Saturday, July 27, 2024
spot_img
spot_img
spot_img
spot_img
spot_img
spot_img

Disease : ಒಂದೇ ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆ ; ಪೋಷಕರಲ್ಲಿ ಆತಂಕ.!

spot_img

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸಗೂರು (Linasaguru) ತಾಲೂಕಿನ ನೀರಲಕೇರಿಯ ಒಂದೇ ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಿದೆ.

ಇನ್ನು ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿ, ಇಡೀ ಶಾಲೆಯನ್ನು ಆವರಿಸಿದೆ. ಮಂಗನ ಬಾವು (mumps virus) ಕಾಯಿಲೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ.

ಇದನ್ನು ಓದಿ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಾಮೀನು ರಹಿತ warrant ಜಾರಿ.!

ಗಂಟಲು ಭಾಗದಲ್ಲಿ ಬಾವು, ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ಬಳಲುತ್ತಿದ್ದಾರೆ. ಬಾವು ಇರುವ ಕಡೆ ಅರಿಶಿಣ (turmeric) ಮತ್ತು ಪಟ್ಟಿ ಹಾಕಿ ಪೋಷಕರು ಮನೆ ಮದ್ದು ನೀಡುತ್ತಿದ್ದಾರೆ.

ಭಾದಿತರಿಗೆ ಆನೆಹೊಸರು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರ ತಿಳಿದು ಗ್ರಾಮದಲ್ಲಿ ಮುಕ್ಕಾಂ ಹೂಡಿರುವ ಆರೋಗ್ಯ ಇಲಾಖೆ (health department) ಅಧಿಕಾರಿಗಳು ಶಾಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಪೋಷಕರು ಭಯಪಡುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಬೇಸಿಗೆಯ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕಾಯಿಲೆ ಬರುತ್ತದೆ.

ಇದನ್ನು ಓದಿ : ಗೋಡಂಬಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಮೂರು-ನಾಲ್ಕು ದಿನಗಳಲ್ಲಿ ಬಾವು ವಾಸಿಯಾಗುವುದು. ಸದ್ಯ ಶಾಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

spot_img
spot_img
- Advertisment -spot_img