Wednesday, September 17, 2025

Janaspandhan News

HomeJobSBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 – 5180 ಹುದ್ದೆಗಳಿಗೆ ಅರ್ಜಿ...
spot_img
spot_img
spot_img

SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 – 5180 ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ದೇಶದಾದ್ಯಂತ 5,180 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳನ್ನು ಭರ್ತಿ ಮಾಡಲಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ SBI ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 06 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಗಳ ವಿವರ :
  • ಇಲಾಖೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) .
  • ಹುದ್ದೆಗಳ ಸಂಖ್ಯೆ : 5,180.
  • ಹುದ್ದೆಯ ಹೆಸರು : ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್).
  • ಉದ್ಯೋಗ ಸ್ಥಳ : ಅಖಿಲ ಭಾರತ.
  • ಅರ್ಜಿ ವಿಧಾನ : ಆನ್‌ಲೈನ್.
ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.24,050/- ರಿಂದ ರೂ.64,480/- ರ ವರೆಗೆ ಸಂಬಳ ನೀಡಲಾಗುವುದು.
ವಯೋಮಿತಿ :
  • ಕನಿಷ್ಠ : 20 ವರ್ಷ.
  • ಗರಿಷ್ಠ : 28 ವರ್ಷ.
ವಯೋಮಿತಿ ಸಡಿಲಿಕೆ :
  • OBC (NCL) : 3 ವರ್ಷ.
  • SC/ST : 5 ವರ್ಷ.
  • PwBD (UR/EWS) : 10 ವರ್ಷ.
  • PwBD (OBC) : 13 ವರ್ಷ.
  • PwBD (SC/ST) : 15 ವರ್ಷ.
ಶೈಕ್ಷಣಿಕ ಅರ್ಹತೆ :
  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ (Degree) ಪೂರೈಸಿರಬೇಕು.
ಆಯ್ಕೆ ವಿಧಾನ :
  • ಪೂರ್ವಭಾವಿ ಪರೀಕ್ಷೆ.
  • ಮುಖ್ಯ ಪರೀಕ್ಷೆ.
  • ಮನೋಮಾಪನ ಪರೀಕ್ಷೆ.
  • ಗುಂಪು ಚರ್ಚೆ.
  • ಸಂದರ್ಶನ.
ಅರ್ಜಿ ಶುಲ್ಕ :
  • SC/ST/PwBD : ಯಾವುದೇ ಶುಲ್ಕ ಇಲ್ಲ.
  • ಸಾಮಾನ್ಯ/OBC/EWS : ರೂ.750/-
ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ SBI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
  2. ಸೂಚನೆಗಳನ್ನು ಸಂಪೂರ್ಣ ಓದಿ.
  3. ಆನ್‌ಲೈನ್ ಅರ್ಜಿ ಲಿಂಕ್‌ನಲ್ಲಿ ಕ್ಲಿಕ್ ಮಾಡಿ.
  4. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  5. ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕ ಪಾವತಿಸಿ.
  6. ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  7. ಅರ್ಜಿಯನ್ನು ಸಲ್ಲಿಸುವ ಮೊದಲು ಪರಿಶೀಲಿಸಿ.
  8. ಸಲ್ಲಿಸಿದ ನಂತರ ಮುದ್ರಣ ಪ್ರತಿಯನ್ನು ಉಳಿಸಿ.
ಪ್ರಮುಖ ದಿನಾಂಕಗಳು :
  • ಅರ್ಜಿಯ ಪ್ರಾರಂಭ : 06 ಆಗಸ್ಟ್ 2025.
  • ಅರ್ಜಿಯ ಕೊನೆ : 26 ಆಗಸ್ಟ್ 2025.
  • ಶುಲ್ಕ ಪಾವತಿ ಕೊನೆ ದಿನಾಂಕ : 26 ಆಗಸ್ಟ್ 2025
  • ಪೂರ್ವಭಾವಿ ಪರೀಕ್ಷೆ : ಸೆಪ್ಟೆಂಬರ್ 2025.
  • ಮುಖ್ಯ ಪರೀಕ್ಷೆ : ನವೆಂಬರ್ 2025.
 SBI ಪ್ರಮುಖ ಲಿಂಕ್‌ಗಳು :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಕಾತಿ 2025ಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲು ಮತ್ತು ಅಧಿಕೃತ ಮಾಹಿತಿಯನ್ನು ಪಡೆಯಲು ಕೆಳಗಿನ ಲಿಂಕ್‌ಗಳನ್ನು ಬಳಸಬಹುದು.

Disclaimer : The above given information is available On online, candidates should check it properly before applying. This is for information only.


“ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

Kidney

ಜನಸ್ಪಂದನ ನ್ಯೂಸ್‌, ಆರೋಗ್ಯ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ಖಂಡಿತ ನಿರ್ಲಕ್ಷಿಸಬೇಡಿ, ಅದು ಕಿಡ್ನಿ (Kidney) ಫೆಲ್ಯೂರ್‌ನ ಸೂಚನೆ ಆಗಿರಬಹುದು”.! ಬನ್ನಿ ಈ ಬಗ್ಗೆ ತಿಳಿಯೋಣ.!

ಮೂತ್ರಪಿಂಡಗಳು (Kidney) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸುವ ಫಿಲ್ಟರ್‌ನಂತಿವೆ. ಇವು ದೇಹದಿಂದ ಟಾಕ್ಸಿನ್ ಹಾಗೂ ಹೆಚ್ಚುವರಿ ದ್ರವವನ್ನು ತೆಗೆದುಹಾಕಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಮೂಳೆಗಳಿಗೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.

ಇದನ್ನು ಓದಿ : ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!

ಆದರೆ, ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದಲ್ಲಿ ವಿಷಕಾರಿ ವಸ್ತುಗಳು ಮತ್ತು ದ್ರವ ಸಂಗ್ರಹವಾಗಿ ಕಿಡ್ನಿ ಫೆಲ್ಯೂರ್ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು.

ಈ ಕಾಯಿಲೆಯ ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಆಯಾಸ ಅಥವಾ ದೌರ್ಬಲ್ಯದಂತೆ ಕಾಣುವ ಕಾರಣ. ಅನೇಕರು ಅದನ್ನು ನಿರ್ಲಕ್ಷಿಸುತ್ತಾರೆ ಆದರೆ, ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪರಿಸ್ಥಿತಿ ಮಾರಕವಾಗಬಹುದು. ಆದ್ದರಿಂದ ದೇಹದಲ್ಲಿ ಕಾಣುವ ಕೆಳಗಿನ ಬದಲಾವಣೆಗಳಿಗೆ ತಕ್ಷಣ ಗಮನ ನೀಡುವುದು ಅತ್ಯಗತ್ಯ.!

ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಕಿಡ್ನಿ (Kidney) ವೈಪಲ್ಯದ ಲಕ್ಷಣಗಳು :
1. ಕಾಲುಗಳಲ್ಲಿ ನೋವು ಮತ್ತು ಊತ :

ಪಾದಗಳು ಹಾಗೂ ಕಣಕಾಲುಗಳಲ್ಲಿ ಊತ ಉಂಟಾಗುವುದು ಮೂತ್ರಪಿಂಡ ವೈಫಲ್ಯದ ಪ್ರಮುಖ ಸೂಚನೆ. ಮೂತ್ರಪಿಂಡಗಳು ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರಹಾಕಲು ಅಸಮರ್ಥವಾಗುವಾಗ, ದ್ರವವು ದೇಹದ ಕೆಳಭಾಗದಲ್ಲಿ ಸಂಗ್ರಹವಾಗಿ ಊತ ಮತ್ತು ನೋವಿಗೆ ಕಾರಣವಾಗುತ್ತದೆ.

2. ನಿರಂತರ ಆಯಾಸ :

ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗಿ, ಅಂಗಾಂಶಗಳು ಮತ್ತು ಸ್ನಾಯುಗಳಿಗೆ ಆಮ್ಲಜನಕ ಸರಿಯಾಗಿ ತಲುಪದೆ, ವ್ಯಕ್ತಿ ಯಾವಾಗಲೂ ದಣಿದ ಹಾಗೆ ಅನುಭವಿಸುತ್ತಾರೆ.

ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!
3. ಚರ್ಮದಲ್ಲಿ ತುರಿಕೆ ಮತ್ತು ಬಣ್ಣ ಬದಲಾವಣೆ :

ರಕ್ತದಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ಸಂಗ್ರಹವಾಗುವ ಕಾರಣ ಚರ್ಮದಲ್ಲಿ ನಿರಂತರ ತುರಿಕೆ ಉಂಟಾಗಬಹುದು. ಕೆಲವೊಮ್ಮೆ ಚರ್ಮ ಒಣಗುವುದು, ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುವುದು ಸಹ ಕಿಡ್ನಿ ಸಮಸ್ಯೆಯ ಸೂಚನೆ ಆಗಬಹುದು.

4. ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ :

ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರದ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆ, ನೊರೆ ಮೂತ್ರ (ಪ್ರೋಟೀನ್ ಇರುವಿಕೆ), ಗಾಢ ಬಣ್ಣ ಅಥವಾ ರಕ್ತದ ಅಂಶ ಇರುವಿಕೆ. ಇವೆಲ್ಲವೂ ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವನ್ನು ಸೂಚಿಸುತ್ತವೆ.

5. ಉಸಿರಾಟದ ತೊಂದರೆ :

ಮೂತ್ರಪಿಂಡ (Kidney) ವೈಫಲ್ಯದಿಂದ ಹೆಚ್ಚುವರಿ ದ್ರವವು ಶ್ವಾಸಕೋಶದ ಸುತ್ತಲೂ ಸಂಗ್ರಹವಾಗಿ ಉಸಿರಾಟ ಕಷ್ಟವಾಗಬಹುದು. ಜೊತೆಗೆ ರಕ್ತಹೀನತೆಯಿಂದಾಗಿ ದೇಹಕ್ಕೆ ಆಮ್ಲಜನಕ ಕಡಿಮೆಯಾಗುವುದರಿಂದ, ಕಡಿಮೆ ಶಾರೀರಿಕ ಚಟುವಟಿಕೆಯಲ್ಲಿಯೂ ಉಸಿರಾಟ ತೊಂದರೆ ಉಂಟಾಗುತ್ತದೆ.

ಇದನ್ನು ಓದಿ : Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!

ಸಂಪಾದಕೀಯ :

ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಚಿಕಿತ್ಸೆ ಪಡೆದರೆ ಮೂತ್ರಪಿಂಡ (Kidney) ಗಳ ಆರೋಗ್ಯವನ್ನು ಕಾಪಾಡಬಹುದು ಮತ್ತು ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments