Tuesday, September 17, 2024
spot_img
spot_img
spot_img
spot_img
spot_img
spot_img
spot_img

Astrology : ಏಪ್ರಿಲ್‌ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಜೋತಿಷ್ಯ : 2024 ಏಪ್ರಿಲ್ 18ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

** ಮೇಷ ರಾಶಿ :
ಸಹನೆಯಿಂದ ಇರಬೇಕೆಂದು ಬಯಸಿದರೂ ಪರಿಸ್ಥಿತಿಯ ಒತ್ತಡದಿಂದ ಕೋಪದಿಂದ ವರ್ತಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಬೇಸರಕ್ಕೆ ಕಾರಣವಾಗುತ್ತದೆ. ನೆಮ್ಮದಿಗಾಗಿ ಸಂಗಾತಿ ಮತ್ತು ಮಕ್ಕಳೊಂದಿಗೆ ಧಾರ್ಮಿಕ ಕೇಂದ್ರಕ್ಕೆ ತೆರಳುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಮಟ್ಟದ ಆದಾಯ ದೊರೆಯುತ್ತದೆ. ಸ್ಚಂತ ಇಚ್ಚೆಯಿಂದ ಮಕ್ಕಳಿಗೆ ಚಿನ್ನದ ಒಡವೆಯನ್ನು ಖರೀದಿ ಮಾಡುವಿರಿ.

** ವೃಷಭ ರಾಶಿ :
ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲು ಸಮಯವಲ್ಲ. ಹಣವಿದ್ದರೂ ಸಾಧಾರಣ ವ್ಯಕ್ತಿಯಂತೆ ಜೀವನ ನಡೆಸುವ ಆಸೆಇರುತ್ತದೆ. ಕುಟುಂಬದ ಸದಸ್ಯರ ಸಾಮರಸ್ಯ ಬೆಳೆಸುವಿರಿ. ಅತಿಯಾದ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗಲಿದೆ. ಸರಿಯಾದ ಯೋಜನೆ ಇಲ್ಲದಿದ್ದರೆ ಖರ್ಚು ವೆಚ್ಚಗಳು ಕೈಮೀರುತ್ತವೆ. ಗೃಹಾಲಂಕಾರಕ್ಕೆ ಬೇಕಾದ ಪದಾರ್ಥಗಳನ್ನು ಕೊಳ್ಳುವಿರಿ.

ಇದನ್ನು ಓದಿ : ಹಾವು ಹಿಡಿಯುವುದು ಇಷ್ಟು ಸುಲಭನಾ.? ಹಾ, ನೀವು try ಮಾಡಬೇಡಿ ಹುಷಾರ್ ; ವಿಡಿಯೋ ನೋಡಿ.

** ಮಿಥುನ ರಾಶಿ :
ಸ್ನೇಹಿತರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚಲಿದೆ. ಬಂಧು-ಬಳಗದವರ ಆಗಮದಿಂದ ಖುಷಿಯಾಗುವಿರಿ. ದಿನಾಂತ್ಯಕ್ಕೆ ಮುಖ್ಯ ಕೆಲಸವನ್ನು ಮಾಡಲೇಬೇಕಾಗಿ ಬರುತ್ತದೆ. ದೇಹಾಲಸ್ಯವು ನಿಮ್ಮನ್ನು ಬಾಧಿಸುತ್ತದೆ. ಎಲ್ಲರ ಜೊತೆ ಸಂತಸದಿಂದ ಬಾಳುವಿರಿ. ಹೊಸ ಒಡವೆ ವಸ್ತುಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಶಕ್ತರಿಗೆ ಹೊಸ ಬಟ್ಟೆ ಮತ್ತು ಆಹಾರದ ವ್ಯವಸ್ಥೆ ಮಾಡುವಿರಿ.

** ಕಟಕ ರಾಶಿ :
ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಬೇಸರಕ್ಕೆ ಒಳಗಾಗುವಿರಿ. ಆಕಸ್ಮಿಕವಾಗಿ ಬರುವ ಸೋದರಿ ಅಥವ ಅವರ ಮಕ್ಕಳು ಸಂತಸವನ್ನು ಉಂಟು ಮಾಡುತ್ತಾರೆ. ದಿನಾಂತ್ಯಕ್ಕೆ ಕುಟುಂಬದ ಸದಸ್ಯರ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಹಿನ್ನಡೆ ಲಭಿಸದು. ಸ್ವಂತ ಶಾಲಾ ಕಾಲೇಜುಗಳನ್ನು ನಡೆಸುವವರಿಗೆ ಹೆಚ್ಚಿನ ಕೆಲಸ ಕಾರ್ಯಗಳಿರುತ್ತವೆ.

** ಸಿಂಹ ರಾಶಿ :
ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಶುಭಫಲಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮಕ್ಕಳ ಜೊತೆಯಲ್ಲಿ ಸಂತೋಷದಿಂದ ವೇಳೆ ಕಳಿಯುವಿರಿ. ಸಂಬಂಧಿಕರಿಂದ ಮಕ್ಕಳಿಗೆ ವಿಶೇಷ ಉಡುಗೊರೆ ದೊರೆಯಲಿದೆ. ಗೃಹಬಳಕೆಯ ಪದಾರ್ಥಗಳ ವ್ಯಾಪಾರದಲ್ಲಿ ಹೇರಳ ಸಂಪಾದನೆ ಇರುತ್ತದೆ.

** ಕನ್ಯಾ ರಾಶಿ :
ಹಣಕಾಸಿನ ಕೊರತೆ ಕಂಡುಬರುತ್ತದೆ. ವಾಹನಗಳ ಮಾರಾಟದಲ್ಲಿ ಲಾಭ ಗಳಿಸುವಿರಿ. ಹಣಕಾಸಿನ ಸಂಸ್ಥೆಯಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತ ಉದ್ಧಿಮೆ ಇದ್ದಲ್ಲಿ ಉದ್ಯೋಗಸ್ಥರಿಗೆ ವಿಶೇಷವಾದ ಸೌಲಭ್ಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹಳೆ ಸ್ನೇಹಿತರ ಭೇಟಿಯ ಅವಕಾಶ ಲಭಿಸುತ್ತದೆ. ಸಂಬಂಧಿಯೊಬ್ಬರ ನಡುವಿನ ಹಣಕಾಸಿನ ವಿವಾದವೊಂದು ಸುಖ್ಯಾಂತ್ಯಗೊಳ್ಳುತ್ತವೆ. ಒಂದಕ್ಕಿಂತಲೂ ಹೆಚ್ಚು ಆದಾಯ ಇರುತ್ತದೆ.

ಇದನ್ನು ಓದಿ : ನಿಂಬೆ ರಸ ಅಥವಾ ಎಳನೀರು ; ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು Best.?

** ತುಲಾ ರಾಶಿ :
ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಅನಿವಾರ್ಯವಾಗಿ ಪರಸ್ಥಳಕ್ಕೆ ತೆರಳುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರವನ್ನು ತಗೆದುಕೊಳ್ಳದಿರಿ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಹಾರದಲ್ಲಿ ಹೆಚ್ಚಿನ ಹಣ ಗಳಿಸುವಿರಿ. ವಿದ್ಯಾರ್ಜನೆಯ ನಡುವೆ ಮನರಂಜನೆಯತ್ತ ವಾಲುವಿರಿ. ತಾಯಿಯವರ ಜೊತೆಗೂಡಿ ಹೊಸ ವ್ಯಾಪಾರ ಆರಂಭಿಸುವ ಸೂಚನೆಗಳಿವೆ.

** ವೃಶ್ಚಿಕ ರಾಶಿ :
ಅಧಿಕಾರಿಗಳಾಗಿದ್ದಲ್ಲಿ ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ ನಿಮ್ಮದಾಗಲಿದೆ. ವಿದೇಶದಲ್ಲಿ ಉದ್ಯೋಗಕ್ಕೆ ದೊರೆಯುತ್ತದೆ. ಸರ್ಕಾರದ ಅದೀನದ ಸಂಘ ಸಂಸ್ಥೆಗಳ ನಿರ್ವಹಣೆ ಮಾಡುವಿರಿ. ಸಮಾಜದಲ್ಲಿ ಗೌರವ ಪಡೆಯುವಿರಿ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಕೊಟ್ಟ ಮಾತಿನ ಅನುಗುಣವಾಗಿ ಸಾಮಾಜಿಕ ಕೆಲಸಗಳ ಮಾಡಬೇಕಾಗುತ್ತದೆ. ದಿನಾಂತ್ಯಕ್ಕೆ ಪೂಜಾಕಾರ್ಯದಲ್ಲಿ ಪಾಲ್ಗೊಳ್ಳುವಿರಿ.

** ಧನುಸ್ಸು ರಾಶಿ :
ಕುಟುಂಬದ ಸದಸ್ಯರ ಜೊತೆಯಲ್ಲಿ ಸಂತೋಷದ ಕ್ಷಣವನ್ನು ಅನುಭವಿಸುವಿರಿ. ಉದ್ಯೋಗದಲ್ಲಿ ಆತಂಕದ ಕ್ಷಣಗಳು ಎದುರಾಗಲಿದೆ. ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗುವಿರಿ. ಸರಳವಾದ ಜೀವನ ಇಷ್ಟ ಪಡುವುದಿಲ್ಲ. ಅನಿರೀಕ್ಷಿತವಾಗಿ ಅಧಿಕಾರ ದೊರೆಯುತ್ತದೆ. ವಂಶದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ.

** ಮಕರ ರಾಶಿ :
ಪಾಲುದಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿಗಳು ಮನರಂಜನೆ ಮತ್ತು ಕ್ರೀಡಾಕೂಟಗಳಲ್ಲಿ ಕಾಲ ಕಳೆಯುತ್ತಾರೆ. ಕುಟುಂಬದಲ್ಲಿನ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರವಾಗಿ ಮಾನಸಿಕ ಒತ್ತಡವಿರುತ್ತದೆ. ಹೊಸ ಮನೆ ಕೊಳ್ಳಲು ಆತ್ಮೀಯರ ನೆರವು ದೊರೆಯುತ್ತದೆ.

ಇದನ್ನು ಓದಿ : Astrology : ಜನರ ಭಾವನೆಗಳೊಂದಿಗೆ ಆಟವಾಡುವ 4 ರಾಶಿಯವರು.!

** ಕುಂಭ ರಾಶಿ :
ಕಣ್ಣಿನ ದೋಷ ಇರುವವರು ಎಚ್ಚರಿಕೆ ವಹಿಸಬೇಕು. ದೊರೆಯುವ ಹೊಸ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುವಿರಿ. ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ನೆಮ್ಮದಿ ಇರದು. ಮಕ್ಕಳು ತಮ್ಮ ಗುರಿ ತಲುಪಲು ತಾಯಿಯ ಸಹಕಾರ ಬಯಸುತ್ತಾರೆ. ಯಾವುದೆ ವಿಚಾರವನ್ನಾದರೂ ಕಡೆಗಣ್ಣಿನಿಂದ ನೋಡದಿರಿ.

** ಮೀನ ರಾಶಿ :
ಆತಂಕದ ಕ್ಷಣಗಳನ್ನು ಸಮರ್ಥವಾಗಿ ಎದುರಿಸುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ಗಳಿಸುವಿರಿ. ವಿದ್ಯಾರ್ಥಿಗಳು ಮನರಂಜನೆಯ ನಡುವೆಯೂ ಕಲಿಕೆಯಲ್ಲಿ ಮುನ್ನಡೆಯುತ್ತಾರೆ. ಸೋದರಿಯ ಕುಟುಂಬದ ಮನಸ್ತಾಪ ಕಡಿಮೆಯಾಗುತ್ತದೆ. ಸ್ವಂತ ವಾಹನವನ್ನು ಬದಲಿಸುವಿರಿ. ಸೋದರಿಗಾಗಿ ದುಬಾರಿ ಉಡುಗೊರೆ ಕೊಳ್ಳುವಿರಿ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img