Wednesday, May 22, 2024
spot_img
spot_img
spot_img
spot_img
spot_img
spot_img

News : ಮಸೀದಿಯಲ್ಲಿ ಮಲಗಿದ್ದ ಮೌಲ್ವಿಯ ಬರ್ಬರ ಹ**ತ್ಯೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು (Cleric) ದುಷ್ಕರ್ಮಿಗಳು ಹೊಡೆದು ಕೊಂದ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದಿದೆ.

ರಾಮ್‌ಗಂಜ್‌ ವ್ಯಾಪ್ತಿಯ ಕಾಂಚನ್‌ ನಗರದಲ್ಲಿರುವ ಮಸೀದಿಯಲ್ಲಿ ಮೊಹಮ್ಮದ್‌ ಮಹೀರ್‌ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು (criminals) ದಾಳಿ ನಡೆಸಿದ್ದು, ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ಹೊಡೆದ ಕೊಲೆ ಮಾಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

ಮೌಲ್ವಿಯಾಗಿದ್ದ ಮೊಹಮ್ಮದ್‌ ಮಹೀರ್‌, ಆರು ಮಕ್ಕಳೊಂದಿಗೆ ಮಸೀದಿಯಲ್ಲಿ ಮಲಗಿದ್ದರು. ಇದೇ ವೇಳೆ ಹಲವು ದುಷ್ಕರ್ಮಿಗಳು ದಾಳಿ (attack) ನಡೆಸಿದ್ದಾರೆ. ಸಹಾಯಕ್ಕಾಗಿ ಅವರು ಕೂಗಿದರೂ ಅಕ್ಕಪಕ್ಕದವರು ಯಾರೂ ಬಂದಿಲ್ಲ ಎಂದು ವರದಿ ತಿಳಿಸಿದೆ.

ಮಕ್ಕಳಿಗೆ ಜೀವ ಬೆದರಿಕೆ (Life threatening) ಹಾಕಿದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಮೌಲ್ವಿಯು ಮಸೀದಿಯಲ್ಲೇ ಸಾವನ್ನಪ್ಪಿದ್ದಾರೆ.

ಮಕ್ಕಳು ಭಯದಲ್ಲಿ ಕಿರುಚಾಡುತ್ತ, ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಮೊಹಮ್ಮದ್‌ ಮಹೀರ್‌ ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಎಷ್ಟು ಜನ ದಾಳಿ ನಡೆಸಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಇದನ್ನು ಓದಿ : ಮದುವೆ ಸಂಭ್ರಮಕ್ಕೆ ಬಂದು WhatsApp ಸ್ಟೇಟಸ್ ಹಾಕಿ ನೇಣಿಗೆ ಶರಣಾದ ಖ್ಯಾತ ನಟಿ.!

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ (Verification) ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ’ ಎಂಬುದಾಗಿ ರಾಮ್‌ಗಂಜ್‌ ಪೊಲೀಸ್‌ ಠಾಣೆಯ ರವೀಂದ್ರ ಖಿಂಚಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img