ಜನಸ್ಪಂದನ ನ್ಯೂಸ್, ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ ಶಹೀದ್ ಪಾತ್ ರಸ್ತೆಯ ಮೇಲೆ ಕಾರಿನಲ್ಲಿ ಅಪಾಯಕಾರಿ ಸಾಹಸ ಮಾಡಿದ ನಗ್ನ ಯುವತಿ (Nude lady) ಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಕಪ್ಪು ಬಣ್ಣದ ಕಾರಿನ ಕಿಟಕಿಯಿಂದ ಯುವತಿಯೊಬ್ಬಳು ಹೊರಗೆ ನಗ್ನಳಾಗಿ (Nude) ನೇತಾಡುತ್ತಿರುವುದು ಕಾಣುತ್ತದೆ. ಆಕೆ ಕಾರಿನ ಕಿಟಕಿಯಿಂದ ಅರ್ಧ ನಗ್ನ (Nude) ದೇಹವನ್ನು ಹೊರಕ್ಕೆ ತೂರಿಕೊಂಡು ಅಪಾಯಕಾರಿ ರೀತಿಯಲ್ಲಿ ಕುಳಿತಿರುವುದು ವಿಡಿಯೋದಲ್ಲಿದೆ.
Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
ಈ ದೃಶ್ಯವನ್ನು ಕಪ್ಪು ಬಣ್ಣದ ಕಾರಿನ ಹಿಂದೆ ಇದ್ದ ವಾಹನದಲ್ಲಿದ್ದವರು ಮೊಬೈಲ್‌ನಲ್ಲಿ ಯುವತಿಯ ಹೊರಗೆ ನಗ್ನಳಾಗಿ (Nude) ಕುಳಿತ/ನೇತಾಡುವುದನ್ವನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪೋಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಕಾರು ಉತ್ತರ ಪ್ರದೇಶ ನೋಂದಣಿ ಹೊಂದಿರುವುದು ದೃಢಪಟ್ಟಿದೆ. ಆದರೆ ಈ ಪ್ರಕರಣದಲ್ಲಿ ಭಾಗಿಯಾದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಈ ಘಟನೆ ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಶಹೀದ್ ಪಾತ್ ಮಾರ್ಗವು ಕಳೆದ ಕೆಲವು ತಿಂಗಳಲ್ಲಿ ಇಂತಹ ಸಾಹಸಪ್ರಿಯರ ಅಕ್ರಮ ಚಟುವಟಿಕೆಗಳಿಗೆ ಅಡ್ಡಾದಿಡ್ಡಿ ವೇದಿಕೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಚಾರ ಪೊಲೀಸರು ಈ ರೀತಿಯ ಅಪಾಯಕಾರಿ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಲಕ್ನೋ ನಗರ ಪೊಲೀಸ್ ಆಯುಕ್ತರು ಘಟನೆಯ ನಿಜಾಂಶ ತಿಳಿದು ಕ್ರಮ ಕೈಗೊಳ್ಳಲು ತಂಡವನ್ನು ರಚಿಸಿದ್ದಾರೆ.
ಅರ್ಧ ನಗ್ನ (Nude) ದೇಹವನ್ನು ಹೊರದ ಯುವತಿಯ ವಿಡಿಯೋ :
View this post on Instagram
Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!

ಜನಸ್ಪಂದನ ನ್ಯೂಸ್, ಆರೋಗ್ಯ : ಬೇಸಿಗೆಯ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ತರಕಾರಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನುಗ್ಗೆಕಾಯಿ (Drumstick) ಒಂದು ಪ್ರಮುಖ ತರಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತವೆ.
ನುಗ್ಗೆಕಾಯಿ (Drumstick) ಯನ್ನು “ಪ್ರೋಟೀನ್‌ನ ಭಂಡಾರ” ಎಂದು ಕರೆಯಲಾಗುತ್ತದೆ. ಇದು ರಕ್ತ ಶುದ್ಧೀಕರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಶರೀರದ ಉರ್ಜೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲರಿಗೂ ಇದು ಸೂಕ್ತ ತರಕಾರಿ ಅಲ್ಲ. ಕೆಲವರಿಗೆ ಇದರ ಸೇವನೆಯು ಹಾನಿಕಾರಕವಾಗಬಹುದು ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯ.
ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.
ಇದೀಗ ನೋಡೋಣ ಬನ್ನಿ ಯಾರ್ಯಾರು ನುಗ್ಗೆಕಾಯಿ (Drumstick) ಸೇವಿಸಬಾರದು ಮತ್ತು ಏಕೆ ಅಂತ ತಿಳಿಯೋಣ.!
1️⃣ ಗರ್ಭಿಣಿಯರು :
ಗರ್ಭಾವಸ್ಥೆಯ ಸಮಯದಲ್ಲಿ ನುಗ್ಗೆಕಾಯಿಯನ್ನು ಸೇವಿಸುವುದು ತಪ್ಪು. ಇದು ಉಷ್ಣಸ್ವಭಾವದ ತರಕಾರಿ ಆಗಿರುವುದರಿಂದ, ಗರ್ಭಿಣಿಯರ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಇತರ ತೊಂದರೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ನುಗ್ಗೆಕಾಯಿ ಸೇವಿಸಬಾರದು.
2️⃣ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು :
ಹೆಚ್ಚಿನ ರಕ್ತಸ್ರಾವ (Heavy Bleeding) ಅಥವಾ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವ ಮಹಿಳೆಯರು ನುಗ್ಗೆಕಾಯಿ ಸೇವನೆ ತಪ್ಪಿಸಬೇಕು. ಇದರ ಉಷ್ಣ ಗುಣದಿಂದಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
3️⃣ ಕಡಿಮೆ ರಕ್ತದೊತ್ತಡ (Low BP) ಇರುವವರು :
ನುಗ್ಗೆಕಾಯಿ (Drumstick) ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದು ಅಧಿಕ ರಕ್ತದೊತ್ತಡ (High BP) ಹೊಂದಿರುವವರಿಗೆ ಒಳ್ಳೆಯದಾದರೂ, ಕಡಿಮೆ ರಕ್ತದೊತ್ತಡ ಇರುವವರಿಗೆ ಅಪಾಯಕಾರಿ. ಇದರಿಂದ ತಲೆ ಸುತ್ತು, ದೌರ್ಬಲ್ಯ, ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.
4️⃣ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಇರುವವರು :
ಗ್ಯಾಸ್ಟ್ರಿಕ್ ಅಥವಾ ಅಲ್ಸರ್ (ulcer) ಸಮಸ್ಯೆಯಿಂದ ಬಳಲುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹೊಟ್ಟೆಯ ಆಸಿಡ್ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
5️⃣ ಸ್ತನ್ಯಪಾನ ಮಾಡುವ ಮಹಿಳೆಯರು :
ಮಗುವಿಗೆ ಎದೆಹಾಲುಣಿಸುತ್ತಿರುವ ಮಹಿಳೆಯರು ಕೂಡ ನುಗ್ಗೆಕಾಯಿ (Drumstick) ಸೇವನೆ ತಪ್ಪಿಸಬೇಕು. ಇದು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಹಾಗೂ ಶಿಶುವಿಗೆ ಅಸಹನೆ ಉಂಟುಮಾಡಬಹುದು.
ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಂಪಾದಕೀಯ:
ನುಗ್ಗೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು, ಕಡಿಮೆ ರಕ್ತದೊತ್ತಡದವರು, ಗ್ಯಾಸ್ಟ್ರಿಕ್ ಅಥವಾ ಅಲ್ಸರ್‌ನಿಂದ ಬಳಲುವವರು ಹಾಗೂ ಸ್ತನ್ಯಪಾನ ಮಾಡುವ ತಾಯಂದಿರವರು ನುಗ್ಗೆಕಾಯಿ (Drumstick) ಸೇವನೆ ತಪ್ಪಿಸುವುದು ಉತ್ತಮ. ವೈದ್ಯರ ಸಲಹೆ ಪಡೆದು ಮಾತ್ರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
Disclaimer : This article is based on reports and information available on the internet. Janaspandhan News is not affiliated with it and is not responsible for it.
👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







