ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿಯಲ್ಲಿ ಆದ್ಯಾರು ರಾಜಕೀಯ ಮಾಡುತ್ತಾರೆ. ನಾನು ನೋಡಿಯೇ ಬಿಡುತ್ತೇನೆ. ನಮ್ಮ ಕಾರ್ಯಕರ್ತರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಾನು ನಿಮ್ಮ ಹಿಂದಿದ್ದೇನೆ.ಬಿಜೆಪಿ ಪಕ್ಷವೂ ಇದೆ. ಇಲ್ಲಿ ಯಾರು ಯಾರಿಗೂ ಹೆದರುವ ಪ್ರಶ್ನೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಕೋಟೆಯಲ್ಲಿ ಗುಡುಗಿದ್ದಾರೆ. ಜೊತೆಗೆ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಭರವಸೆ ಕೊಟ್ಟಿದ್ದರೂ ಆದರೆ, ಯಾವುದನ್ನೂ ಙರವಸೆ ಈಡೇರಿಸಿಲ್ಲ. ಸಿದ್ದರಾಮಯ್ನವರು ಕುರ್ಚಿ ಮೇಲೆ ಕುಳಿತಾಗ ಎಲ್ಲವೂ ಮರೆತಿದ್ದಾರೆ. ರಾಜ್ಯದ ಜನರನ್ಮು ಬೀಕ್ಷುಕರಂತೆ ನೋಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದವೂ ವಾಗ್ದಾಳಿ ನಡೆಸಿದರು.
ಇದನ್ನು ಓದಿ : Lion : ರಣ ಹದ್ದುಗಳ ಜೊತೆ ಕಾಡಿನ ರಾಜನ ಕಾದಾಟ ; ವಿಡಿಯೋ ವೈರಲ್.!
ಮಹಿಳೆಯರಿಗೆ ಬಸ್ ಫ್ರೀ ಅಂತ ಹೇಳ್ತಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಬಸ್ ಗಳೇ ಇಲ್ಲ. ಇದಲ್ಲದೇ ಇವರು ಆರೂವರೇ ಸಾವಿರ ಕೋಟಿ ರೂ ಕೆಎಸ್ ಆರ್ ಟಿಸಿಗೆ ಕೊಡಬೇಕು. ಅದು ಕೊಡಲು ಆಗುತ್ತಿಲ್ಲ. ಮೊನ್ನೆ ಕಲಬುರಗಿಯಲ್ಲಿ ಉದ್ಯೋಗ ಮೇಳ ಮಾಡಿದ್ರು. ಕೋಟ್ಯಾಂತರ ರೂ ಖರ್ಚು ಮಾಡಿ,
1200 ಉದ್ಯೋಗ ಕೊಟ್ಟಿದ್ದಾರೆ. ಇದು ಅವರ ಸಾಧನೆ ನೋಡಿ ಎಂದು ವ್ಯಂಗ್ಯವಾಡಿದರು.
ಪ್ರತಿನಿತ್ಯ ಬೆಲೆ ಏರಿಕೆ ಮಾಡ್ತಿದ್ದಾರೆ. ಒಂದು ಕೈಯಿಂದ ಉಚಿತ ಕೊಟ್ಟು ಬೆಲೆ ಏರಿಕೆಯಿಂದ ದುಪ್ಪಟ್ಟು ಕಸಿದುಕೊಳ್ಳುತ್ತಿದ್ದಾರೆ ಎಂದು ಬೆಲೆ ಏರಿಕೆ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು.
ಜೀವಕ್ಕೆ ಹತ್ತು ಲಕ್ಚ ಬೆಲೆ ಕಟ್ಟುತ್ತಿದ್ದಾರೆ ಎಂದ ಅವರು ಕಲಬುರಗಿ ಯಲ್ಲಿ ಮೂರ್ಖ, ನಾಲಾಯಕ ರಾಜಕಾರಣಿಗಳಿದ್ದಾರೆ.
ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!
ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ದಲಿತರ ಓಟ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಿಜವಾಗ್ಲೂ ಸಚಿವ ಪ್ರಿಯಾಂಕ್ ಖರ್ಗೆಗೆ ದಲಿತ ಪರ ಕಾಳಜಿ ಇಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಸ್ಥಾನದ ಗೌರವ ಸಿದ್ದರಾಮಯ್ಯ ಕಳೆದಿದ್ದಾರೆ. ವೀರಶೈವ ಲಿಂಗಾಯತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಿರಾ ಎಂದರು.
ಕಲಬುರಗಿ ಬಿಜೆಪಿ ನಾಯಕರಿಗೆ ಬುದ್ದಿ ಮಾತು ಹೇಳಿದ ವಿಜಯೇಂದ್ರ, ಚುನಾವಣೆಗೆ ಹೊಂದಾಣಿಕೆ ರಾಜಕಾರಣಿ ಮಾಡಬಾರದು. ಎಲ್ಲರೂ ಸವಾಲಾಗಿ ಸ್ವೀಕರಿಸಬೇಕು. ನಾನಿದ್ದೆನೆ. ಕಲಬುರಗಿಯಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ ಎಂದು ಧೈರ್ಯ ತುಂಬಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ನಿನೇನು? ಅಭಿವೃದ್ಧಿ ಮಾಡಿದ್ದಿ ತೋರಿಸು ಎಂದು ಪ್ರಶ್ನೆ ಮಾಡಿದರು.