ಜನಸ್ಫಂದನ ನ್ಯೂಸ್, ಲಕ್ನೋ : ಉತ್ತರಪ್ರದೇಶದ ಲಕ್ನೋ ನಗರದಲ್ಲಿ ನಡೆದ ಕ್ರೂರ ಘಟನೆ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ. ಇನ್‌ಸ್ಟಾಗ್ರಾಂ (Instagram) ಮೂಲಕ ಪರಿಚಯವಾದ ಸ್ನೇಹಿತನ ಮೇಲೆ ನಂಬಿಕೆ ಇಟ್ಟಿದ್ದ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೀವನವೇ ತತ್ತರಿಸುವಂತಾಗಿದೆ.
ಹೌದು, ಇನ್‌ಸ್ಟಾಗ್ರಾಂ (Instagram) ಗೆಳೆಯನೊಂದಿಗೆ ಜಾಲಿರೈಡ್‌ಗೆ ಹೋಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಬ್ಬರು ಯುವಕರು ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಪತ್ತೆಯಾಗಿದೆ.
ಸಫಾರಿ ವೇಳೆ Tiger ದಾಳಿ : ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರವಾಸಿಗ ; ರೋಮಾಂಚಕಾರಿ ದೃಶ್ಯ ವೈರಲ್.!
ಇನ್‌ಸ್ಟಾಗ್ರಾಂ (Instagram) ಪರಿಚಯದಿಂದ ದುರ್ಬಳಿಕೆಗೆ ದಾರಿ :
ಪೀಡಿತೆಯ ತಾಯಿ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿ ವಿಮಲ್ ಯಾದವ್ ಎಂಬ ಯುವಕನೊಂದಿಗೆ ಇನ್‌ಸ್ಟಾಗ್ರಾಂ (Instagram) ನಲ್ಲಿ ಸಂಪರ್ಕದಲ್ಲಿದ್ದಳು. ದಿನನಿತ್ಯ ಫೋನ್ ಕಾಲ್ ಹಾಗೂ ಚಾಟ್ ಮೂಲಕ ಇಬ್ಬರಿಗೂ ಸ್ನೇಹ ಬೆಳೆದಿತ್ತು. ನವೆಂಬರ್ 2 ರಂದು, ವಿಮಲ್ ಆಕೆಯನ್ನು ಭೇಟಿಯಾಗಲು ಕರೆಸಿಕೊಂಡಿದ್ದನು.
ಅಂದು, ವಿಮಲ್ ತನ್ನ ಇಬ್ಬರು ಸ್ನೇಹಿತರಾದ ಪಿಯೂಷ್ ಮಿಶ್ರಾ ಮತ್ತು ಶುಭಂ ಶುಕ್ಲಾ ಜೊತೆ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದನು. ಆಕೆಯನ್ನು ‘ಜಾಯ್‌ರೈಡ್’ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ವಾಹನಕ್ಕೆ ಹತ್ತಿಸಿದ ಅವರು, ನಂತರ ಐಐಎಂ ರಸ್ತೆಯ ಹೋಟೆಲ್ಗೆ ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಬಲವಂತವಾಗಿ ಇರಿಸಿಕೊಂಡಿದ್ದಾರೆ.
Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!
ಎರಡು ದಿನಗಳ ಕಾಲ ದೌರ್ಜನ್ಯ, ಬಳಿಕ ಪರಾರಿಯಾದ ಆರೋಪಿಗಳು :
ಆರೋಪಿಗಳು ಆಕೆಯ ಫೋನ್ ಕಿತ್ತುಕೊಂಡು, ನಂತರ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ಬಳಿಕ ಆಕೆಯನ್ನು ಮನೆ ಬಳಿ ಬಿಟ್ಟು ಓಡಿಹೋದರೆಂದು ದೂರು ಹೇಳುತ್ತದೆ. ಈ ಅವಧಿಯಲ್ಲಿ ಆಕೆಯನ್ನು ಬೆದರಿಸಿ, “ವಿಡಿಯೋವನ್ನು ಸಾಮಾಜಿಕ ಜಲತಾಣದಲ್ಲಿ” ಹಾಕುವುದಾಗಿ ಧಮ್ಕಿ ಹಾಕಿದ್ದಾರೆ.
ತೀವ್ರ ಆಘಾತಕ್ಕೊಳಗಾದ ಬಾಲಕಿ ಮನೆಗೆ ಹಿಂತಿರುಗಿದಾಗ ಘಟನೆಗೆ ಸಂಬಂಧಿಸಿದ ವಿವರಗಳನ್ನು ತಾಯಿಗೆ ಹಂಚಿಕೊಂಡಿದ್ದಾಳೆ. ತಾಯಿ ತಕ್ಷಣವೇ ಸರೋಜಿನಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.
ಇಬ್ಬರು ಬಂಧನ ; ಮುಖ್ಯ ಆರೋಪಿ ಹುಡುಕಾಟ :
ಪೊಲೀಸರು ಪಿಯೂಷ್ ಮತ್ತು ಶುಭಂ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಮುಖ ಆರೋಪಿ ವಿಮಲ್ ಯಾದವ್ ಪರಾರಿಯಾಗಿದ್ದು, ಅವನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ದಾಖಲಿಸಲಾಗಿದೆ. “ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಲಕ್ನೋ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.
ಸಂಪಾದಕೀಯ :
ಸೋಶಿಯಲ್ ಮೀಡಿಯಾ (Ex: Instagram) ಮೂಲಕ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವ ಮಕ್ಕಳ ಚಟುವಟಿಕೆಗಳ ಮೇಲೆ ಮೊದಲು ಪೋಷಕರು ಕಣ್ಗಾವಲು ಇರಿಸಿಕೊಳ್ಳುವುದು ಅತ್ಯಂತ ಅಗತ್ಯ.
ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ವೇಳೆ, NDA ಬೆಂಬಲಿತ ಪ್ರಚಾರ ವಾಹನದಲ್ಲಿ ಪತ್ತೆಯಾಗಿದ್ದ 17 ಮದ್ಯ (Liquor) ದ ಪೆಟ್ಟಿಗೆಗಳನ್ನು ಗ್ರಾಮಸ್ಥರು ಹೊತ್ತೊಯ್ಯುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧಿತವಿದ್ದರೂ ಸಹ ಮತದಾರರ ಒಲಿಸಿಕೊಳ್ಳಲು ಮದ್ಯ (Liquor) ಹಂಚಲಾಗುತ್ತಿದೆ ಎಂಬ ಆರೋಪವು ಈ ಘಟನೆಯಿಂದ ಕೇಳಿ ಬರುತ್ತಿದೆ.
Attendance ಕೊರತೆಯಿಂದ ಪರೀಕ್ಷೆಗೆ ತಡೆ ಬೇಡ ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು.!
ಮಂಗಳವಾರ ಬೆಳಿಗ್ಗೆ ಗಯಾ ಜಿಲ್ಲೆ, ಗುರಾರು ಪೊಲೀಸ್ ಠಾಣೆ ವ್ಯಾಪ್ತಿಯ ರೌನಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರಚಾರಕ್ಕೆ ಬಳಸಲಾಗುತ್ತಿದ್ದ ಪಿಕಪ್ ಟ್ರಕ್‌ವೊಂದು ಸ್ಥಳೀಯ ಮೋಟಾರ್‌ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಥಳೀಯರು ಪಿಕಪ್ ವಾಹನವನ್ನು ತಡೆದು ವಾಹನದಲ್ಲಿದ್ದವರ ಜೊತೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಪಿಕಪ್ ಟ್ರಕ್ ಪರಿಶೀಲನೆ ಮಾಡಿದಾಗ ಅದರಲ್ಲಿ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳ ಜೊತೆ ಪ್ಲಾಸ್ಟಿಕ್‌ನಿಂದ ಮುಚ್ಚಿದ 17 ಮದ್ಯ (Liquor) ದ ಪೆಟ್ಟಿಗೆಗಳು ಕಂಡುಬಂದವು. ಜನರು ವಾಹನವನ್ನು ಸುತ್ತುವರೆಯುತ್ತಿದಂತೆಯೇ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಇದೇ ವೇಳೆ ವಾಹನದಲ್ಲಿದ್ದ ಕೆಲವು ಮದ್ಯದ ಬಾಕ್ಸ್ ಗಳನ್ನು ಲೂಟಿ ಮಾಡಿದ್ದಾರೆ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎನ್‌ಡಿಎ ಬೆಂಬಲಿತ ಎಚ್‌ಎಎಂ ಅಭ್ಯರ್ಥಿ ದೀಪಾ ಮಾಂಝಿ ಅವರಿಗೆ ಸೇರಿದ ಪಿಕಪ್ ಟ್ರಕ್ ಇದ್ದಾಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ಗುರಾರು ಠಾಣಾಧಿಕಾರಿ ಅಖಿಲೇಶ್ ಕುಮಾರ್, ಪರಿಶೀಲನೆಯ ನಂತರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮಾಲೀಕರು, ಚಾಲಕ ಮತ್ತು ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಬಿಹಾರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ಮಾಡುತ್ತಿದ್ದು, ಅದರಲ್ಲಿ ಮದ್ಯಪಾನ ನಿಷೇಧಿತವಿದ್ದರೂ ಸಹ ಮತದಾರರ ಒಲಿಸಿಕೊಳ್ಳಲು ಮದ್ಯ (Liquor) ಹಂಚಲಾಗುತ್ತಿದೆ ಎಂಬ ಆರೋಪವು ಕೇಳಿ ಬರುತ್ತಿದೆ.
ಮದ್ಯ (Liquor) ದ ಬಾಟಲ್ ಲೂಟಿ ಮಾಡುತ್ತಿರುವ ವಿಡಿಯೋ :
View this post on Instagram







