ಜನಸ್ಪಂದನ ನ್ಯೂಸ್‌, ನೌಕರಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಳಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಕೊನೆಯ ದಿನಾಂಕದ ಈಳಗಾಗಿ ಅರ್ಜಿ ಸಲ್ಲಿಸಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಪ್ರಕಾರ ತನ್ನ ಸಂಸ್ಥೆಯಲ್ಲಿ ಖಾಲಿ ವಿವಿಧ 3,323 ಹುದ್ದೆಗಳಿಗೆ ಅರ್ಜಿ (apply online) ಆಹ್ವಾನ ಮಾಡಿದೆ ಎಂದು ತಿಳಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online/) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Bengaluru : ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
SBI ನೇಮಕಾತಿ ವಿವರ :
  • ನೇಮಕಾತಿ ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI).
  • ಖಾಲಿ ಹುದ್ದೆಗಳ ಸಂಖ್ಯೆ : 3,323 ಹುದ್ದೆಗಳು.
  • ಅರ್ಜಿ ಸಲ್ಲಿಸುವ ವಿಧಾನ : Online ಮೂಲಕ.
ವಯೋಮಿತಿ :

SBI ನಲ್ಲಿ ಖಾಲಿ ಇರುವ ವಿವಿಧ 3,323 ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು,

  • ಕನಿಷ್ಟ 21 ವರ್ಷ ಮತ್ತು
  • ಗರಿಷ್ಟ 30 ವರ್ಷಗಳನ್ನು ಹೊಂದಿರಬೇಕು.
ಇದನ್ನು ಓದಿ :
ವೇತನ ಶ್ರೇಣಿ : IAF : SSLC/PUC ಪಾಸಾದವರಿಗೆ “C” ಗ್ರುಪ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

SBI ವೃತ್ತಿ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ ರೂ.25,000/- ಯಿಂದ ಗರಿಷ್ಠ ರೂ.65,000/- ವರೆಗೆ ತಿಂಗಳು ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ :

SBI ವೃತ್ತಿ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು,

  • ಸಾಮಾನ್ಯ/OBC,EWS ಅಭ್ಯರ್ಥಿಗಳಿಗೆ : ರೂ.750/- ರೂಪಾಯಿ ಹಾಗೂ
  • SC/ST/PWD ಅಭ್ಯರ್ಥಿಗಳಿಗೆ : ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ
  • ಅರ್ಜಿ ಶುಲ್ಕವನ್ನು Online ಮೂಲಕ ಅರ್ಜಿದಾರರು ಪಾವತಿ ಮಾಡಬಹುದು.
ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!
ವಿದ್ಯಾರ್ಹತೆ :
  • SBI ನಲ್ಲಿ ಖಾಲಿ ಇರುವ ವಿವಿಧ 3,323 ಹುದ್ದೆಗಳಿಗೆ ಅರ್ಜಿ ಸಲ್ಲಿಸುv ಅಭ್ಯರ್ಥಿಗಳು ಯಾವುದೇ ಶಿಕ್ಷಣ ಸಂಸ್ಥೆಯಿಂದ ವೈದ್ಯಕೀಯ, ಅಕೌಂಟೆನ್ಸಿ, ಚಾರ್ಟೆಡ್ ಅಕೌಂಟೆನ್ಸಿ, ಎಂಜಿನಿಯರಿಂಗ್ ಮತ್ತು ಇತರ ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದಂತೆ ವಿಷಯದಲ್ಲಿ ಪದವಿ ಹೊಂದಿರಬೇಕು.
ಆಯ್ಕೆ ವಿಧಾನ :
  • SBI ವೃತ್ತಿ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಸಂದರ್ಶನ ಹಾಗೂ ಭಾಷಾ ಪ್ರಾವಣ್ಯತೆ ಪರೀಕ್ಷೆ.
  • ಇತರ ವಿಧಾನಗಳನ್ನು ಅನುಸರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!
ಪ್ರಮುಖ ದಿನಾಂಕ :
  • SBI ವೃತ್ತಿ ಆಧಾರಿತ ಅಧಿಕಾರಿಗಳ (CBO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಮೇ, 2025.
ಪ್ರಮುಖ ಲಿಂಕ್‌ :

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.! 

ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತಜ್ಞರು ಫೇಸ್‌ ಮ್ಯಾಪಿಂಗ್‌ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್‌ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.

ಮುಖದ ವೈಶಿಷ್ಟ್ಯಗಳು ಮತ್ತು ನಮ್ಮ ದೇಹದ ಅಂಗಗಳ ನಡುವೆ ಆಕರ್ಷಕ ಸಂಪರ್ಕವಿದೆ, ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೇಸ್ ಮ್ಯಾಪಿಂಗ್ ಎಂದೂ ಕರೆಯುತ್ತಾರೆ.

ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!

ಫೇಸ್ ಮ್ಯಾಪಿಂಗ್ ಎನ್ನುವುದು ಚರ್ಮದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸಲು (To determine skin health) ವಿವಿಧ ಮುಖದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಒಂದು ರೀತಿಯ ಚರ್ಮದ ಪರೀಕ್ಷೆಯಾಗಿದೆ.

ಹಾರ್ಮೋನುಗಳ ಅಸಮತೋಲನ, ನಿರ್ಜಲೀಕರಣ, ಸೂಕ್ಷ್ಮತೆಗಳು ಮತ್ತು ನಿರ್ಬಂಧಿಸಲಾದ ರಂಧ್ರಗಳಂತಹ (Dehydration, sensitivities and blocked pores) ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಮುಖದ ಭಾಗಗಳನ್ನು ಗ್ರಿಡ್ ವಿಧಾನವನ್ನು ಬಳಸಿಕೊಂಡು ಗುರುತಿಸಲಾಗುತ್ತದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!

ವಿಶ್ಲೇಷಣೆಯನ್ನು ಬಳಸಿಕೊಂಡು, ಚರ್ಮದ ಆರೈಕೆ ತಜ್ಞರು ಸಾಮಾನ್ಯ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಸೂಚಿಸಬಹುದು.

* ಗಲ್ಲ ಮತ್ತು ದವಡೆ :
ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು (Hormonal imbalance) ಸೂಚಿಸಬಹುದು. ಇನ್ನೂ ಗಂಡು ಮಕ್ಕಳಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಅದೇ ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್‌ ಭೇಟಿ ಮಾಡಬೇಕು.

ಇದನ್ನು ಓದಿ : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!

* ಮೂಗು :
ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರತಿಬಿಂಬವೇ ಆಗಿದೆ ಈ ಪ್ರದೇಶ. ಅಲ್ಲದೇ ಹೃದಯ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದೆ. ಇಲ್ಲಿ ಯಾವುದೇ ಕೆಂಪು ಅಥವಾ ಕಲೆಗಳು ಅಧಿಕ ರಕ್ತದೊತ್ತಡ, ಕಳಪೆ ರಕ್ತಪರಿಚಲನೆ (Poor circulation) ಅಥವಾ ಹೃದಯ ರಕ್ತನಾಳದ ಒತ್ತಡದಂತಹ ಆಧಾರವಾಗಿರುವ ಸಮಸ್ಯೆಗಳ ಸಂಕೇತವಾಗಿರಬಹುದು, ನಮ್ಮ ಹೃದಯದ ಆರೋಗ್ಯವನ್ನು ಹತ್ತಿರದಿಂದ ನೋಡಲು ಪ್ರೋತ್ಸಾಹಿಸುತ್ತದೆ.

* ಹಣೆ :
ಹಣೆಯ ಮೇಲಿನ ಬಿರುಕುಗಳು ಕಳಪೆ ಜೀರ್ಣಕ್ರಿಯೆ, ಉಬ್ಬುವುದು ಅಥವಾ ಒತ್ತಡವನ್ನು ಸೂಚಿಸಬಹುದು, ಜೀರ್ಣಕ್ರಿಯೆ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದೆ. ಸ್ಪಷ್ಟವಾದ ಚರ್ಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಂತರಿಕ ಅಸಮತೋಲನವನ್ನು ಪರಿಹರಿಸುವ ಅಗತ್ಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

* ಕೆನ್ನೆಗಳು :
ಈ ಪ್ರದೇಶವು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದೆ, ಕಲೆಗಳು ಅಥವಾ ಅಸಮತೋಲನದ ಮೂಲಕ ಉಸಿರಾಟದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ಸಂಕೇತಿಸುತ್ತದೆ, ಉಸಿರಾಟ ಮತ್ತು ಶ್ವಾಸಕೋಶದ ಕಾರ್ಯವನ್ನು ಪರಿಹರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.

* ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ಕಣ್ಣಿನ ಕೆಳಗೆ ತುಂಬಾ ನೀರು ಸೇರಿದ ರೀತಿ ಇದ್ದರೆ ಅಥವಾ ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ (It means that the kidneys are not working properly). ಲೇಟ್‌ ನೈಟ್‌ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು.

ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!

* ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ, ಬಾಯಿಯ ಎರಡೂ ಕಡೆಗಳಲ್ಲಿಯೂ ಮೊಡವೆ ಉಂಟಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.