Saturday, July 27, 2024
spot_img
spot_img
spot_img
spot_img
spot_img
spot_img

ಬಿಎಂಟಿಸಿಯ ಡಿಜಿಟಲ್ ಪೇಮೆಂಟ್​ಗೆ ಪ್ರಯಾಣಿಕರು ಫುಲ್ ಖುಷ್.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಪ್ರಯಾಣಿಕರು ಪ್ರತಿದಿನವೂ ಬಿಎಂಟಿಸಿ (BMTC) ಟಿಕೆಟ್ ಖರೀದಿಸುವಾಗ ಚಿಲ್ಲರೆಗಾಗಿ ಪರದಾಡುತ್ತಿದ್ದರು.

ಸದ್ಯ ಈಗ ಬಿಎಂಟಿಸಿಯಲ್ಲಿ ಕ್ಯೂಆರ್ (QR Code) ಸರ್ವಿಸ್ ಇದ್ದು ಪ್ರಯಾಣಿಕರು ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆ ದೂರವಾಗಿದೆ ಎನ್ನಬಹುದು.

ಇದನ್ನು ಓದಿ : ರೈತರ ಹುಡುಗರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ…!?

ಈ ಬಗ್ಗೆ ಪ್ರಯಾಣಿಕರೊಬ್ಬರು, ಯುಪಿಐ ಪೇಮೆಂಟ್​ಗೆ (UPI Payment) ಉತ್ತಮ ಸ್ಪಂದನೆ ಸಿಗುತ್ತಿದೆ ಇದರಿಂದ ಚಿಲ್ಲರೆ ಸಮಸ್ಯೆಯಿಲ್ಲದೆ ಟಿಕೆಟ್ ಪಡೆಯಬಹುದು ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಯಾಣಿಕರು ವೋಲ್ವೊ ಬಸ್ ನಲ್ಲಿಯೂ‌ ನಿತ್ಯ ಶೇಕಡಾ 32ರಷ್ಟು ಡಿಜಿಟಲ್‌ ಪೆಮೇಂಟ್ ಮೊರೆ ಹೋಗಿದ್ದಾರೆ. ಸದ್ಯ ಜನರಿಂದ ಅದ್ಬುತ ರೆಸ್ಪಾನ್ಸ್ (response) ವ್ಯಕ್ತವಾಗ್ತಿದೆ ಎಂದು ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ (Chief traffic manager) ಜಿ.ಟಿ. ಪ್ರಭಾಕರ್ ಮಾಹಿತಿ ನೀಡಿದ್ದಾರೆ.

ಟಿಕೆಟ್ ಖರೀದಿಯ ಜೊತೆ ದಿನದ ಹಾಗೂ ತಿಂಗಳ ಪಾಸ್ ಖರೀದಿಯ ವೇಳೆಯೂ ಪ್ರಯಾಣಿಕರು ಹೆಚ್ಚಾಗಿ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರೆ. ಪ್ರತಿ ತಿಂಗಳು ಒಂದು ಲಕ್ಷ ತಿಂಗಳ ಪಾಸ್ (monthly pass) ನೀಡಲಾಗುತ್ತೆ. ಈ ವೇಳೆ 50 ಸಾವಿರ ಜನ ಯುಪಿಐ ಪೇಮೆಂಟ್ ಮಾಡ್ತಿದ್ದು, ಚಿಲ್ಲರೆ ಸಮಸ್ಯೆಗೆ ಫುಲ್ ಸ್ಟಾಪ್ ಬಿದ್ದಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಬಿಎಂಟಿಸಿಗೆ ತಿಂಗಳಿಗೆ 85 ಕೋಟಿಗೂ ಅಧಿಕ ಆದಾಯ ಬರ್ತಿದ್ದು, ಇದರಲ್ಲಿ 6 ರಿಂದ 7 ಪರ್ಸೆಂಟ್ ಡಿಜಿಟಲ್ ಪೆಮೇಂಟ್ (digital payment) ಮೂಲಕ ಸಂಗ್ರಹವಾಗ್ತಿದೆ. ಈಗ ಸದ್ಯ ಕಂಡೆಕ್ಟರ್ ಕೈಯಲ್ಲಿ ಕ್ಯೂಆರ್ ಕೂಡ ನೀಡಿದ್ದು, ಜನರ ಅದರಲ್ಲಿ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿ ಟಿಕೆಟ್ ಪಡೆಯುತ್ತಿದ್ದಾರೆ.

ಇದನ್ನು ಓದಿ : 2024 – ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

• ನವೆಂಬರ್ : ಕ್ಯೂಆರ್ ಟಿಕೆಟ್ ಆದಾಯ ₹5.54 ಕೋಟಿ
• ಡಿಸೆಂಬರ್ : ಕ್ಯೂಆರ್ ಟಿಕೆಟ್ ಆದಾಯ ₹5.91ಕೋಟಿ
• ಜನವರಿ : ಕ್ಯೂಆರ್ ಟಿಕೆಟ್ ಆದಾಯ ₹5.96ಕೋಟಿ ಆದಾಯ ಬಂದಿದೆ ಎಂದು ತಿಳಿದು ಬಂದಿದೆ.

spot_img
spot_img
- Advertisment -spot_img