ಬುಧವಾರ, ಫೆಬ್ರವರಿ 4, 2026

Janaspandhan News

HomeGeneral NewsLion : ವ್ಯಕ್ತಿ-ಸಿಂಹ ಮುಖಾಮುಖಿ : ಇಬ್ಬರಿರೂ ಭಯ ; ಮುಂದೆನಾಯ್ತು ವಿಡಿಯೋ ನೋಡಿ.!
spot_img
spot_img

Lion : ವ್ಯಕ್ತಿ-ಸಿಂಹ ಮುಖಾಮುಖಿ : ಇಬ್ಬರಿರೂ ಭಯ ; ಮುಂದೆನಾಯ್ತು ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ :  ಒಂದು ಗ್ರಾಮದ ಸಿಮೆಂಟ್ ಕಾರ್ಖಾನೆಯ ಬಳಿ ವ್ಯಕ್ತಿ-ಸಿಂಹ (Lion) ಮುಖಾಮುಖಿಯಾಗಿದ್ದು, ಆಗ ಇಬ್ಬರೂ ಭಯ ಭೀತರಾಗಿದ್ದು, ಮುಂದೆನಾಯ್ತು ಅಂತ ವಿಡಿಯೋ ನೋಡಿ.!

ಗುಜರಾತ್‌ನ ಜುನಾಗಢ ಜಿಲ್ಲೆಯ ದುಂಗರ್‌ಪುರ್ ಗ್ರಾಮದಲ್ಲಿ ನಡೆದ ಘಟನೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಮೆಂಟ್ ಕಾರ್ಖಾನೆಯ ಬಳಿ ವ್ಯಕ್ತಿಯೊಬ್ಬನು ಅಕಸ್ಮಾತ್ ತನ್ನ ಎದುರಿಗೆ ಸಿಂಹ (Lion) ಬರುವುದನ್ನು ನೋಡಿ ಗಾಬರಿಗೊಂಡು ಎದ್ನೋ ಬಿದ್ನೋ ಎಂದು ಚೀರುತ್ತ ಓಡಲು ಪ್ರಾರಂಭಿಸಿದನು.

ಆಶ್ಚರ್ಯಕರವಾಗಿ, ಆ ಸಿಂಹವೂ ಕೂಡ ಈ ಆತನನ್ನು ಕಂಡ ತಕ್ಷಣ ಕಾಡಿನತ್ತ ಓಡಿ ಹೋಗಿದೆ.

SI ಸಾವಿನ ಪ್ರಕರಣಕ್ಕೆ ಹೊಸ ತಿರುವು ; ಮಹಿಳಾ ಇನ್ಸ್‌ಪೆಕ್ಟರ್ ಬಂಧನ.!

ಈ ಘಟನೆ ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ರಾತ್ರಿ ಸುಮಾರು 10 ಗಂಟೆಗೆ ಸಂಭವಿಸಿದೆ. ವಿಡಿಯೋದಲ್ಲಿ ವ್ಯಕ್ತಿ ಭಯದಿಂದ ಕಾರ್ಖಾನೆಯ ಆವರಣದ ಕಡೆಗೆ ಓಡುವುದು ಹಾಗೂ ಸಿಂಹ (Lion) ವೂ ತಕ್ಷಣ ಕಾಡಿನತ್ತ ಹಿಂತಿರುಗುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕಾರ್ಖಾನೆಯ ಮಾಲೀಕ ಸಾಗರ್ ಕೋಟೆಚಾ ಹೇಳುವ ಪ್ರಕಾರ, ಈ ಪ್ರದೇಶದಲ್ಲಿ ಹಲವಾರು ದಿನಗಳಿಂದ ಸಿಂಹಗಳ ಅಲೆದಾಟ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶವಾಗಿರುವುದರಿಂದ ರಾತ್ರಿ ಅಥವಾ ಮುಂಜಾನೆ ಅವುಗಳನ್ನು ನೋಡುವುದು ಸಾಮಾನ್ಯ, ಆದರೆ ಸಿಂಹವೋಂದು ಇಷ್ಟು ಹತ್ತಿರದಲ್ಲಿ ಎದುರಾಗುವುದು ಅಪರೂಪ.

ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?

@Nikhilsaini ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳಳಲಾಗಿದ್ದು, Man and lion sudden faceoff what would your reaction be? ಎಂದು ಬರೆದುಕೊಂಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಹಂಚಲಾದ ಈ ವಿಡಿಯೋ ಈಗಾಗಲೇ 22 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೋ ನೋಡಿದ ಅನೇಕ ಬಳೆಕೆದಾರರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದು, ಅದರಲ್ಲಿ ಓರ್ವ ಬಳಕೆದಾರರು ತಮಾಷೆಯಾಗಿ “ಮನುಷ್ಯನಿಗಿಂತ ಸಿಂಹವೇ ಹೆಚ್ಚು ಹೆದರಿತು” ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, “ಇದು ರಾಷ್ಟ್ರೀಯ ಉದ್ಯಾನವನಗಳ ಬಳಿ ಸಾಮಾನ್ಯ ದೃಶ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.

Celery : ಕೊಬ್ಬು ಕರಗಿಸಲು 30 ದಿನ ಈ ಜ್ಯೂಸ್‌ ಕುಡಿಯಿರಿ.!
ವ್ಯಕ್ತಿ-ಸಿಂಹ (Lion) ಮುಖಾಮುಖಿಯಾದ ವಿಡಿಯೋ :

https://twitter.com/i/status/1954224192582308094

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Celery : ಕೊಬ್ಬು ಕರಗಿಸಲು 30 ದಿನ ಈ ಜ್ಯೂಸ್‌ ಕುಡಿಯಿರಿ.!

Celery Juice

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಹಾರ ಹಾಗೂ ಪಾನೀಯಗಳ ರುಚಿ ಹೆಚ್ಚಿಸಲು ಸಾಮಾನ್ಯವಾಗಿ ಬಳಸುವ ಸೆಲರಿ (Celery), ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ವಿಶೇಷವಾಗಿ ಸೆಲರಿ ನೀರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ತೂಕ ಇಳಿಸಲು ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸೆಲರಿ (Celery) ನೀರು ತಯಾರಿಸುವ ಸರಳ ವಿಧಾನ :

ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಸೆಲರಿ (Celery) ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ನೀರು ಅರ್ಧಕ್ಕೆ ಇಳಿದ ಬಳಿಕ ಗ್ಯಾಸ್ ಆಫ್ ಮಾಡಿ. ತಣ್ಣಗಾದ ನಂತರ ಫಿಲ್ಟರ್ ಮಾಡಿ ಲೋಟದಲ್ಲಿ ಹಾಕಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ ಫಲಿತಾಂಶ ನೀಡುತ್ತದೆ.

ಇದನ್ನು ಓದಿ : ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!
ಚಯಾಪಚಯ ಕ್ರಿಯೆ ಹೆಚ್ಚಿಸಿ ಕೊಬ್ಬು ಕರಗಿಸುವ ಗುಣ :

ಸೆಲರಿ (Celery) ನೀರಿನಲ್ಲಿರುವ ಪೋಷಕಾಂಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ದಿನನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸುಮಾರು 30 ದಿನಗಳವರೆಗೆ ಸೇವಿಸಿದರೆ ತೂಕ ಇಳಿಕೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

ಸೆಲರಿ (Celery) ಯಿಂದಾಗುವ ಮತ್ತಷ್ಟು ಆರೋಗ್ಯ ಪ್ರಯೋಜನಗಳು :
  • ಹೊಟ್ಟೆಯ ಸಮಸ್ಯೆಗಳನ್ನು ತಗ್ಗಿಸಲು ಸಹಕಾರಿ
  • ಕರುಳಿನ ಆರೋಗ್ಯ ಸುಧಾರಣೆ
  • ಸಂಧಿವಾತ ನೋವಿನಿಂದ ನಿವಾರಣೆ
  • ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನೆರವು.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?

ಸೆಲರಿ (Celery) ನೀರನ್ನು ನಿಯಮಿತವಾಗಿ ಆಹಾರ ಯೋಜನೆಯಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ಸಮಗ್ರ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments