Thursday, April 25, 2024
spot_img
spot_img
spot_img
spot_img
spot_img
spot_img

ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಆರೋಪಿ ಅರೆಸ್ಟ್.!

spot_img

ಜನಸ್ಪಂದನ ನ್ಯೂಸ್, ‌ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪೊಲೀಸ್ ಠಾಣಾ (Ripponpete Police Station) ವ್ಯಾಪ್ತಿಯಲ್ಲಿ, 52 ವರ್ಷದ ವ್ಯಕ್ತಿಯೋರ್ವ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಚಂದ್ರಪ್ಪ (52) ಎಂಬಾತನನ್ನು ಅರೆಸ್ಟ್ (arrest) ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Astrology : ಮಾ. 12ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸಂಜೆ ಸಮಯದಲ್ಲಿ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು (buy) ಬಂದ ಎಂಟು ವರ್ಷದ ಬಾಲಕಿಯ ಮೇಲೆ ಚಂದ್ರಪ್ಪ ಲೈಂಗಿಕ ದೌರ್ಜನ್ಯ (Sexual assault) ವೆಸಗಿದ್ದಾನೆ.

ನಂತರ ಈ ವಿಷಯ ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟು, ನಾಳೆ ಬಾ ಮತ್ತಷ್ಟು ಚಾಕೊಲೇಟ್ ಕೊಡುತ್ತೇನೆ ಎಂದು ಬಾಲಕಿಗೆ ಹೇಳಿದ್ದಾನೆ ಎನ್ನಲಾಗಿದೆ.

ಆ ನಂತರದಲ್ಲಿ ಬಾಲಕಿ ಅಳುತ್ತಾ (cry) ಮನೆಗೆ ಹೋಗಿ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾಳೆ. ತಕ್ಷಣ ಎಚ್ಚೆತ್ತ ಬಾಲಕಿಯ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Health : ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಚಂದ್ರಪ್ಪನನ್ನು ಅರೆಸ್ಟ್ (arrest) ಮಾಡಿದ್ದಾರೆ ಎಂದು ತಿಳಿದು ಬಂದಿದೆ.

spot_img
spot_img
spot_img
- Advertisment -spot_img