ಜನಸ್ಪಂದನ ನ್ಯೂಸ್, ಜಲ್ನಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಟ್ಟಡದಿಂದ ಹಾರಿಕೊಂಡು 8ನೇ ತರಗತಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಘಟನೆ ಕುರಿತಾಗಿ ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಎಂದಿನಂತೆ ಶಾಲೆಯ ನಿರ್ದಿಷ್ಟ ಬೆಳಗಿನ ವೇಳೆಯಾದ 7:30ರ ಸುಮಾರಿಗೆ ಬಾಲಕಿ (Student) ತನ್ನ ತರಗತಿಗೆ ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಒಮ್ಮಿಂದಲೇ Student ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಾಳೆ.
ಮೂರನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದ ತಕ್ಷಣ ಆಕೆಯ ತಂದೆಯನ್ನು ಸಂಪರ್ಕಿಸಿದರು. ಬಾಲಕಿಗೆ ತಾತ್ಕಾಲಿಕ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಳಿಕ, ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆಕೆಯ ಮೃತ್ಯ ಪಟ್ಟಿರುವುದಾಗಿ ಘೋಷಿಸಿದರು.
ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
ಪೊಲೀಸರು ಕೂಡಲೇ ಕ್ಯಾಂಪಸ್‌ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ವರದಿ ಆಕಸ್ಮಿಕ ಸಾವು (Suicide) ಸಾಧ್ಯತೆಗಳಿವೆ ಎಂದು ಸೂಚಿಸುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಎಲ್ಲಾ ಕೋನಗಳನ್ನು ದೃಷ್ಟಿಯದಲ್ಲಿಟ್ಟು ತನಿಖೆ ಮುಂದುವರಿಯುತ್ತಿದೆ.
ಬಾಲಕಿಯ ತಂದೆಯ ಪ್ರಕಾರ, “ಶಿಕ್ಷಕರ ನಿರಂತರ ಮಾನಸಿಕ ಕಿರುಕುಳದ ಒತ್ತಡದಿಂದಾಗಿ ಈ ಹಂತಕ್ಕೆ ತಲುಪಿದಳು” ಎಂದು ಆರೋಪಿಸಿದ್ದಾರೆ. ಕುಟುಂಬದವರು, “ಅವರು ಹಿಂದೆಂದಿಗೂ ಈ ರೀತಿಯ ಘಟನೆ ನಿರೀಕ್ಷಿಸಿರಲಿಲ್ಲ, ಆದರೆ ಮಕ್ಕಳ ಮನಃಸ್ಥಿತಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿತ್ತು” ಎಂದು ತಿಳಿಸಿದ್ದಾರೆ.
ಈ ಘಟನೆಗೂ ಮುಂಚೆ, ಜೈಪುರದಲ್ಲೂ ಇದೇ ಮಾದರಿ ದುರಂತ ಸಂಭವಿಸಿತ್ತು. ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿಕೊಂಡು 9 ವರ್ಷದ ಬಾಲಕಿ (Student) ಮೃತಪಟ್ಟಿದ್ದಳು. ಪ್ರಾಥಮಿಕ ಪರಿಶೀಲನೆಗಳಲ್ಲಿ ಆತ್ಮಹತ್ಯೆ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.
ಬಾಲಕಿ (Student) ಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ FIR ದಾಖಲೆ ಮಾಡಿರುವುದು, ಶಿಕ್ಷಣ ಸಂಸ್ಥೆಯ ಮತ್ತು ಸಿಬ್ಬಂದಿಯ ಜವಾಬ್ದಾರಿಯನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ.
ಪೊಲೀಸರು ಮತ್ತು ಶಾಲಾ ಆಡಳಿತ ತಂಡವು, ಶಾಲಾ ಆವರಣದಲ್ಲಿ ಈ ರೀತಿಯ ಘಟನೆ ನಡೆಯಲು ಕಾರಣವಾದ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.
Courtesy : TV9 Kannada
IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ಜನಸ್ಪಂದನ ನ್ಯೂಸ್, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
- ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
- ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
- ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
- ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
- ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
- ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
- ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
- “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
- ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
- Already Registered ನಲ್ಲಿ ಲಾಗಿನ್ ಮಾಡಿ
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
- ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







