Friday, June 14, 2024
spot_img
spot_img
spot_img
spot_img
spot_img
spot_img

Health : ಹೊಟ್ಟೆ ತುಂಬಿದರೂ ಸಹ ಅತಿಯಾಗಿ ಊಟ ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಜನರು ಮದುವೆಯಂತಹ ಸಮಾರಂಭಗಳಲ್ಲಿ ಹೊಟ್ಟೆ ತುಂಬಿದ್ದರೂ ಸಹ ಮತ್ತೆ ಮತ್ತೆ ಬಡಿಸಿಕೊಂಡು ಊಟ (Lunch) ಮಾಡ್ತಾರೆ.

ಹೀಗೆ ಮಾಡುವುದರಿಂದ ದೇಹದಲ್ಲಿ ಬೊಜ್ಜು ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ (Gain weight). ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ.

ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!

ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಈ ಸಲಹೆ (Advice) ಪಾಲಿಸಿ.

ನಾವು ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು. ಇದರಿಂದ ಜೀರ್ಣಕ್ರಿಯೆ (Digestion) ಚೆನ್ನಾಗಿ ಆಗುತ್ತದೆ ಮತ್ತು ನಿಮ್ಮ ಹಸಿವು (Hungry) ಕಡಿಮೆಯಾಗುತ್ತದೆ.

ನಾವು ಊಟವನ್ನು ಆಯ್ಕೆ ಮಾಡಿಕೊಳ್ಳುವಾಗ ನೆಚ್ಚಿನ ಆಹಾರ ಪದಾರ್ಥಗಳನ್ನು ಆರಿಸಬೇಕು (Choice). ಅಲ್ಲಿ ಇರುವುದನೆಲ್ಲಾ ತಿನ್ನಬಾರದು. ಇದರಿಂದ ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನು ತಪ್ಪಿಸಬಹುದು.

ಪ್ರೋಟೀನ್ ಮತ್ತು ಫೈಬರ್ (Protein and Fiber) ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಹೊಟ್ಟೆ ಹೆಚ್ಚು ಸಮಯ ತುಂಬಿರುತ್ತದೆ.

ಯಾವುದೇ ಸಮಾರಂಭಗಳಲ್ಲಿ ಊಟ ಮಾಡುವಾಗ ಆರೋಗ್ಯಕರವಾದ (Healthy) ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಇದನ್ನು ಓದಿ : Health : ನಿಮಗೆ ತಲೆ ಸುತ್ತುತ್ತಿದೆಯೇ.? ಕಾರಣ ಇದಾಗಿರಬಹುದು ; ಚಿಕಿತ್ಸೆಗಾಗಿ ಈ ಸುದ್ದಿ ಓದಿ.!

ಹೊರಗಡೆ ಊಟ ಮಾಡಿದರೆ ಸಾಕಷ್ಟು ನೀರನ್ನು ಕುಡಿಯಬೇಕು. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಬೊಜ್ಜು (Fatness) ಸಂಗ್ರಹವಾಗುವುದಿಲ್ಲ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img