ಜನಸ್ಪಂದನ ನ್ಯೂಸ್, ನೌಕರಿ : ರೈಲ್ವೆ ನೇಮಕಾತಿ ಮಂಡಳಿ (RRB) NTPC ಪದವಿ ಹಾಗೂ ಪದವಿಪೂರ್ವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 4, 2025 ರವರೆಗೆ ವಿಸ್ತರಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಸಲ್ಲಿಸಬಹುದು.
ಈ ನೇಮಕಾತಿ ಅಭಿಯಾನದಡಿ ಒಟ್ಟು 8,868 ತಾಂತ್ರಿಕೇತರ ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ.
ಇವುಗಳಲ್ಲಿ 5,810 ಹುದ್ದೆಗಳು ಪದವಿ ವಿಭಾಗಕ್ಕೆ, ಮತ್ತು 3,058 ಹುದ್ದೆಗಳು ಪದವಿಪೂರ್ವ ವಿಭಾಗಕ್ಕೆ ಹೊಂದಿವೆ.
ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.
ಅಭ್ಯರ್ಥಿಗಳು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ಓದಿ ತಿಳಿದುಕೊಳ್ಳಬಹುದು.
ಲಭ್ಯವಿರುವ ಹುದ್ದೆಗಳ ಪಟ್ಟಿ :
ಪದವಿ ಹಂತದ ಹುದ್ದೆಗಳು :
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ | 161 |
| ಸ್ಟೇಷನ್ ಮಾಸ್ಟರ್ | 615 |
| ಸರಕು ರೈಲು ವ್ಯವಸ್ಥಾಪಕ | 3,416 |
| ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ | 921 |
| ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ | 638 |
| ಟ್ರಾಫಿಕ್ ಅಸಿಸ್ಟೆಂಟ್ | 59 |
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
ಪದವಿಪೂರ್ವ ಹುದ್ದೆಗಳು :
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ | 2,424 |
| ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ | 394 |
| ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ | 163 |
| ರೈಲ್ವೇ ಕ್ಲರ್ಕ್ | 77 |
ವಯೋಮಿತಿ :
- ಪದವಿ ಹಂತ : 18 ರಿಂದ 33 ವರ್ಷ.
- ಪದವಿಪೂರ್ವ ಹಂತ : 18ರಿಂದ 30 ವರ್ಷ.
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
ವಯೋಮಿತಿ ಸಡಿಲಿಕೆ:
- SC/ST : 5 ವರ್ಷ.
- OBC : 3 ವರ್ಷ.
- ಅಭ್ಯರ್ಥಿಯ ವಯಸ್ಸನ್ನು ಜನವರಿ 1, 2026ರ ಪ್ರಕಾರ ಲೆಕ್ಕಹಾಕಲಾಗುತ್ತದೆ.
ಶೈಕ್ಷಣಿಕ ಅರ್ಹತೆ :
- ಪದವಿ ಹಂತ :
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಕಡ್ಡಾಯ. - ಪದವಿಪೂರ್ವ ಹಂತ :
ಮಾನ್ಯತೆಯ ಮಂಡಳಿಯಿಂದ 10+2 (PUC / ಮಧ್ಯಂತರ) ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ (General) : ರೂ.500/-
- ಮೀಸಲು ವರ್ಗಗಳು : ರೂ.250/-
ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಅರ್ಜಿ ಶುಲ್ಕದ ವಿವರ ಹಾಗೂ ಇತರ ನಿಯಮಗಳನ್ನು RRB ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗುವುದು.
RRB NTPC ನೇಮಕಾತಿ 2025ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
- ಮೊದಲು ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.
- ಮುಖ್ಯ ಪುಟದಲ್ಲಿ ಕಾಣುವ RRB NTPC 2025 Recruitment Notification ಲಿಂಕ್ ಕ್ಲಿಕ್ ಮಾಡಿ.
- ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ.
- ಈಗ ನೋಂದಣಿ (Registration) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಲಾಗಿನ್ ಆದ ನಂತರ, ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿರುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ.
- ಸಂಬಂಧಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ Submit ಬಟನ್ ಕ್ಲಿಕ್ ಮಾಡಿ.
ಅರ್ಜಿಯನ್ನು ಸಲ್ಲಿಸಿದ ನಂತರ, ಅದರ ಪ್ರಿಂಟ್ ಅಥವಾ PDF ಪ್ರತಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಲು ಸಲಹೆ ನೀಡಲಾಗಿದೆ.
ಮುಖ್ಯ ಸೂಚನೆ :
RRB ನಿಂದ ಯಾವುದೇ ಹೊಸ ಅಪ್ಡೇಟ್, ವೇಳಾಪಟ್ಟಿ ಅಥವಾ ಹುದ್ದೆಗಳ ಬದಲಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಅಧಿಕೃತ ವೆಬ್‌ಸೈಟ್ ಮತ್ತು ಅಧಿಸೂಚನೆಯಲ್ಲೇ ಪರಿಶೀಲಿಸಬೇಕು.
Bathroom ಗೆ ತಾಸುಗಟ್ಟಲೆ ಹೋಗುತ್ತಿದ್ದ ಪತ್ನಿ ; ದೃಶ್ಯ ನೋಡಿ ಪತಿ ಶಾಕ್.

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.
ನಿಜವಾದ ಪತಿಯ ಅನುಮಾನ :
ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :
ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.
ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.
ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,
- “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
- “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
- “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.
ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!
ವಿಡಿಯೋ ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :
ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







