Wednesday, May 22, 2024
spot_img
spot_img
spot_img
spot_img
spot_img
spot_img

ವರನ ಮೇಲೆ ಆ್ಯಸಿಡ್ ಎರಚಿದ ಮಾಜಿ ಪ್ರೇಯಸಿ ; ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮೆರವಣಿಗೆ ವೇಳೆ ಮಾಜಿ ಪ್ರಿಯತಮೆಯೊಬ್ಬಳು (Ex lover) ವರನ ಮೇಲೆ ಆಯಸಿಡ್​​ ಎರಚಿದ ಘಟನೆ ನಡೆದಿದೆ.

ರಾಕೇಶ್​ ಬಿಂದ್​ ಎಂಬಾತನ ಮದುವೆ ಮೆರವಣೆಗೆ ಬಲ್ಲಿಯಾದಲ್ಲಿರುವ ದುಮರಿ ಗ್ರಾಮದಲ್ಲಿ ನಡೆಯುತ್ತಿತ್ತು.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಈ ಸಂದರ್ಭದಲ್ಲಿ ಆತನ ಮಾಜಿ ಲವ್ವರ್​ ವರನ ಬಳಿ ಬಂದು ತನ್ನ ಕೈಯಲ್ಲಿದ್ದ ಆಯಸಿಡ್​ ಬಾಟಲಿಯಿಂದ (acid bottle) ಆತನ ಮೇಲೆ ದಾಳಿ ನಡೆಸಿದ್ದಾಳೆ ಎಂದು ವರದಿಯಿಂದ ತಿಳಿದು ಬಂದಿದೆ.

ಪರಿಣಾಮ ಈ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ವರನ ಹತ್ತಿರವಿದ್ದ ಮೂವರು ಮಹಿಳೆಯರಿಗೂ ಕೂಡ ಇದರಿಂದ ಗಾಯಗಳಾಗಿವೆ (injuries) ಎಂದು ವರದಿಯಾಗಿದೆ.

ರಾಕೇಶ್​​ ಸಂಬಂಧಿಕರು ಕೂಡಲೇ ಆಕೆಯನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ಅತ್ತ ಆ್ಯಸಿಡ್​​ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ (primary treatment) ನೀಡಲಾಗಿದೆ. ಬಳಿಕ ವರನು ಮದುವೆ ಮನೆಗೆ ತೆರಳಿ ವಧುವಿಗೆ ತಾಳಿಕಟ್ಟಿದ್ದಾನೆ ಎಂದು ವರದಿಯಾಗಿದೆ.

spot_img
spot_img
spot_img
- Advertisment -spot_img