ಜನಸ್ಪಂದನ ನ್ಯೂಸ್, ಮಂಗಳೂರು : ಮಹಿಳೆಗೆ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ (Private video threat) ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್, ಮತ್ತೊಬ್ಬ ಮಹಿಳೆಯ ಪತಿ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನಲೆ :
ಮಹಿಳೆಯೋರ್ವರು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ನೀಡಿದ ದೂರಿನನ್ವಯ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಚಂದ್ರನಾಯಕ್ ಮತ್ತು ಮಹಿಳೆಯ ಪತಿಯನ್ನು ಬಂಧಿಸಲಾಗಿದೆ.
ಮಹಿಳೆಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ, ಮಹಿಳೆ (ಪತ್ನಿ) ಯ ಖಾಸಗಿ ಕ್ಷಣಗಳನ್ನು (Private video) ಚಿತ್ರೀಕರಿಸಿ, ನಂತರ ಅದನ್ನೇ ಬಂಡವಾಳ ಮಾಡಿಕೊಂಡು ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಅಷ್ಟೆ ಅಲ್ಲದೇ ತಾನು ಹೇಳಿದವರ ಜೊತೆ ಮಲಗಬೇಕು ಅಂತ ಟಾರ್ಚರ್ ಕೊಡಲು ಪ್ರಾರಂಭಿಸಿದ್ದಾನೆ.
ಇದನ್ನು ಓದಿ : Gorilla :ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?
ಒಂದು ವೇಳೆ ತಾನು ಬಯಸಿದಂತೆ ಇರದಿದ್ದರೆ ಇನ್ನಲ್ಲಿರುವ ಖಾಸಗಿ ಕ್ಷಣದ ವಿಡಿಯೋ (Private video) ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪತಿ ಬೆದರಿಕೆ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ, ಹೇಗಾದರೂ ಮಾಡಿ ಆ ಖಾಸಗಿ ಕ್ಷಣದ ವಿಡಿಯೋ (Private video) ಗಳನ್ನು ಡಿಲೀಟ್ ಮಾಡಿಸುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರನಾಯಕ್ ಅವರನ್ನು ಸಂಪರ್ಕಿಸಿದ್ದಾರೆ.
ಪೋಲೀಸರ ನಂಬಿಕೆಯ ದುರುಪಯೋಗ :
ಸಂತ್ರಸ್ತ ಮಹಿಳೆಯ ಮನವಿಯ ಮೇರೆಗೆ ಪೊಲೀಸ್ ಅಧಿಕಾರ ಬಳಸಿಕೊಂಡು ಕಾನ್ಸ್‌ಟೇಬಲ್ ಚಂದ್ರನಾಯಕ್, ಮಹಿಳೆಯ ಪತಿ ಬಳಿ ಇದ್ದ ಖಾಸಗಿ ವಿಡಿಯೋ (Private video) ಗಳನ್ನು ಡಿಲೀಟ್ ಮಾಡಿಸಿದ್ದಾರೆ. ಜೊತೆಗೆ ದಂಪತಿಯ ನಡುವೆ ರಾಜಿ ಸಂಧಾನ ಮಾಡಿಸಿದ್ದರು ಎನ್ನಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 16 ರ ದ್ವಾದಶ ರಾಶಿಗಳ ಫಲಾಫಲ.!
ಆದರೆ, ಸಂತ್ರಸ್ತೆ ಪತಿ ಬಳಿ ವಿಶ್ವಾಸದಿಂದ ಇದ್ದ ಕಾನ್ಸ್‌ಟೇಬಲ್ ಇದನ್ನೇ ದುರ್ಬಳಕೆ ಮಾಡಿಕೊಂಡು ಪತಿಯ ಸಹಕಾರದಿಂದ ಮಹಿಳೆಯನ್ನು ಲೈಂಗಿಕವಾಗಿ ಬಲಾತ್ಕರಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇತ್ತ ಸಂತ್ರಸ್ತೆ ಪತಿಗೆ ಸಂಪೂರ್ಣ ಬೆಂಬಲ ನೀಡಿ ಹಳೇ ಚಾಳಿ ಮುಂದುವರೆಸಲು ಕಾನ್ಸ್‌ಟೇಬಲ್ ಸಹಕರಿಸಿದ್ದ ಎನ್ನಲಾಗಿದ್ದು, ನಿರಂತರ ಮಾನಸಿಕ ಮತ್ತು ದೈಹಿಕ ಶೋಷಣೆಗೆ ಒಳಗಾದ ಮಹಿಳೆ, ಕೊನೆಗೆ ದಾರಿ ಕಾಣದೆ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ. ಘಟನೆಗೆ ತಕ್ಷಣ ಸ್ಪಂದನೆ ನೀಡಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಸಾರಾಂಶ :
ಮಹಿಳೆಯ ಖಾಸಗೀತನ ಮತ್ತು ಮಾನವೀಯ ಗೌರವವನ್ನು ಉಲ್ಲಂಗಿಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಮಂಗಳೂರು ಪೊಲೀಸರು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಮಹಿಳೆಯ ಮೇಲಿನ ಹಿಂಸೆ ಮತ್ತು ಪೊಲೀಸ್ ಅಧಿಕಾರಿಗಳಿಂದ ಉಂಟಾಗುವ ನಂಬಿಕೆ ದ್ರೋಹದ ಈ ಘಟನೆ, ಸಮಾಜದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ಬೆಂಗಳೂರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಬೆಂಗಳೂರು, ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
NIMHANS ಹುದ್ದೆಯ ವಿವರ :
- ಹುದ್ದೆ : ಡಾಟಾ ಎಂಟ್ರಿ ಆಪರೇಟರ್.
- ಖಾಲಿ ಹುದ್ದೆಗಳ ಸಂಖ್ಯೆ : 01.
- ಕರ್ತವ್ಯ ಸ್ಥಳ : ಬೆಂಗಳೂರು, (ಕರ್ನಾಟಕ).
ಇದನ್ನು ಓದಿ : ಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!
NIMHANS ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc ಪದವಿಯನ್ನು ಹೊಂದಿರಬೇಕು.
NIMHANS ವಯೋಮಿತಿ :
- ಅರ್ಜಿದಾರರ ಗರಿಷ್ಠ ವಯೋಮಿತಿ 30 ವರ್ಷ ಎಂದು ನಿಗದಿಯಾಗಿದೆ.
NIMHANS ವೇತನ ವಿವರ :
- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 21,550 ವೇತನ ನೀಡಲಾಗುವುದು.
NIMHANS ಆಯ್ಕೆ ವಿಧಾನ :
- ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಹಾಗೂ ಸ್ಕಿಲ್ ಟೆಸ್ಟ್ ಆಧಾರದ ಮೇಲೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
- ಈ ಹುದ್ದೆಗೆ ಆಸಕ್ತರು ತಮ್ಮ ಅರ್ಜಿಯನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ:
ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!
📧 Email : pravigopi@gmail.com
ಮುಖ್ಯ ದಿನಾಂಕಗಳು :
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : ಜುಲೈ 08, 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 22, 2025.
ಸಾರಾಂಶ :
NIMHANS ಸಂಸ್ಥೆಯಲ್ಲಿ ಕೆಲಸ ಮಾಡುವ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಹತೆ ಹೊಂದಿದ ಅಭ್ಯರ್ಥಿಗಳು ನೀಡಲಾದ ಇಮೇಲ್ ವಿಳಾಸಕ್ಕೆ ತಮ್ಮ ವಿವರಗಳನ್ನು ಜುಲೈ 22ರೊಳಗೆ ಕಳುಹಿಸಬೇಕು. ಹೆಚ್ಚಿನ ಸ್ಪರ್ಧೆಗೆ ಸಿದ್ಧರಾಗಿ, ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಿ.