Saturday, July 27, 2024
spot_img
spot_img
spot_img
spot_img
spot_img
spot_img

Health : ಮಧ್ಯ ವಯಸ್ಸಿನವರಿಗೆ ಮರೆವು ಹೆಚ್ಚಾಗಲು ಕಾರಣಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಸಮಯದಲ್ಲಿ ಮಾನಸಿಕವಾಗಿ ಎದುರಾಗುವ ಆತಂಕ, ಖಿನ್ನತೆ ಮತ್ತು ಒತ್ತಡ ಇಂದು ಯುವಜನತೆಯಲ್ಲಿ ನೆನಪಿನ ಶಕ್ತಿಯನ್ನು ಕುಂದಿಸುತ್ತಿರುವುದು ನಿಜಕ್ಕೂ ಆಘಾತಕಾರಿ (shocking) ವಿಚಾರ.

ಕಾರಣಗಳು :
ನಾವೇ ನಮ್ಮ ಜೀವನ ಶೈಲಿಯಲ್ಲಿ ತಂದುಕೊಳ್ಳುವ ಕೆಲವೊಂದು ಬದಲಾವಣೆಗಳು ನಮ್ಮನ್ನು ಆರೋಗ್ಯದ ವಿಚಾರದಲ್ಲಿ ಹಾಳಾಗುವಂತೆ (to perish) ಮಾಡುತ್ತವೆ. ಮಾನಸಿಕ ಆರೋಗ್ಯದ ಮೇಲೂ ಕೂಡ ಇದು ತುಂಬಾ ಕೆಟ್ಟ ಪರಿಣಾಮ ಬೀರಿ ಚಿಕ್ಕ ವಯಸ್ಸಿಗೆ ಮರೆವು ಹೆಚ್ಚಾಗುವಂತೆ ಮಾಡುತ್ತದೆ.

ಇದನ್ನು ಓದಿ : Health : ಪ್ರತಿಯೊಬ್ಬರು ತಿಳಿಯಲೇಬೇಕಾಗಿರುವ ಹೃದಯಾಘಾತದ ಮುನ್ಸೂಚನೆಗಳಿವು.!

* ನೆನಪಿನ ಶಕ್ತಿಯನ್ನು ಕಳೆದುಕೊಳ್ಳಲು ನಿರಂತರವಾಗಿ ಎದುರಾಗುವ ಮಾನಸಿಕ ಆತಂಕ (Mental anxiety), ಒತ್ತಡ ಮತ್ತು ಮಾನಸಿಕ ಖಿನ್ನತೆಯೂ ಕೂಡ ಕಾರಣ ಎನಿಸಬಹುದು.

* ನಿದ್ರಾಹೀನತೆ ಕಾರಣದಿಂದಾಗಿ ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೇ ಕೆಲವು ಬದಲಾವಣೆಗಳು ಉಂಟಾಗಿ ಮಾನಸಿಕ ಖಿನ್ನತೆ, ಆತಂಕ ಎದುರಾಗುವುದರ ಜೊತೆಗೆ ಜ್ಞಾಪಕ ಶಕ್ತಿ ಕೂಡ ಕುಂದಿ ಹೋಗುತ್ತದೆ.

* ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಯಲ್ಲಿ ತನ್ನ ಪ್ರಭಾವ ಬೀರುತ್ತದೆ. ಅಂದರೆ ಕೆಲವೊಂದು ನಿರ್ದಿಷ್ಟ ಹಾರ್ಮೋನುಗಳನ್ನು ನಮ್ಮ ದೇಹದ ರಕ್ತದ ಹರಿವಿಗೆ ಬಿಡುಗಡೆ ಮಾಡಿ ಮೆಟಬಾಲಿಸಂ, ದೈಹಿಕ ಅಭಿವೃದ್ಧಿ (Physical development) ಇತ್ಯಾದಿಗಳಲ್ಲಿ ತನ್ನ ಕೆಲಸವನ್ನು ಮಾಡುತ್ತಿರುತ್ತದೆ.

ಈ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಅಡಚಣೆ ಉಂಟಾದರೆ ಮಾನಸಿಕ ಆರೋಗ್ಯದ ಮೇಲೆ ವಿರುದ್ಧ ರೀತಿಯ ಪರಿಣಾಮ ಬೀರುತ್ತದೆ. ಕೆಲವರಿಗೆ ನೆನಪಿನ ಶಕ್ತಿಯೇ (memory power) ಹೊರಟು ಹೋಗುವ ಸಾಧ್ಯತೆ ಇರುತ್ತದೆ.

* ಯಥೇಚ್ಛವಾಗಿ ಸೇವನೆ ಮಾಡುವ ಮದ್ಯ, ಮನಸ್ಸಿನ ಹತೋಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಅರಿವಿನ ಸಾಮರ್ಥ್ಯ ಮತ್ತು ಜ್ಞಾಪಕ ಶಕ್ತಿ ಕೂಡ ಇಲ್ಲವಾಗುತ್ತದೆ.

* ಕೆಲವೊಂದು ವಿಚಾರಗಳು ನಮಗೆ ವಿಪರೀತ ಮಾನಸಿಕ ಯಾತನೆಯನ್ನು ಉಂಟು ಮಾಡಿ ಯಾವುದೇ ವಿಷಯದ ಮೇಲೆ ನಮ್ಮ ಉತ್ಸಾಹವೇ ಹೊರಟು ಹೋಗುವಂತೆ ಮಾಡುತ್ತವೆ. ಮತ್ತೊಮ್ಮೆ ಅಂತಹ ವಿಚಾರ ನಮ್ಮ ಮುಂದೆ ಬಂದರೂ ಕೂಡ ಅದರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ.

ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ನಮ್ಮ ಮನಸ್ಸನ್ನು ಕುಗ್ಗಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ.

* ಅಧಿಕ ರಕ್ತದೊತ್ತಡದ ಸಮಸ್ಯೆಯಿರುವ ಜನರು ತಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಲು ತೆಗೆದುಕೊಳ್ಳುವ ಔಷಧಿಗಳು ಕೆಲವೊಮ್ಮೆ ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ (The opposite effect) ಬೀರುತ್ತವೆ.

ಇದು ಸಾಮಾನ್ಯ ಸಂದರ್ಭಗಳಲ್ಲೂ ಕೂಡ ಹೆಚ್ಚು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿದಂತೆ ಕಾಣುತ್ತದೆ. ಯಾವುದೇ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಅಥವಾ ವಿಷಯದ ಮೇಲೆ ಸರಿಯಾಗಿ ಗಮನ ವಹಿಸಲು ಸಾಧ್ಯ ಆಗುವುದಿಲ್ಲ. ಈ ಸಂದರ್ಭದಲ್ಲಿ ಅರಿವಿನ ಸಮಸ್ಯೆ ಕೂಡ ಎದ್ದು ಕಾಣುತ್ತದೆ.

ಇದನ್ನು ಓದಿ : Lokasabha election : ಕಾಂಗ್ರೆಸ್‌ಗೆ ಬಿಗ್ ಶಾಕ್ ; ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಕೈ ಅಭ್ಯರ್ಥಿ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img