Thursday, September 19, 2024
spot_img
spot_img
spot_img
spot_img
spot_img
spot_img
spot_img

4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ SI ದಂಪತಿ ಆಸ್ತಿ ; ಅದ್ಹೇಗೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಮಗಿರುವ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಚಂಢೀಗಡ (Chandigarh) ಹರೀಂದರ್ ಸಿಂಗ್ ಶೇಖನ್ ಹಾಗೂ ಪರಂಜಿತ್ ಕೌರ್ ಶೇಕನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಪೊಲೀಸ್ ಅಧಿಕಾರಿ ದಂಪತಿಯ ಆಸ್ತಿ ಮೌಲ್ಯ ಕೇವಲ 4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ್ದು, ಈ ಆಸ್ತಿಯ (Property) ಮೂಲದ ಬಗ್ಗೆ ಸಮರ್ಪಕ ವಿವರ ನೀಡದ ಹಿನ್ನೆಲೆಯಲ್ಲಿ ಸಿಬಿಐ, ಇಬ್ಬರ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆ (Illegal property gain) ಆರೋಪದಡಿ ಪ್ರಕರಣ ದಾಖಲಿಸಿದೆ.

ಇದನ್ನು ಓದಿ : ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವರು.!

2017ರಿಂದ 2021ರ ಈ ನಾಲ್ಕು ವರ್ಷದ ಅವಧಿಯಲ್ಲಿ ಈ ದಂಪತಿಯ ಒಟ್ಟು ಆಸ್ತಿ 13.22 ಲಕ್ಷದಿಂದ 1.85 ಕೋಟಿಗೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಈ ಪೊಲೀಸ್ ದಂಪತಿ 4.5 ಲಕ್ಷದ ಚಿನ್ನಾಭರಣವನ್ನು ಈ ಅವಧಿಯಲ್ಲಿ ಗಳಿಸಿದ್ದಾರೆ. ಅಲ್ಲದೇ 40 ಲಕ್ಷ ಮೌಲ್ಯದ ಪ್ಲಾಟ್ ಖರೀದಿಸಿದ್ದಾರೆ. ಇದರ ಜೊತೆ ಮುಲ್ಲಾನ್ಪುರ ನಗರದಲ್ಲಿ ಇರುವ ಆಸ್ತಿಯಲ್ಲೂ ಇವರು ಶೇರ್ ಹೊಂದಿದ್ದಾರೆ.

ಈಗಾಗಲೇ ದಂಪತಿ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಡಿಎ ಕೇಸ್ ದಾಖಲಾಗಿದೆ. ಈಗ ಸಿಬಿಐ ಕೂಡ ಇವರ ವಿರುದ್ಧ ಕೇಸ್ (case) ದಾಖಲಿಸಿದ್ದು, ಇವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದೆ.

ಇದನ್ನು ಓದಿ : ರೈತರಿಗೆ ಮಧ್ಯದ ಬೆರಳು ತೋರಿಸಿ ಮಹಿಳೆಯ ಅಸಭ್ಯ ವರ್ತನೆ ; Video Viral.!

ಈ ಬಗ್ಗೆ ಫೆಬ್ರವರಿ 14 ರಂದು ದೂರು ದಾಖಲಾಗಿದ್ದು, ದಂಪತಿಯ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಕೆಲ ದಾಖಲೆಗಳನ್ನು (documents) ಜಪ್ತಿ ಮಾಡಿದ್ದು, ಇನ್ಸ್‌ಪೆಕ್ಟರ್‌ನ ಸೋದರನ ಮನೆಯಲ್ಲೂ ಸಿಬಿಐ ಶೋಧ ನಡೆಸಿದೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img