, 2024 ರಂದು SMVT ಬೆಂಗಳೂರಿನಿಂದ ರಾತ್ರಿ 10:00 ಗಂಟೆಗೆ ಹೊರಟು ಮರುದಿನ ಸಂಜೆ 06:20 ಕ್ಕೆ ಪಂಢರಪುರ ನಿಲ್ದಾಣವನ್ನು ತಲುಪುತ್ತದೆ.

ಇದನ್ನು ಓದಿ : ಇಂಡಿಯನ್ ಬ್ಯಾಂಕ್‌ನಲ್ಲಿ ಖಾಲಿ ಇರುವ 1,500 ಪೋಸ್ಟ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.!

ರೈಲು ಸಂಖ್ಯೆ : 06296 ಜುಲೈ 16, 2024 ರಂದು ರಾತ್ರಿ 08:00 ಗಂಟೆಗೆ ಪಂಢರಪುರ ನಿಲ್ದಾಣದಿಂದ ಹಿಂದಿರುಗುತ್ತದೆ ಮತ್ತು ಮರುದಿನ ಮಧ್ಯಾಹ್ನ 12:30 ಕ್ಕೆ SMVT ಬೆಂಗಳೂರು ತಲುಪುತ್ತದೆ.

ವಿಶೇಷ ರೈಲುಗಳು ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರೋಡ್, ಘಟಪ್ರಭಾ, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಮಿರಜ್, ಕವಠೆ-ಮಹಂಕಲ್, ಧಲಗಾಂವ್ ಮತ್ತು ಸಂಗೋಳ.

ಇದನ್ನು ಓದಿ : ನಿಮ್ಮ ಮೂಗು ಹೇಳುತ್ತೇ ನಿಮ್ಮ ವ್ಯಕ್ತಿತ್ವವನ್ನ ; ನಿಮ್ಮ ಮೂಗು ಯಾವುದು.?

ವಿಶೇಷ ರೈಲು ಎಸಿ ಟೂ ಟೈರ್-1, ಎಸಿ ತ್ರೀ ಟೈರ್-1, ಸ್ಲೀಪರ್ ಕ್ಲಾಸ್-12, ಜನರಲ್ ಸೆಕೆಂಡ್ ಕ್ಲಾಸ್-4, ಎಸ್.ಎಲ್.ಆರ್.ಡಿ-2 ಸೇರಿದಂತೆ ಒಟ್ಟು 20 ಕೋಚ್’ಗಳನ್ನು ಒಳಗೊಂಡಿರುತ್ತದೆ.

ರೈಲು ಸಂಖ್ಯೆ : 06297 SMVT ಬೆಂಗಳೂರು-ಪಂಢರಪುರ ಏಕಮುಖ ಎಕ್ಸ್‌ಪ್ರೆಸ್ ವಿಶೇಷ ತುಮಕೂರು, ಅರಸೀಕೆರೆ ಮತ್ತು ಹುಬ್ಬಳ್ಳಿ ಮೂಲಕ :

ಈ ವಿಶೇಷ ರೈಲು SMVT ಬೆಂಗಳೂರಿನಿಂದ ಜುಲೈ 16, 2024 ರಂದು ರಾತ್ರಿ 10:00 ಗಂಟೆಗೆ ಹೊರಟು ಮರುದಿನ ಸಂಜೆ 06:20 ಕ್ಕೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ.

ಇದನ್ನು ಓದಿ : Health : ನಾಲಿಗೆಯ ಬಣ್ಣವೇ ಹೇಳುತ್ತೆ ನಿಮ್ಮ ಆರೋಗ್ಯದ ಬಗ್ಗೆ.!

ಮಾರ್ಗವಾಗಿ ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರೋಡ್, ಘಟಪ್ರಭಾ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಮಿರಜ್, ಕವಠೆ-ಮಹಂಕಲ್, ಢಲಗಾಂವ್ ಮತ್ತು ಸಂಗೋಳ ನಿಲ್ದಾಣಗಳು.

ರೈಲು ಸಂಖ್ಯೆ : 06298 ಪಂಢರಪುರ-SMVT ಬೆಂಗಳೂರು ಏಕಮುಖ ಎಕ್ಸ್‌ಪ್ರೆಸ್ ಅರಸೀಕೆರೆ, ಹಾಸನ ಮತ್ತು ಕುಣಿಗಲ್ ಮೂಲಕ :

ಈ ವಿಶೇಷ ರೈಲು ಜುಲೈ 17, 2024 ರಂದು ರಾತ್ರಿ 8 ಗಂಟೆಗೆ ಪಂಢರಪುರದಿಂದ ಹೊರಟು ಮರುದಿನ ಮಧ್ಯಾಹ್ನ 03:10 ಕ್ಕೆ SMVT ಬೆಂಗಳೂರು ತಲುಪಲಿದೆ.

ಇದನ್ನು ಓದಿ : ಫೋಸ್ಟ್‌ ಆಫೀಸ್‌ ನಲ್ಲಿ 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿ ; 10ನೇ ತರಗತಿ ಪಾಸಾಗಿದ್ದರೆ ಸಾಕು.!

ಮಾರ್ಗವಾಗಿ ಸಂಗೋಳ, ದಲಗಾಂವ, ಕವಠೆ-ಮಹಂಕಲ್, ಮೀರಜ್, ಉಗಾರ ಖುರ್ದ, ಕುಡಚಿ, ಚಿಂಚಲಿ, ರಾಯಬಾಗ, ಘಟಪ್ರಭಾ, ಗೋಕಾಕ ರೋಡ್, ಬೆಳಗಾವಿ, ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹರಿಹರ, ರಾಣಿಬೆನ್ನೂರು, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಮತ್ತು ಕುಣಿಗಲ್ ನಿಲ್ದಾಣಗಳು.

ರೈಲು ಸಂಖ್ಯೆ : 06297/06298 ಎಸಿ ಫಸ್ಟ್ ಕ್ಲಾಸ್-1, ಎಸಿ ಟು ಟೈರ್-2, ಎಸಿ ತ್ರೀ ಟೈರ್-2, ಸ್ಲೀಪರ್ ಕ್ಲಾಸ್-6, ಜನರಲ್ ಸೆಕೆಂಡ್ ಕ್ಲಾಸ್-7, ಎಸ್ ಎಲ್ ಆರ್ ಡಿ-2 ಸೇರಿದಂತೆ ಒಟ್ಟು 20 ಕೋಚ್ ಗಳನ್ನು ಒಳಗೊಂಡಿರುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img