Saturday, July 27, 2024
spot_img
spot_img
spot_img
spot_img
spot_img
spot_img

ಲೈಟ್ ಬಲ್ಬ್ ಕದ್ದ ಪೊಲೀಸ್‌ ಕಾನ್ಸ್‌ಟೇಬಲ್ : ಬೆಚ್ಚಿಬಿದ್ದಿ ಜನ ; ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್‌ ಡೆಸ್ಕ್‌ : ಪೊಲೀಸ್‌ ಕಾನ್ಸ್‌ಟೇಬಲ್ ಓರ್ವರು ಲೈಟ್ ಬಲ್ಬ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಂಥ ನಾಚಿಕೆಗೇಡಿನ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸಿಕಂದರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಈ ಘಟನೆ ಏಪ್ರಿಲ್ 20 ರಂದು ನಡೆದಿದೆ ಎಂದು ಹೇಳಲಾಗಿದೆ.

ಈ ರೀತಿಯ ನಾಚಿಕೆಗೇಡಿನ ಘಟನೆಯಿಂದ ಯುಪಿ ಪೊಲೀಸರ ಮುಜುಗರಕ್ಕೀಡಾಗಿದ್ದು, ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿ ಚರ್ಚೆಯು ಆಗುತ್ತಿದೆ.

ಇದನ್ನೂ ಓದಿ : ಮುಂದಿನ 4 ದಿನ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.!

ವಿಡಿಯೋದಲ್ಲೇನಿದೆ :

ಈ ಸಿಸಿಟಿವಿ ವಿಡಿಯೋದಲ್ಲಿ ಓರ್ವ ಕಾನ್ಸ್‌ಟೇಬಲ್ ಕಳ್ಳತನ ಮಾಡಿದ ಪ್ರದೇಶದಲ್ಲಿ ಸ್ವಲ್ಪ ಹೊತ್ತು ಅಲ್ಲೇ ಓಡಾಡುತ್ತಾರೆ. ನಂತರ ಬಲ್ಬ್ ಕದಿಯಲು ಕುರ್ಚಿಯ ಮೇಲೆ ಹತ್ತಿ ಬಲ್ಬ್ ತೆಗೆಯುತ್ತಾನೆ. ಕದ್ದ ಬಲ್ಬ್​​​​​ನ್ನು ನಿಧಾನವಾಗಿ ತನ್ನ ಜೇಬಿನಲ್ಲಿ ಇರಿಸಿಕೊಳ್ಳುತ್ತಾರೆ.

ಲೈಟ್ ಬಲ್ಬ್ ಕದಿಯುವಾಗ ಕಾನ್ಸ್‌ಟೇಬಲ್ ಮೋಬೈಲ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಸಹ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಲೈಟ್ ಬಲ್ಬ್ ಕದ್ದ ನಂತರ ಏನು ನಡೆದೆ ಇಲ್ಲ ಎಂಬಂತ್ತೇ ಕಳ್ಳ ಕಾನ್ಸ್‌ಟೇಬಲ್ ಅಲ್ಲಿಂದ ಹೊರಟು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Health : ಹಾಲಿನಲ್ಲಿ ಈ 5 ಪದಾರ್ಥ ಸೇರಿಸಿ ಕುಡಿಯಿರಿ ; ಆಮೇಲೆ ಚಮತ್ಕಾರ ನೋಡಿ.!

ಈ ಕಾನ್ಸ್‌ಟೇಬಲ್ ಕಳ್ಳತನ ಮಾಡುವ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಬ್ಬ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ಬಲ್ಬ್ ಕದಿಯುತ್ತಿದ್ದುದನ್ನು ನೋಡಿದ ಸಾರ್ವಜನಿಕರು ಆಶ್ವರ್ಯಗೊಂಡಿದ್ದು, ಈ ರೀತಿ ಕದ್ದಿಯಲು ಕಾರಣವೇನು ಎಂದು ಅನೇಕರು ಪ್ರಶ್ನಿಸಿದ್ದಾರೆ.

ಕಾನ್ಸ್‌ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪೊಲೀಸ್​​​ ಇಲಾಖೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನ್‌ಸ್ಟೆಬಲ್​​ನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img