ಜನಸ್ಪಂದನ ನ್ಯೂಸ್, ಉ.ಪ್ರ : ಅಯೋಧ್ಯೆ ಜಿಲ್ಲೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲೇ ಇದ್ದ ಅತ್ತೆಗೆ ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಪಿಸುಮಾತುಗಳು ಹಾಗೂ ಅಸಹಜ ಶಬ್ದಗಳು (noise) ಕೇಳಿ ಬಂದ ನಂತರ, ಕೋಣೆಯಲ್ಲಿ ಪರಿಸ್ಥಿತಿ ಏನೋ ತಪ್ಪಾಗಿದೆ ಎಂಬ ಅನುಮಾನ ಹುಟ್ಟಿತ್ತು. ಶಬ್ದದ (noise) ಮೂಲವನ್ನು ತಿಳಿಯಲು ಹುಡುಕಾಡಿದ ಅತ್ತೆ ಕೊನೆಗೆ ಕೋಣೆ ಬಾಗಿಲು ತೆರೆಯುತ್ತಿದ್ದಂತೆಯೇ ನಂಬಲು ಆಗದ ದೃಶ್ಯ ಕಣ್ಣಿಗೆ ಬಿದ್ದಿದೆ.
ಇಬ್ಬರು ಮಕ್ಕಳ ತಾಯಿಯಾಗಿರುವ 30 ವರ್ಷದ ಸೊಸೆ ತನ್ನ ಪ್ರಿಯಕರನೊಂದಿಗೆ ಕೋಣೆಯಲ್ಲಿದ್ದಳು. ಬರುವ ಶಬ್ದ (noise) ಕೇಳಿ ಹೆದರಿದ ಯುವಕ (ಪ್ರಿಯಕರ) ಮಂಚದ ಕೆಳಗೆ ಅಡಗಿ ಕುಳಿತಿರುವುದನ್ನು ಅತ್ತೆ ಕಂಡು ಬೆಚ್ಚಿಬಿದ್ದಳು. ಆಕೆ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಮಾವ ನಾಗ್ಪುರ್‌ಗೆ ತೆರಳಿರುವ ವೇಳೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.
ಘಟನೆಯ ಸಮಯದಲ್ಲಿ ಅತ್ತೆ ಮೊಮ್ಮಕ್ಕಳೊಂದಿಗೆ ಮಲಗಿದ್ದಳು. ಕೆಲವು ಸಮಯದಿಂದಲೇ ಸೊಸೆಯ ಕೋಣೆಯಿಂದ ಶಬ್ದಗಳು (noise) ಕೇಳಿಬಂದ ಕಾರಣ, ಅತ್ತೆ ನೆರೆಹೊರೆಯವರನ್ನು ಕರೆದು ಸಹಾಯ ಕೇಳಿದ್ದರು.
ಸ್ಥಳೀಯರು ಬಂದು ಬಾಗಿಲು ತೆರೆಯುವಾಗ ಪ್ರಿಯಕರನ ಉಪಸ್ಥಿತಿ ಬಹಿರಂಗಗೊಂಡಿತು. ನಂತರ ಗ್ರಾಮದಲ್ಲಿ ಗಲಾಟೆಯ ಶಬ್ದ (noise) ಉಂಟಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.
ಮಾಹಿತಿಯ ಪ್ರಕಾರ, 25 ವರ್ಷದ ಯುವಕ ಕೆಲಕಾಲದಿಂದಲೇ ಮಧ್ಯರಾತ್ರಿ ಮಹಿಳೆಯನ್ನು ಭೇಟಿ ಮಾಡಲು ಬರುತ್ತಿದ್ದ. ಮದುವೆಯ ನಂತರವೂ ಅವರ ಸಂಬಂಧ ಮುಂದುವರಿದಿತ್ತು ಎಂಬುದು ಗ್ರಾಮಸ್ಥರ ಹೇಳಿಕೆ.
ಈ ಘಟನೆ ಬಗ್ಗೆ ತಿಳಿದಂತೆಯೇ ದುಬೈನಲ್ಲಿದ್ದ ಮಹಿಳೆಯ ಪತಿ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣವೇ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ.
ಗ್ರಾಮಸ್ಥರು ನಂತರ ಸಭೆ ನಡೆಸಿ, ಇಬ್ಬರೂ ಒಟ್ಟಿಗೆ ವಾಸಿಸಲು ಬಯಸಿದರೆ ಸಮಾಜದ ದೃಷ್ಟಿಯಿಂದ ಮದುವೆಯಾಗಬೇಕು ಎಂದು ಸಲಹೆ ನೀಡಿದರು. ಮಹಿಳೆ ವಿಚಾರವಾಗಿ ತನ್ನ ಪ್ರಿಯಕರನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದು, ಮದುವೆ ಮಾಡಲು ಸಿದ್ಧತೆಗಳು ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈ ಘಟನೆ ಯುವಕನ ಕುಟುಂಬಕ್ಕೂ ಆಘಾತ ತಂದಿದೆ.
ಇದನ್ನು ಓದಿ : Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.
ಪುರ ಕಲಂದರ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲೇಶ್ ಸಾಹ್ನಿ ಮಾತಿನಂತೆ, ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಎರಡೂ ಕುಟುಂಬಗಳು ಪರಸ್ಪರ ವಿವಾಹಕ್ಕೆ ಒಪ್ಪಿಕೊಂಡಿದ್ದು, ಈ ಸಂಬಂಧ ಯಾವುದೇ ದೂರು ನೀಡಲಾಗಿಲ್ಲ.
ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಸೊಶಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನೃತ್ಯ (Dance), ಮನರಂಜನೆ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ತಮ್ಮಷ್ಟಕ್ಕೆ ಎಂಜಾಯ್ ಮಾಡುವುದನ್ನು ನಾವು ದಿನವೂ ವಿಡಿಯೋಗಳಲ್ಲಿ ನೋಡುತ್ತೇವೆ. ಆದರೆ ಕೆಲವು ಕುಟುಂಬಗಳಲ್ಲಿ ಮಹಿಳೆಯರು ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ನೃತ್ಯ (Dance) ಮಾಡುವುದನ್ನು ಇನ್ನೂ ಒಪ್ಪಿಕೊಳ್ಳುವುದಿಲ್ಲ.
ಇದಕ್ಕೆ ಉದಾಹರಣೆ ಎಂಬಂತೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹೊಸ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ವಿವಾಹಿತೆಯೊಬ್ಬರು ಜೋಶ್‌ನೊಂದಿಗೆ ಸ್ಟೇಜ್ ಬಳಿ ನಿಂತು ಪುರುಷರ ಮಧ್ಯದಲ್ಲಿ ಅನಾಯಾಸವಾಗಿ ನೃತ್ಯ (Dance) ಮಾಡುತ್ತಿದ್ದರು.
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಆದರೆ ಅದೆಲ್ಲವನ್ನು ಗಮನಿಸುತ್ತಿದ್ದ ಆಕೆಯ ಪತಿ ಇದನ್ನು ಸಹಿಸಿಕೊಳ್ಳದೆ ತೀವ್ರ ಆಕ್ರೋಶಗೊಂಡಿದ್ದಾನೆ.
ವಿಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಗಂಡನು ಕೂಡ ಸ್ಟೆಪ್ (Dance) ಹಾಕುವಂತೆ ಮುಂದಕ್ಕೆ ಬಂದು, ಅಚಾನಕವಾಗಿ ಹೆಂಡತಿಗೆ ಲತ್ತೆ ನೀಡುತ್ತಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯೂ ತಕ್ಷಣ ಗಂಡನಿಗೂ ಸಹ ಡಾನ್ಸ್ (Dance) ಮಾಡುತ್ತ ಎದುರಾಗಿ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಂತರ ಗಂಡನು ಆಕೆಯನ್ನು ಥಳಿಸಿ, ಬಲವಂತವಾಗಿ ಸ್ಥಳದಿಂದ ಕರೆದುಕೊಂಡು ಹೋಗುತ್ತಾನೆ.
ಈ ಘಟನೆ ನಡೆದ ಸ್ಥಳ ಮತ್ತು ಸಮಯ ಸ್ಪಷ್ಟವಾಗಿಲ್ಲ. ಆದರೆ ಈ ಸಂಪೂರ್ಣ ಘಟನೆ ಸೆರೆಹಿಡಿದ ವಿಡಿಯೋ ಈಗ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ವೈರಲ್ ಆಗಿದೆ.
ವಿಡಿಯೋ ಕುರಿತು ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದು, ಮಹಿಳೆಯ ಸ್ವಾತಂತ್ರ್ಯ, ಕುಟುಂಬದ ನಿಯಮಗಳು ಹಾಗೂ ಸಾಮಾಜಿಕ ದೃಷ್ಟಿಕೋನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.
ಮಹಿಳೆಯ ಡಾನ್ಸ್ (Dance) ವಿಡಿಯೋ :
Kalesh b/w a Couple while dancing in marriage ceremony
pic.twitter.com/s2AvVFz3nU— Ghar Ke Kalesh (@gharkekalesh) December 5, 2025
Disclaimer : The information provided in this article is based on a video/post currently circulating on social media. Janaspandan News does not confirm any claim or authenticity regarding this.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






