Sunday, December 22, 2024
HomeViral Videoಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!
spot_img

ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ವೈರಲ್ ವಿಡಿಯೋ : ಯುವಕನೋರ್ವ ಮಹಿಳೆಯರ ಒಳ ಉಡುಪು (Underwear) ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್ (Reels) ಮಾಡಲು ಹೋಗಿ ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ಹರಿಯಾಣದ ಪಾಣಿಪತ್​ನಲ್ಲಿ (Panipat in Haryana) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಪಾಣಿಪತ್​ನ ಇನ್ಸಾರ್​ ಮಾರ್ಕೆಟ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಸಧ್ಯ ಯುವಕನನ್ನು ಜನರು ಹಿಗ್ಗಾಮುಗ್ಗಾ ಥಳಿಸುತ್ತಿರುವ (beating) ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ಇನ್ನೂ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ (No complaint filed) ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ಸಾರ್​ ಮಾರುಕಟ್ಟೆಯಲ್ಲಿರುವ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಯುವಕನ ಮೇಲೆ ಚಪ್ಪಲಿ (slippers) ಹಾಗೂ ಇನ್ನಿತರೆ ವಸ್ತುಗಳಿಂದ ಹಲ್ಲೆ (attack) ಮಾಡುತ್ತಿದ್ದಾರೆ. ಈ ವೇಳೆ ಯುವಕ ಕ್ಷಮೆ ಕೋರಿ (excuse) ತನ್ನನ್ನು ಬಿಟ್ಟು ಬಿಡುವಂತೆ ಮನವಿ ಮಾಡುವುದನ್ನು ವೈರಲ್​ ವಿಡಿಯೋದಲ್ಲಿ ಕಾಣಬಹುದು.

ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ ಯುವಕ ಮಹಿಳೆಯರ ಒಳ ಉಡುಪು ಧರಿಸಿ ಬಂದು ರೀಲ್ಸ್​ ಮಾಡಲು ಶುರು ಮಾಡಿದ್ದಾನೆ. ಈ ದೃಶ್ಯ ಕಂಡ ಮಹಿಳೆಯರು ಆತನಿಗೆ ರೀಲ್ಸ್ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಈ ವೇಳೆ ಯುವಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಅಂಗಡಿ ಮಾಲೀಕರು (shop owner) ಆತನನ್ನು ಥಳಿಸಿ ಈ ರೀತಿ ಮಾಡದಂತೆ ಎಚ್ಚರಿಕೆ (warning) ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ :

ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್‌ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?

ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲ (winter) ಶುರುವಾದ ಕೂಡಲೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಂತಹ (heart attack and brain stroke) ಕಾರಣಗಳಿಂದ ಸಾಯುವವರ ಸಂಖ್ಯೆಯೂ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಇದನ್ನು ಓದಿ : ಒಂದು ಭಾಷೆಯ ಅಳಿವು ಉಳಿವಿನ ಮೂಲ ಸಮಸ್ಯೆಯೇ ಶಿಕ್ಷಣ ಮಾಧ್ಯಮ : ಪ್ರೋ. ಅಕ್ಕಿ.

ಹೃದ್ರೋಗ ಮತ್ತು ತಾಪಮಾನದ (Heart disease and temperature) ನಡುವಿನ ಸಂಬಂಧವನ್ನು ಸ್ವೀಡನ್​ನ ಲುಂಡ್ ವಿಶ್ವವಿದ್ಯಾನಿಲಯದ (Lund University, Sweden) ಸಂಶೋಧನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಮ್ಮಿಯಾದಾಗ (Below zero degrees) ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು (Researchers) ಕಂಡು ಹಿಡಿದಿದ್ದಾರೆ.

ಈ ಸೀಸನ್ ನಲ್ಲಿ ರಕ್ತನಾಳಗಳು ಕಿರಿದಾಗುವುದರಿಂದ (Blood vessels narrow( ರಕ್ತದೊತ್ತಡವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ, ಬೆಳಿಗ್ಗೆ ತಾಪಮಾನ ಕುಸಿತದ ಹಿನ್ನೆಲೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದಾಗ, ಹೃದಯಾಘಾತದ ಅಪಾಯವು ಒಂದೇ ದಿನದಲ್ಲಿ 5 ಬಾರಿ ಹೆಚ್ಚಾಗುತ್ತದೆ (The risk of heart attack increases 5 times in a single day) ಎಂದು ಸಂಶೋಧನೆಯಿಂದ ಕಂಡುಬಂದಿದೆ.

ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!

ಬಲವಾದ ಶೀತ ಗಾಳಿ, ಆರ್ದ್ರತೆ ಹೆಚ್ಚಳ ಹಾಗೂ ಸೂರ್ಯನ ಬೆಳಕಿನ ಕೊರತೆಯಿಂದ (Strong cold winds, increased humidity and lack of sunlight) ದೇಹದಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ನೇರವಾಗಿ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು.

ರಕ್ತನಾಳಗಳು ಶೀತಕ್ಕೆ ಪ್ರತಿಕ್ರಿಯಿಸಿದಂತೆ ತೀವ್ರ ನಡುಕ ಮತ್ತು ಅಪಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರಿಂದ ಹೃದಯ ಸಮಸ್ಯೆ ಇರುವವರು ಈ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು (Health experts) ಅಭಿಪ್ರಾಯ ಪಡುತ್ತಾರೆ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಬಹಳಷ್ಟು ಮಂದಿ. ಆದರೆ ಸಾಕಷ್ಟು ನೀರು ಸೇವಿಸಿದರೆ ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ. ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು (To expel impurities from the body) ಅವಶ್ಯಕವಾಗಿದ್ದು, ಹೃದಯವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ನೀರು ಸಹಾಯ ಮಾಡುತ್ತದೆ.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮವು (Regular exercise) ಅವಶ್ಯಕವಾಗಿದೆ. ಅಲ್ಲದೇ, ನಿಮ್ಮ ಹೃದಯವು ಗಟ್ಟಿಮುಟ್ಟಾಗಿರುತ್ತದೆ.

ಧೂಮಪಾನವನ್ನು (Quit smoking) ತ್ಯಜಿಸುವುದರಿಂದ ಹೃದಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಇದನ್ನು ಓದಿ : ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಸೇವಿಸುವುದರಿಂದ ಆಗುವ benefits ಗೊತ್ತೇ.?

ಈ ಚಳಿಗಾಲದಲ್ಲಿ ಜೀವಸತ್ವಗಳು, ಒಮೆಗಾ -3 ಉತ್ಕರ್ಷಣ ನಿರೋಧಕಗಳು (Antioxidants), ಖನಿಜಗಳು ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವನ್ನು (Food rich in minerals and fatty acids) ಸೇವಿಸುವುದು ಉತ್ತಮ.

Disclaimer : ಇಂಟರ್ನೆಟ್ ನಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments