ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸಂಪಿಗೆಹಳ್ಳಿ ಪ್ರದೇಶದಲ್ಲಿ ಭೀಕರ ಘಟನೆ ಸಂಭವಿಸಿದೆ. ತಾಯಿ (Mother) ತನ್ನ 22 ವರ್ಷದ ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಪೋಲೀಸ್ ವರದಿಗಳ ಪ್ರಕಾರ, ಹಲ್ಲೆಗೆ ಒಳಗಾದ ಯುವತಿಯನ್ನು ರಮ್ಯಾ ಎಂದು ಗುರುತಿಸಲಾಗಿದೆ. ರಮ್ಯಾ ಕೆಲವು ವರ್ಷಗಳ ಹಿಂದೆ ಸೋಮಶೇಖರ್ ಎಂಬಾತನೊಂದಿಗೆ ಮದುವೆಯಾದಿದ್ದು, ಇಬ್ಬರೂ ಆನೇಕಲ್‌ನಲ್ಲಿ ಎರಡು ಮಕ್ಕಳೊಡನೆ ವಾಸವಾಗಿದ್ದರು.
ಇನ್ನು ಸಣ್ಣ ಗಲಾಟೆಯಾದರೂ ಸಹ ರಮ್ಯಾ ತನ್ನ ಪತಿ – ಮಕ್ಕಳನ್ನು ಬಿಟ್ಟು ತವರು ಮನೆಗೆ ಓಡಿ ಬರುತ್ತಿದ್ದಳು. ಈ ನಡುವೆ ರಮ್ಯಾ ಮೂರು ದಿನಗಳ ಹಿಂದೆ ತನ್ನ ಎರಡು ಮಕ್ಕಳಿಗೆ ಅರಾಮ ಇಲ್ಲದ ಹಿನ್ನಲೆಯಲ್ಲಿ ಮತ್ತು ತನಗೂ ಆರೋಗ್ಯ ಸರಿ ಇಲ್ಲದರಿಂದ ಪತಿಯ ಜೊತೆ ತಾಯಿ (Mother) ಮನೆಗೆ ಬಂದಿದ್ದಾಳೆ.
ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
ಪದೇ ಪದೇ ತನ್ನ ಮಗಳು ತವರು ಮನೆಗೆ ಬರುತ್ತಿರುವುದರಿಂದ ಸಿಟ್ಟಾದ ತಾಯಿ (Mother) ಸರೋಜಮ್ಮ, ಮಗಳ ಜೊತೆ ಜಗಳ ಮಾಡಿದ್ದಾರೆ. ಬುಧವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅಮವಾಸೆ ಹಿನ್ನೆಲೆಯಲ್ಲಿ ಮಗಳನ್ನು ಮಾತ್ರ ಪೂಜೆಗೆ ಹೋಗೋಣ ಎಂದು ಕರೆದುಕೊಂಡು ಮನೆಯಿಂದ ಸ್ವಲ್ಪವೇ ದೂರ ಇರುವ ದೇವಸ್ಥಾನಕ್ಕೆ ಬಂದಿದ್ದಾರೆ.
ತಾಯಿ (Mother) ಸರೋಜಮ್ಮ ತನ್ನ ಮಗಳ ಜೊತೆಗೆ ಪೂಜೆ ವಸ್ತು ಹಾಗೂ ಮಚ್ಚಿನ ಸಮೇತ ದೇವಸ್ಥಾನ ಬಂದಿದ್ದಾರೆ. ಇದನ್ನೂ ನೋಡಿದ ದೇವಸ್ಥಾನದ (Temple) ಹತ್ತಿರದ ಮನೆಯವರು ಏನಾಗುತ್ತಿದೆ ಎಂದು ನೋಡಲು ಬಂದಿದ್ದಾರೆ. ಜನರನ್ನು ನೋಡಿದ ಸರೋಜಮ್ಮ ಸಿಟ್ಟಾಗಿ ಎಲ್ಲರಿಗೂ ಬೈದು ವಾಪಸ್ ಕಳುಹಿಸಿದ್ದಾಳೆ.
ಸರೋಜಮ್ಮ ಸಿಟ್ಟಾಗಿ ಎಲ್ಲರನ್ನು ಬೈದ ಹಿನ್ನಲೆಯಲ್ಲಿ ಎಲ್ಲರೂ ಹೋದ ಮೇಲೆ ಏನೋ ಪೂಜೆ ಮಾಡಿ, ಮಗಳಿಗೆ ನಮಸ್ಕಾರ ಮಾಡುವಂತೆ ತಿಳಿಸಿದ್ದಾರೆ. ತಾಯಿ (Mother) ಮಾತಿನಂತೆ ಮಗಳು ರಮ್ಯಾ ತಲೆಬಾಗಿ ನಮಸ್ಕರಿಸುವಾಗ ಅವಳ ಕುತ್ತಿಗೆಯ ಭಾಗಕ್ಕೆ ತಾಯಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಇದನ್ನು ಓದಿ : ಈ ಪುಟ್ಟ ಬೀಜ ಸೇವನೆಯಿಂದ ಗಂಟುಗಳ Uric-Acid ಕರಗಿ, ಕಿಡ್ನಿ ಸ್ಟೋನ್ ಹೊರಬರುತ್ತದೆ.
ಮಗಳ ಕುತ್ತಿಗೆಯನ್ನು ಮಚ್ಚಿನಿಂದ ಕತ್ತರಿಸುತ್ತಿದಂತೆಯೇ ತಾಯಿ (Mother) ದೇವಸ್ಥಾನದಿಂದ ಪರಾರಿಯಾಗಿದ್ದಾರೆ. ಈ ಕೃತ್ಯದಿಂದ ತಾಯಿ ತನ್ನ ಮಗಳನ್ನೇ ನರಬಲಿ ಕೊಡೊದಕ್ಕೆ ಮುಂದಾಗಿದ್ದಾಳಾ ಎಂಬ ಅನುಮಾನ ಮೂಡತೊಡಗಿದೆ.
ಇನ್ನು ಮಚ್ಚಿನಿಂದ ಗಂಭೀರವಾದ ಗಾಯಗೊಂಡ ರಮ್ಯಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸದ್ಯ ಸ್ಥಳ ಮಹಜರು ನಡೆಸಿರುವ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಸರೋಜಮ್ಮಗಾಗಿ ಹುಡುಕಾಟ ನಡೆಸಿದ್ದಾರೆ.
Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

ಜನಸ್ಪಂದನ ನ್ಯೂಸ್, ಕಾನ್ಪುರ್ (ಉ.ಪ್ರ) : ಓರ್ವ ಮಾಜಿ ಪ್ರಿಯಕರ ತನ್ನ ಮಾಜಿ ಪ್ರೆಯಸಿಗೆ ಬಲವಂತವಾಗಿ ಮುತ್ತು (Kiss) ಕೊಡುವಾಗ ಕೋಪಗೊಂಡ ಪ್ರೇಯಸಿ ಆತನ ನಾಲಿಗೆಯನ್ನೇ ಕಚ್ಚಿ ಕತ್ತರಿಸಿ ಹಾಕಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಈ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಶಾಕ್ ಉಂಟುಮಾಡಿದೆ. ಇಲ್ಲಿ ಪ್ರೇಯಸಿ ಮತ್ತು ಆಕೆಯ ಮಾಜಿ ಪ್ರಿಯಕರ ಇಬ್ಬರೂ ವಿವಾಹಿತರಾಗಿದ್ದಾರೆ.
ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.
ಪ್ರೇಯಸಿ, ಮುತ್ತು (Kiss) ಕೊಡುವಾಗ ಪ್ರಿಯಕರ ನಾಲಿಗೆಯನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿ ಹಾಕಿರುವ ಪರಿಣಾಮ ಬಾಯಿಂದ ರಕ್ತಸ್ರಾವವಾಗುತ್ತಲೇ ಆತ ಕೆಳಗೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ದೌಡಾಯಿಸಿ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿನ್ನಲೆ :
35 ವರ್ಷದ ವಿವಾಹಿತ ಚಂಪಿ ಎಂಬ ಉತ್ತರ ಪ್ರದೇಶದ ಕಾನ್ಪುರದ ದರಿಯಾಪುರ ಗ್ರಾಮದ ನಿವಾಸಿ ತನ್ನದೇ ಗ್ರಾಮದ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮಹಿಳೆಯ ಪೊಷಕರಿಗೆ ಈ ವಿಷಯ ತಿಳಿಯುತ್ತಿದಂತೆಯೇ ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದರು.
ಮಹಿಳೆಯ ಮದುವೆಯ ನಂತರವೂ ಸಹ ವಿವಾಹಿತ ಚಂಪಿ ಆಗಾಗ್ಗೆ ತನ್ನ ಮಾಜಿ ಪ್ರೆಯಸಿ ಹಾಗು ವಿವಾಹಿತೆಯನ್ನು ಭೇಟಿಯಾಗುತ್ತಿದ್ದ, ಅಷ್ಟೆ ಅಲ್ಲದೆ ಪ್ರೆಯಸಿಗೆ ತನ್ನೊಂದಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದ.
ಇದನ್ನು ಓದಿ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್‌ನಲ್ಲಿ Engineer ಹತ್ಯೆ.
ಮಾಜಿ ಪ್ರೇಯಸಿ ಕುಟುಂಬದ ಸಲುವಾಗಿ ಜೇಡಿಮಣ್ಣನ್ನು ಸಂಗ್ರಹಿಸಲು ಸೋಮವಾರ ಮಧ್ಯಾಹ್ನ ಸಮೀಪದ ಕೆರೆಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಮಾಜಿ ಪ್ರಿಯಕರ ಚಂಪಿ, ಒಂಟಿಯಾಗಿರುವ ಆಕೆಯನ್ನು ಆಕೆಯನ್ನು ಭೇಟಿ ಮಾಡಿ ಮಾತನಾಡಿಸಲು ಯತ್ನಿಸಿದ್ದಾನೆ.
ಆದರೆ ಮಹಿಳೆ ಅಂದರೆ ಮಾಜಿ ಗೆಳತಿ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ ಚಂಪಿ ಆಕೆಯನ್ನು ಬಲವಂತವಾಗಿ ಹಿಡಿದು ಚುಂಬಿಸಲು (Kiss) ಮುಂದಾಗಿದ್ದಾನೆ. ಆದರೆ ಪ್ರೇಯಸಿ ಇಷ್ಟವಿರದ ಕಾರಣ ಹಿಂದಕ್ಕೆ ಸರಿಯಲು ಮುಂದಾಗಿದ್ದಾಳೆ.
ಆದರೆ ಮಾಜಿ ಪ್ರಿಯಕರ ಆಕೆಯನ್ನು ಬಲವಂತಾಗಿ ತಬ್ಬಿಕೊಂಡು ಚುಂಬಿಸಲು (Kiss) ಯತ್ನಿಸುತ್ತಿದಂತೆಯೇ ಮಹಿಳೆ (ಪ್ರೇಯಸಿ) ಬಿಡಿಸಿಕೊಳ್ಳಲು ಸಾಧ್ಯವಾಗದೇ ಆತನ ನಾಲಿಗೆಯನ್ನೇ ತನ್ನ ಹಲ್ಲುಗಳಿಂದ ಕತ್ತರಿಸಿ ಹಾಕಿದ್ದಾಳೆ.
ಮುತ್ತು (Kiss) ಕೊಡುವಾಗ ಹುಲ್ಲುಗಳಿಂದ ನಾಲಿಗೆ ಕತ್ತರಿಸಿದ ಪರಿಣಾಮ ನೋವಿನಿಂದ ಚಂಪಿ ಜೋರಾಗಿ ಚಿರಾಡಿದ್ದಾನೆ. ಆತನ ಚಿರಾಟ ಕೇಳಿದ ಸ್ಥಳಿಯರು ಸ್ಥಳಕ್ಕಾಗಮಿಸಿ ನೋಡಿದಾಗ, ಆತ ರಕ್ತದ ಮಡುವಿನಲ್ಲಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನು ಓದಿ : ಆಕಸ್ಮಿಕ Snake ಮೇಲೆ ಹರಿದ ಬೈಕ್ – ಮುಂದೆನಾಯ್ತು? ವಿಡಿಯೋ ನೋಡಿ.!
ಉಪ ಪೊಲೀಸ್ ಆಯುಕ್ತ ದಿನೇಶ್ ತ್ರಿಪಾಠಿ ಪ್ರಕರಣವನ್ನು ದೃಢಪಡಿಸಿದ್ದಾರೆ ಮತ್ತು ಕಾನೂನು ಕ್ರಮ ಮುಂದುವರಿಸುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







