ಜನಸ್ಪಂದನ ನ್ಯೂಸ್, ಡೆಸ್ಕ್ : ಮೃಗಾಲಯವೊಂದರಲ್ಲಿ ಕೆಲ ದಿನಗಳ ಹಿಂದೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ (Tug of war competition) ಸಿಂಹಿಣಿಯು ಬಾಡಿ ಬಿಲ್ಡರ್‌ನೊಂದಿಗೆ ಸ್ಪರ್ಧಿಸಿ ಅವರನ್ನೇ ಮೀರಿಸಿದ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ವ್ಯಕ್ತಿಯೊಬ್ಬರು ದಪ್ಪ ಹಗ್ಗವನ್ನು ಎಳೆಯಲು (To pull a thick rope) ತಿಣಕಾಡಿದ್ದಾರೆ. ಅವರು ಇಷ್ಟು ತ್ರಾಸ ತೊಗೊಂಡು ಹಗ್ಗ ಎಳೆಯುತ್ತಿದ್ದಾರೆ. ಇತ್ತ ನೋಡಿದಾಗ ಇನ್ನೊಂದು ಬದಿಯಲ್ಲಿ ನಿಂತ ವ್ಯಕ್ತಿ ಇವರಿಗಿಂತ ಶಕ್ತಿಶಾಲಿ (Stronger than him) ಎಂಬುದು ವಿಡಿಯೋದಿಂದ ನಮಗೆ ತಿಳಿಯುತ್ತದೆ.
ಆದರೆ ಹಗ್ಗದ ಇನ್ನೊಂದು ತುದಿಯನ್ನು ಹಿಡಿದವರು ಯಾರು ಎಂಬ ಪ್ರಶ್ನೆ ವಿಡಿಯೋ ನೋಡುವವರ ತಲೆಗೆ ಬಂದೇ ಬರುತ್ತದೆ.
ಇದನ್ನು ಓದಿ : ಮೊದಲ ಪ್ರಯತ್ನದಲ್ಲಿ IAS ಪಾಸಾದ ಸ್ವಧಾ ದೇವ್ ಸಿಂಗ್ ಅವರ ಯಶಸ್ಸಿನ ಕಥೆ.!
ಎಷ್ಟೇ ಜೋರಾಗಿ ಎಳೆದರೂ ಎದುರಾಳಿಯನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ. ಹಗ್ಗ ಎಳೆದು ಎಳೆದು ವ್ಯಕ್ತಿಯು ಆಯಾಸಗೊಂಡರು. ಕೊನೆಗೆ ಆಕಡೆಗೆ (ಎದುರಾಳಿಯ ಕಡೆಗೆ) ಕ್ಯಾಮೆರಾ ತಿರುಗಿಸಿದಾಗ ಎಲ್ಲರೂ ಒಮ್ಮೆ ಶಾಕ್ ಆಗಿದ್ದಾರೆ.
ಎದುರಾಳಿ ಮತ್ಯಾರೂ ಅಲ್ಲ ಮೃಗಾಲಯದಲ್ಲಿರುವ ಸಿಂಹಿಣಿ (A lioness in a zoo). ಈ ವಿಡಿಯೋ ಕಂಡು ನೆಟ್ಟಿಗರು ಶಾಕ್ ಒಳಗಾಗಿದ್ದಾರೆ.
ಇದನ್ನು ಓದಿ : C. T. ರವಿ ಬಳಸಿದ ಪದ ರೆಕಾರ್ಡ್ ಆಗಿಲ್ಲ: ಸಭಾಪತಿ ಹೊರಟ್ಟಿ ಸ್ಪೋಟಕ ಹೇಳಿಕೆ.!
ಈ ವಿಡಿಯೋ ಈಗಾಗಲೇ 11.6 ಮಿಲಿಯನ್ ವೀಕ್ಷಣೆ ಪಡೆದಿದೆ. ಹೆಣ್ಣು ಸಿಂಹವು 270-400 ಪೌಂಡ್ ತೂಕವಿರುತ್ತದೆ (A lion weighs 270-400 pounds). ಆದ್ದರಿಂದ ಅದನ್ನು ಎಳೆಯುವುದು ತುಂಬಾ ಕಷ್ಟ ಎಂದು ನೆಟ್ಟಿಗರರೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ :
She was not even phased 😭😭😭 pic.twitter.com/2obyynMCPN
— Ichigo Niggasake (@SomaKazima) December 15, 2024
ಹಿಂದಿನ ಸುದ್ದಿ : ತಕ್ಷಣವೇ C.T. ರವಿ ಬಿಡುಗಡೆಗೆ ಕೋರ್ಟ್ ಆದೇಶ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಗುರುವಾರ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ಇಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರನ್ನು ಪೊಲೀಸರು JMFC ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದರು.
ವಕೀಲ ಎಂ ಬಿ ಜಿರಲಿ ಅವರು ಸಿ ಟಿ ರವಿ ಪರವಾಗಿ ವಾದ ಮಂಡಿಸಿದರು. ಈ ವೇಳೆ ರಾತ್ರಿ ಏನೆಲ್ಲಾ ನಡೆಯಿತು ಎಂದು ಸಿ ಟಿ ರವಿ ವಿವರಿಸಿದರು. ಪೊಲೀಸರ ವಿರುದ್ಧ ಆರೋಪಗಳ ಸುರಿಮಳೆಗೈದರು.
ಇದಾದ ನಂತರ C T ರವಿ ಅವರ ಜಾಮೀನು ಆದೇಶ ಕೋರ್ಟ್ ಕಾಯ್ದಿರಿಸಿದೆ. ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರು ಮುಂದೂಡಿದರು.
ಮಧ್ಯಾಹ್ನದ ಹೊತ್ತಿಗೆ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯವು, ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಿಡುಗಡೆಗೆ ಆದೇಶಿಸಿದೆ.
ಇದನ್ನು ಓದಿ : Triangle Love story : ಪ್ರಿಯಕರನಿಗಾಗಿ ನದಿ ಪಾಲಾದ ಗೃಹಿಣಿ ; ನೇಣಿಗೆ ಶರಣಾದ ಪ್ರಿಯಕರ.!
ಬೆಳಗಾವಿಯ ಜೆಎಂಎಫ್ ಸಿ ನ್ಯಾಯಾಲಯವು ಪರಿಷತ್ ಸದಸ್ಯ ಸಿ.ಟಿ ರವಿ ಅವರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಹೀಗಾಗಿ ಕಾರಿನಲ್ಲಿ ಸಿ ಟಿ ರವಿಯವರನ್ನು ಬೆಂಗಳೂರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಬರಲಾಗುತ್ತಿತ್ತು.
ಈ ಬೆನ್ನಲ್ಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ಕೋರ್ಟ್ ನಲ್ಲಿ ಸಿ.ಟಿ ರವಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ಆರಂಭಿಸಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ದರೆ, ಸಿ.ಟಿ ರವಿ ಪರವಾಗಿ ಅಶೋಕ್ ಹಾರನಹಳ್ಳಿ ಪ್ರತಿವಾದ ಮಂಡಿಸಿದರು ಎಂದು ತಿಳಿದು ಬಂದಿದೆ.
ವಾದ ಪ್ರತಿ ವಾದಗಳನ್ನು ಆಲಿಸಿದ ನ್ಯಾಯಾಲಯವು, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ