ಗುರುವಾರ, ನವೆಂಬರ್ 27, 2025

Janaspandhan News

HomeCrime Newsಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.
spot_img
spot_img
spot_img

ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಯುವಕನೊಬ್ಬನನ್ನು ರಸ್ತೆ ಮಧ್ಯೆ ಥಳಿಸಿ ಕೊಲೆ (Murder) ಮಾಡಿರುವ ಘಟನೆ ನಡೆದಿದ್ದು, ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ವಿವಾಹಿತೆಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ನರಸಿಂಹರಾಜು (32) ಎಂಬಾತನ ಮೇಲೆ ಮಹಿಳೆಯ ಕುಟುಂಬಸ್ಥರು ದಾಳಿ ನಡೆಸಿ ಕೊಲೆ (Murder) ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.
ಮನೆಯಿಂದಲೇ ಎಳೆದುಕೊಂಡು ರಸ್ತೆ ಮಧ್ಯೆ ಹಲ್ಲೆ :

ಕಳೆದ ಶನಿವಾರ, ಸಂಬಂಧ ಹೊಂದಿದ್ದ ಮಹಿಳೆ ನರಸಿಂಹರಾಜು ಮನೆಗೆ ಬಂದಿದ್ದಳು. ಈ ಮಾಹಿತಿ ಮಹಿಳೆಯ ಕುಟುಂಬಸ್ಥರಿಗೆ ತಿಳಿದಿತ್ತು. ತಕ್ಷಣ ನಾಲ್ಕೈದು ಮಂದಿ ನರಸಿಂಹರಾಜು ಮನೆಯಲ್ಲಿ ಪ್ರವೇಶಿಸಿ, ಆತನನ್ನು ಹೊರಗೆ ಎಳೆದುಕೊಂಡು ರಸ್ತೆ ಮೇಲೆ ನಿರ್ದಯವಾಗಿ ಥಳಿಸಿದ್ದಾರೆ ಎಂದು ಆರೋಪ.

ಹಲ್ಲೆಯಲ್ಲಿ ಮಧ್ಯೆ ಪ್ರವೇಶಿಸಿ ತಡೆಯಲು ಬಂದ ನರಸಿಂಹರಾಜು ತಾಯಿಯ ಮೇಲೂ ಹಲ್ಲೆ ನಡೆಯಿತು ಎಂದು ಕುಟುಂಬಸ್ಥರು ನೀಡಿದ್ದಾರೆ.

ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಿಲ್ಲ :

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನರಸಿಂಹರಾಜುವನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಕ್ತಸ್ರಾವ ಹೆಚ್ಚಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಇದನ್ನು ಓದಿ : “ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.

ಕುಟುಂಬ ಸದಸ್ಯರು, “ಈ ಸಾವಿಗೆ (Murder) ಆ ಮಹಿಳೆ ಮತ್ತು ಆಕೆಯ ಕುಟುಂಬಸ್ಥರೇ ಕಾರಣ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೊಲೆ (Murder) ಪ್ರಕರಣ ದಾಖಲು – ಬಂಧನ ಇನ್ನೂ ಇಲ್ಲ :

ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ (Murder) ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ಇನ್ನೂ ಬಂಧನವಾಗಿಲ್ಲ ಎಂಬುದು ನರಸಿಂಹರಾಜು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸರು ಪೋಸ್ಟ್‌ಮಾರ್ಟಂ ವರದಿಗಾಗಿ ಕಾಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.


Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

Free bus ticket

ಜನಸ್ಪಂದನ ನ್ಯೂಸ್‌, ಮೈಸೂರು : ಭಾನುವಾರ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ, ಮೈಸೂರಿನಿಂದ ತುಮಕೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಒಬ್ಬ ಮಹಿಳೆಯು ಉಚಿತ (Free) ಟಿಕೆಟ್ ಪಡೆದಿದ್ದರೂ ಮಾರ್ಗ ಮಧ್ಯೆ ಇಳಿದು ಬಸ್ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಮೈಸೂರಿನಿಂದ ಬಸ್ ಹತ್ತಿ, ಶಕ್ತಿ ಯೋಜನೆಯಡಿ ಉಚಿತ (Free) ಟಿಕೆಟ್ ಪಡೆದಿದ್ದರೇ, ಬಸ್ ಮಾರ್ಗ ಮಧ್ಯದಲ್ಲಿ ಇಳಿದು ಹೋಗಿದ್ದಾರೆ.

ಇದನ್ನು ಗಮನಿಸಿದ ಬಸ್ ಕಂಡಕ್ಟರ್ ನಿಯಮಾನುಸಾರ ಪ್ರಶ್ನೆ ಕೇಳಿದ್ದರು. ಆದರೆ ಮಹಿಳೆ ಬಾಯಿಗೆ ಬಂದಂತೆ ಉತ್ತರ ನೀಡಿ, ಕಂಡಕ್ಟರ್‌ನ್ನು ಶರ್ಟ್ ಕಾಲರ್ ಹಿಡಿದು ಎಳೆದಿದ್ದಾರೆ.

ಇದನ್ನು ಓದಿ : ಭಾರತದಲ್ಲಿ CNAP ವ್ಯವಸ್ಥೆ ಜಾರಿ : ಕರೆ ಬಂದಾಗ ಮೊದಲು ಆಧಾರ್ ಹೆಸರು ತೋರಿಸುತ್ತೆ.
ಬಸ್ ಕಂಡಕ್ಟರ್ ಹೇಳೋದೇನು?

“ಶಕ್ತಿ ಯೋಜನೆಯಡಿ Free ಟಿಕೆಟ್ ಪಡೆದ ಮಹಿಳೆಯರು ಮಾರ್ಗ ಮಧ್ಯೆ ಬಸ್‌ನಿಂದ ಇಳಿದಾಗ, ನಾವು ಸಮಸ್ಯೆಯನ್ನು ಎದುರಿಸುತ್ತೇವೆ. ಟಿಕೆಟ್ ಚೆಕ್ ಮಾಡುವ ಸಂದರ್ಭದಲ್ಲಿ ನಾವು ಉತ್ತರ ನೀಡಬೇಕಾಗುತ್ತದೆ. ಹೀಗಾಗಿ Free ಟಿಕೆಟ್ ಪಡೆದ ಹಿನ್ನಲೆಯಲ್ಲಿ ಮಾರ್ಗ ಮಧ್ಯೆ ಇಳಿಯದಂತೆ ಮನವಿ ಮಾಡಿದೆವು. ಆದರೆ ಮಹಿಳೆ ಬಾಯಿಗೆ ಬಂದಂತೆ ಮಾತಾಡಿ, ಶರ್ಟ್ ಕಾಲರ್ ಹಿಡಿದು ಎಳೆದರು.” ಎಂದಿದ್ದಾರೆ.

ಸಾರಿಗೆ ನೌಕರರ ಸುರಕ್ಷತೆ ಪ್ರಶ್ನೆ:

ಈ ಘಟನೆಯನ್ನು ಸಂಬಂಧಪಟ್ಟ ಜಿಲ್ಲಾ ಸಾರಿಗೆ ಇಲಾಖೆ ಮತ್ತು ಸಾರ್ವಜನಿಕರ ಗಮನಕ್ಕೆ ತಲುಪಿದೆ. ಮಹಿಳೆಯ ದೈಹಿಕ ಹಲ್ಲೆ, ಸರ್ಕಾರಿ ಉದ್ಯೋಗಿಯ ಮೇಲಿನ ಅಗೌರವ ಹಾಗೂ ಸೇವಾ ಪರಿಸರವನ್ನು ಕುಗ್ಗಿಸುವಂತಹ ವರ್ತನೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ಸರಕಾರವು ಸಾರಿಗೆ ಸಿಬ್ಬಂದಿಯ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನು ಓದಿ : ಕ್ಯಾಥೋಲಿಕ್ School ಮೇಲೆ ದಾಳಿ : 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ.
ಸಾರ್ವಜನಿಕ ಪ್ರತಿಕ್ರಿಯೆ :

ಶಕ್ತಿ ಯೋಜನೆ (Free Bus) ಜಾರಿ ಬಳಿಕ, ವಿವಿಧ ಬಸ್ ಸೇವೆಗಳಲ್ಲಿ ಪ್ರತಿದಿನ ಮೌಖಿಕ ನಿಂದನೆ, ವಾಗ್ವಾದ ಮತ್ತು ದೈಹಿಕ ಹಲ್ಲೆಗಳ ಘಟನೆಗಳು ವರದಿಯಾಗುತ್ತಿವೆ. ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರು ಇಂತಹ ದೌರ್ಜನ್ಯ ಮತ್ತು ಅಸುರಕ್ಷಿತ ವಾತಾವರಣವನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ನೀಡಿದ್ದಾರೆ.

ಉಚಿತ (Free) ಟಿಕೆಟ್ ಪಡೆದು ಹಲ್ಲೆ ಮಾಡಿದ ಮಹಿಳೆಯ ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments