ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿನ ದಿನಗಳಲ್ಲಿ, ಮನೆಗಳಲ್ಲಿ RO ವಾಟರ್ (Reverse Osmosis) ಸೇವನೆ ಬಹಳ ಹೆಚ್ಚಾಗಿದೆ. ಬಹುತೇಕ ಜನರು ಇದನ್ನು ಶುದ್ಧ, ಕಲ್ಮಷ ರಹಿತ ನೀರು ಎಂದು ಭಾವಿಸುತ್ತಾರೆ.
ಆರ್‌ಓ ವಾಟರ್ ಫಿಲ್ಟರ್‌ಗಳು ನೀರನ್ನು ಶುದ್ಧೀಕರಿಸುತ್ತವೆ, ಆದರೆ ಈ ಪ್ರಕ್ರಿಯೆಯಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಇತರ ಅಗತ್ಯ ಖನಿಜಗಳು ನೀರಿನಿಂದ ತೆಗೆದುಹಾಕಲ್ಪಡುತ್ತವೆ.
ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳ ಪ್ರಕಾರ, ಈ ನೀರು ದೀರ್ಘಕಾಲ ಸೇವಿಸಿದರೆ ದೇಹಕ್ಕೆ “ಸ್ಲೋ ಪಾಯಿಸನ್” ಆಗಿ ಕೆಲಸ ಮಾಡಬಹುದು. ನೀರಿನಲ್ಲಿ ಬ್ಯಾಕ್ಟೀರಿಯಾ ಕೊಲ್ಲಲಾಗುತ್ತದಾದರೂ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ತೆಗೆದುಹಾಕುವುದು ಆರೋಗ್ಯಕ್ಕೆ ಹಾನಿಕಾರಕ.
ಇದನ್ನು ಓದಿ : “ನೀವು Night ಲೈಟ್ ಆನ್ ಇಟ್ಟು ಮಲಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ.”
RO ವಾಟರ್ ಸೇವನೆಯ ಹಾನಿ :
1. ಖನಿಜ ಕೊರತೆ :
RO ಫಿಲ್ಟರ್ ಮೂಲಕ ನೀರಿನಲ್ಲಿ ಇರುವ ಕ್ಯಾಲ್ಸಿಯಂ, ಮೆಗ್ನೀಶಿಯಂ, ಸಿಂಕ್ಲಿಕ್ ಮುಂತಾದ ಅಗತ್ಯ ಖನಿಜಗಳು ತೆಗೆದುಹಾಕಲ್ಪಡುತ್ತವೆ. ಇದರಿಂದ ದೀರ್ಘಕಾಲದಲ್ಲಿ ಹಲ್ಲು, ಎಲುಬು, ಹೃದಯ ಮತ್ತು ಸ್ನಾಯು ಆರೋಗ್ಯಕ್ಕೆ ಸಮಸ್ಯೆಗಳು ಉಂಟಾಗಬಹುದು.
2. ಮೀನು ಮತ್ತು ಗಿಡಗಳಿಗೆ ಹಾನಿ :
- ಅಕ್ವೇರಿಯಂನಲ್ಲಿನ ಮೀನು ಆರ್‌ಓ ನೀರು ಸೇವಿಸಿದರೆ ಸಾಯುತ್ತವೆ.
- ಮನೆ ಹೂವುಗಳಿಗೆ ಹಾಕಿದರೆ ಗಿಡಗಳು ಒಣಗುತ್ತವೆ.
- ಹಸುಗಳಿಗೆ ಕುಡಿಸಿದರೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ.
3. ಬಾಯಾರಿಕೆ ಮಾತ್ರ ತಣಿಯುತ್ತದೆ :
ಆರ್‌ಓ ನೀರು ಬಾಯಾರಿಕೆ ತಣಿಸುತ್ತರೂ, ದೇಹಕ್ಕೆ ಪೋಷಕಾಂಶಗಳ ಲಾಭ ನೀಡುವುದಿಲ್ಲ.
ಇದನ್ನು ಓದಿ : Potato : ಹಸಿರು ಬಣ್ಣ ಅಥವಾ ಮೊಳಕೆ ಒಡೆದ ಆಲೂಗಡ್ಡೆ ಆರೋಗ್ಯಕ್ಕೆ ಗಂಭೀರ ಅಪಾಯ.
ತಜ್ಞರ ಅಭಿಪ್ರಾಯ :
- “ಆರ್‌ಓ ನೀರು ʼಸ್ಲೋ ಪಾಯಿಸನ್ʼ ಆಗಿ ದೇಹಕ್ಕೆ ಹಾನಿ ಮಾಡುತ್ತದೆ” – ಶಗುನ್ ವಶಿಷ್ಠ ಪಾಡ್‌ಕಾಸ್ಟ್.
- “RO ಉದ್ಯಮವು ಮಾಫಿಯಾವಾಗಿ ಬೆಳೆದಿದ್ದು, ಜನರ ಮೆದುಳನ್ನು ಪ್ರಭಾವಿಸುತ್ತದೆ. ಸೆಲೆಬ್ರಿಟಿಗಳ ಜಾಹೀರಾತು ಮತ್ತು ಮಾರ್ಕೆಟಿಂಗ್ ಮೂಲಕ ಜನರು ಈ ನೀರನ್ನು ಶುದ್ಧವೆಂದು ನಂಬುತ್ತಾರೆ”. – ಎ. ಆರ್. ಶಿವಕುಮಾರ್, ಹಿರಿಯ ವಿಜ್ಞಾನಿ.
ವಿಜ್ಞಾನ ಮತ್ತು ಆರೋಗ್ಯ ಸಂಸ್ಥೆಗಳ ಎಚ್ಚರಿಕೆ :
ವಿಶ್ವ ಆರೋಗ್ಯ ಸಂಸ್ಥೆ 2019 ರ ವರದಿಯಲ್ಲಿ ಸೂಚಿಸಿದೆ, RO ವಾಟರ್ ನೀರಿನಲ್ಲಿ ಇರುವ ಬ್ಯಾಕ್ಟೀರಿಯಾ ಕೊಲ್ಲುವಷ್ಟೇ ಅಲ್ಲದೇ, ಖನಿಜಗಳನ್ನೂ ತೆಗೆದುಹಾಕುತ್ತದೆ.
ಸರ್ಕಾರಗಳು “ಶುದ್ಧ ಕುಡಿಯುವ ನೀರು ಘಟಕ” ಸ್ಥಾಪಿಸುತ್ತಿರುವುದನ್ನು ಕೆಲ ತಜ್ಞರು ಆತಂಕಕರವೆಂದು ಹೇಳಿದ್ದಾರೆ.
RO ನೀರು ಸೇವನೆಯಿಂದ ತಪ್ಪಿಸಲು ಸಲಹೆಗಳು :
- ಆರ್‌ಓ ನೀರನ್ನು ಮಾತ್ರ ಕುಡಿಯುವುದು ತಪ್ಪಿಸಿ, ಖನಿಜಗಳನ್ನು ಹೊಂದಿರುವ ನೀರು ಅಥವಾ ಮಿನರಲ್ ವಾಟರ್ ಸೇವಿಸಬಹುದು.
- ಅಗತ್ಯವಿದ್ದರೆ, ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಸಪ್ಲಿಮೆಂಟ್‌ಗಳು ಸೇವಿಸಿ.
- ಮನೆಯ ಅಕ್ವೇರಿಯಂ ಅಥವಾ ಗಿಡಗಳಿಗೆ ಆರ್‌ಓ ನೀರು ಬದಲು ಫಿಲ್ಟರ್ಡ್ ಅಥವಾ ನೈಸರ್ಗಿಕ ನೀರು ಬಳಸುವುದು ಸೂಕ್ತ.
- ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ನೀರಿನ ಪರಿಮಾಣದ ಬಗ್ಗೆ ಗಮನವಿಟ್ಟು ಸೇವಿಸಬೇಕು.
ಇದನ್ನು ಓದಿ : ಪಾರ್ಶ್ವವಾಯು (Stroke) ಬರುವ ಮುನ್ನವೇ ದೇಹ ನೀಡುತ್ತೆ ಎಚ್ಚರಿಕೆ ; ತಡೆಗಟ್ಟುವ ಸಲಹೆಗಳು.
ಡಿಸ್ಕ್ಲೈಮರ್:
ಈ ಲೇಖನದಲ್ಲಿ ನೀಡಿರುವ ಮಾಹಿತಿಗಳು ಜನರಿಗೆ ಅರಿವು ಮೂಡಿಸುವ ಉದ್ದೇಶಕ್ಕಾಗಿ ಮಾತ್ರ. RO ನೀರು ಅಥವಾ ಯಾವುದೇ ನೀರಿನ ಸೇವನೆ ಸಂಬಂಧಿ ತೀರ್ಮಾನಕ್ಕೆ ಮುನ್ನ ತಜ್ಞ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ. ಈ ಲೇಖನವು ವೈದ್ಯಕೀಯ ಸಲಹೆಯ ಪರ್ಯಾಯವಲ್ಲ.
Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್, ಮೈಸೂರು : ಭಾನುವಾರ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ, ಮೈಸೂರಿನಿಂದ ತುಮಕೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಒಬ್ಬ ಮಹಿಳೆಯು ಉಚಿತ (Free) ಟಿಕೆಟ್ ಪಡೆದಿದ್ದರೂ ಮಾರ್ಗ ಮಧ್ಯೆ ಇಳಿದು ಬಸ್ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಮೈಸೂರಿನಿಂದ ಬಸ್ ಹತ್ತಿ, ಶಕ್ತಿ ಯೋಜನೆಯಡಿ ಉಚಿತ (Free) ಟಿಕೆಟ್ ಪಡೆದಿದ್ದರೇ, ಬಸ್ ಮಾರ್ಗ ಮಧ್ಯದಲ್ಲಿ ಇಳಿದು ಹೋಗಿದ್ದಾರೆ.
ಇದನ್ನು ಗಮನಿಸಿದ ಬಸ್ ಕಂಡಕ್ಟರ್ ನಿಯಮಾನುಸಾರ ಪ್ರಶ್ನೆ ಕೇಳಿದ್ದರು. ಆದರೆ ಮಹಿಳೆ ಬಾಯಿಗೆ ಬಂದಂತೆ ಉತ್ತರ ನೀಡಿ, ಕಂಡಕ್ಟರ್‌ನ್ನು ಶರ್ಟ್ ಕಾಲರ್ ಹಿಡಿದು ಎಳೆದಿದ್ದಾರೆ.
ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.
ಬಸ್ ಕಂಡಕ್ಟರ್ ಹೇಳೋದೇನು?
“ಶಕ್ತಿ ಯೋಜನೆಯಡಿ Free ಟಿಕೆಟ್ ಪಡೆದ ಮಹಿಳೆಯರು ಮಾರ್ಗ ಮಧ್ಯೆ ಬಸ್‌ನಿಂದ ಇಳಿದಾಗ, ನಾವು ಸಮಸ್ಯೆಯನ್ನು ಎದುರಿಸುತ್ತೇವೆ. ಟಿಕೆಟ್ ಚೆಕ್ ಮಾಡುವ ಸಂದರ್ಭದಲ್ಲಿ ನಾವು ಉತ್ತರ ನೀಡಬೇಕಾಗುತ್ತದೆ. ಹೀಗಾಗಿ Free ಟಿಕೆಟ್ ಪಡೆದ ಹಿನ್ನಲೆಯಲ್ಲಿ ಮಾರ್ಗ ಮಧ್ಯೆ ಇಳಿಯದಂತೆ ಮನವಿ ಮಾಡಿದೆವು. ಆದರೆ ಮಹಿಳೆ ಬಾಯಿಗೆ ಬಂದಂತೆ ಮಾತಾಡಿ, ಶರ್ಟ್ ಕಾಲರ್ ಹಿಡಿದು ಎಳೆದರು.” ಎಂದಿದ್ದಾರೆ.
ಸಾರಿಗೆ ನೌಕರರ ಸುರಕ್ಷತೆ ಪ್ರಶ್ನೆ:
ಈ ಘಟನೆಯನ್ನು ಸಂಬಂಧಪಟ್ಟ ಜಿಲ್ಲಾ ಸಾರಿಗೆ ಇಲಾಖೆ ಮತ್ತು ಸಾರ್ವಜನಿಕರ ಗಮನಕ್ಕೆ ತಲುಪಿದೆ. ಮಹಿಳೆಯ ದೈಹಿಕ ಹಲ್ಲೆ, ಸರ್ಕಾರಿ ಉದ್ಯೋಗಿಯ ಮೇಲಿನ ಅಗೌರವ ಹಾಗೂ ಸೇವಾ ಪರಿಸರವನ್ನು ಕುಗ್ಗಿಸುವಂತಹ ವರ್ತನೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ಸರಕಾರವು ಸಾರಿಗೆ ಸಿಬ್ಬಂದಿಯ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಇದನ್ನು ಓದಿ : ಕ್ಯಾಥೋಲಿಕ್ School ಮೇಲೆ ದಾಳಿ : 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ.
ಸಾರ್ವಜನಿಕ ಪ್ರತಿಕ್ರಿಯೆ :
ಶಕ್ತಿ ಯೋಜನೆ (Free Bus) ಜಾರಿ ಬಳಿಕ, ವಿವಿಧ ಬಸ್ ಸೇವೆಗಳಲ್ಲಿ ಪ್ರತಿದಿನ ಮೌಖಿಕ ನಿಂದನೆ, ವಾಗ್ವಾದ ಮತ್ತು ದೈಹಿಕ ಹಲ್ಲೆಗಳ ಘಟನೆಗಳು ವರದಿಯಾಗುತ್ತಿವೆ. ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರು ಇಂತಹ ದೌರ್ಜನ್ಯ ಮತ್ತು ಅಸುರಕ್ಷಿತ ವಾತಾವರಣವನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ನೀಡಿದ್ದಾರೆ.
ಉಚಿತ (Free) ಟಿಕೆಟ್ ಪಡೆದು ಹಲ್ಲೆ ಮಾಡಿದ ಮಹಿಳೆಯ ವಿಡಿಯೋ :
Every Free Ride Shouldn’t Come at the Cost of Employee Safety
Every single day, incidents of verbal abuse, harassment, arguments, and even physical assaults are being reported across various bus services. Transport employees, who are dedicated to serving lakhs of passengers, are… pic.twitter.com/B53kWcS1Cu
— Karnataka Portfolio (@karnatakaportf) November 24, 2025
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







