Saturday, July 27, 2024
spot_img
spot_img
spot_img
spot_img
spot_img
spot_img

ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ; ಯೂನಿಟ್‌‌ 200 ಗಿಂತ ಜಾಸ್ತಿ ಬಳಸಿದ್ರೆ ಕಟ್ಬೇಕು ಫುಲ್ ಬಿಲ್.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದ ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ಎದುರಾಗಿದೆ. ನೀವೇನಾದ್ರು ತುಂಬಾ ಬಿಸಿಲು ಅಂತ 200 ಯೂನಿಟ್‌‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ.

ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಚೀಫ್ ಇಂಜಿನಿಯರ್, ಕಳೆದ ವರ್ಷದ 12 ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 37,111 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನ ಜನರು ಬಳಕೆ ಮಾಡಿದ್ರು, ಆದರೆ ಈ ವರ್ಷ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ 40 ಸಾವಿರ 607 ಮಿಲಿಯನ್ ಯೂನಿಟ್ ಬಳಕೆ ಆಗಿದೆ.

Health : ಬೆಳಿಗ್ಗೆ ಕಾಳು ಜೀರಿಗೆ ನೀರು ಕುಡಿದರೆ ಏನಾಗುವುದು ಗೊತ್ತೇ.?

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 3,496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ವಿದ್ಯುತ್ ಬಳಕೆ ಯಾಗಿದೆ. ಈ ವರ್ಷ 10,000 ಮಿಲಿಯನ್ ಯೂನಿಟ್ ಹೆಚ್ಚು ಬಳಕೆ ಆಗುವ ಸಾಧ್ಯತೆಯಿದೆ ಎಂದರು.

ಇನ್ನೂ ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್ ಗೆ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.

New scheme of Govt : ದಂಪತಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.!

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಎಲೆಕ್ಷನ್‌ ಟೈಮ್‌ನಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ಎಂದು ಪ್ರಚಾರ ‌ಮಾಡಿತ್ತು. ನಂತರ ವರ್ಷದ ಸರಾಸರಿ ಮಾತ್ರ ಉಚಿತ ಎಂದಿದ್ದು, ಇದೀಗ ಬೇಸಿಗೆ ಅನ್ನೋ ಕಾರಣಕ್ಕೆ ಜನರು ಅತಿಹೆಚ್ಚಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಆದರೆ ಬಳಕೆದಾರರು ಮಾತ್ರ ಬಳಸಿದಷ್ಟು ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ.

spot_img
spot_img
- Advertisment -spot_img