Friday, October 18, 2024
spot_img
spot_img
spot_img
spot_img
spot_img
spot_img
spot_img

ಜನರಿಂದ ತುಂಬಿ ತುಳುಕುತ್ತಿದ್ದ ಜಾತ್ರೆಯಲ್ಲಿ ತಬ್ಬಿಕೊಂಡು ಕಿಸ್ ಮಾಡಿದ ಲವರ್ಸ್ ; ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಸ್, ಟ್ರೇನ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮರ್ಯಾದೆ ಇಲ್ಲದೇ ಜೋಡಿಗಳು ಚುಂಬಿಸುತ್ತಿರುವ ಘಟನೆಗಳು ಸಾಮಾನ್ಯವಾಗಿ ಬಿಟ್ಟಿವೆ.

ಆದರೆ ಇಲ್ಲೊಂದು ಜೋಡಿ ಸವಾಲನ್ನು ಸ್ವೀಕರಿಸಿ ಜಾತ್ರೆಯಲ್ಲಿ ಎಲ್ಲರ ಮುಂದೆ ತಬ್ಬಿಕೊಂಡು ಚುಂಬಿಸಿದ ದೃಶ್ಯಗಳು ಹಲವರ ಮೊಬೈಲ್‌ನಲ್ಲಿ ಸೆರೆಯಾಗಿವೆ.

ಇದನ್ನು ಓದಿ : ನೀವು ಜೀವಮಾನ ಪೂರ್ತಿ ಒಂಟಿಯಾಗಿಯೇ ಕಳೀಬಾರದು ಅಂದ್ರೆ ಹೀಗೆ ಮಾಡಲೇ ಬೇಡಿ.!

ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಮೀರತ್‌ನ ಈ ಯುವ ಜೋಡಿಯನ್ನು ನೋಡಿದ ಪರಿಯಚಸ್ಥರು, ಸ್ಥಳೀಯರು ಇವರ ಸಂಬಂಧವನ್ನು ಪ್ರಶ್ನೆ ಮಾಡುತ್ತಿದ್ದರಂತೆ ನಿಮ್ಮಬ್ಬರ ನಡುವೆ ಏನಿದೆ? ಎಲ್ಲಾ ಕಡೆ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಸುತ್ತಾಡ್ತೀರಾ ಎಂದು ಹಲವು ಪ್ರಶ್ನೆಗಳನ್ನು ಈ ಜೋಡಿ ಎದುರಿಸಿದೆ.

ಮೀರತ್‌ನ ನೌಚಂಡಿ ಮೇಳದಲ್ಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ. ಈ ವೇಳೆ ಸಿಕ್ಕ ಪರಿಚಯಸ್ಥರೂ ಮತ್ತೆ ಪ್ರಶ್ನಿಸಿ ಇವರನ್ನು ಹಂಗಿಸಿದ್ದಾರೆ‌. ಚುಚ್ಚು ಮಾತು, ಪ್ರಶ್ನೆಗಳಿಂದ ರೋಸಿ ಹೋದ ಜೋಡಿ ಇದನ್ನು ಸವಾಲಾಗಿ ಸ್ವೀಕರಿಸಿದೆ.

ಇದನ್ನು ಓದಿ : ಖಾಸಗಿ video ವೈರಲ್ ಮಾಡುವ ಬೆದರಿಕೆ ; ನಕಲಿ ಪೊಲೀಸಪ್ಪನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ.!

ಜಾತ್ರೆಯಲ್ಲಿ ಎಲ್ಲರ ಮುಂದೆಯೇ ಸುದೀರ್ಘವಾಗಿ ಕಿಸ್ ಮಾಡಿದ್ದಾರೆ. ಈ ಮೂಲಕ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಸಾಬೀತುಪಡಿಸಿದ್ದಾರೆ. ಈ ಜೋಡಿಗಳು ಚುಂಬಿಸುತ್ತಿದ್ದಂತೆ ಸುತ್ತ ಮುತ್ತ ನೆರೆದಿದ್ದವರು ಚಪ್ಪಾಳೆ, ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ.

ಅಲ್ಲಿದ್ದ ಕೆಲವರು ಜೋಡಿಯ ಈ ಚುಂಬನ ದೃಶ್ಯಗಳನ್ನು ರೆಕಾರ್ಡ್ ಮಾಡದಂತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಹಲವರ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ. ಬಳಿಕ ಅಷ್ಟೇ ವೇಗದಲ್ಲಿ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಇದನ್ನು ಓದಿ : ಸೀರೆಯುಟ್ಟ ನಾರಿಯಿಂದ ‘ತೌಬಾ ತೌಬಾ’ ಸಾಂಗ್ ಗೆ ಸಖತ್ ಸ್ಟೆಪ್ಸ್ ; Video ಪುಲ್ ವೈರಲ್..!

ಈ ವಿಡಿಯೋ ವೈರಲ್ ಬಳಿಕ ಜೋಡಿಗೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕ ಪ್ರದೇಶ, ಅದರಲ್ಲೂ ಜಾತ್ರೆಯಲ್ಲಿ ಈ ರೀತಿ ವರ್ತಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ನೌಚಂಡಿ ಮೇಳ 1672ರಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಈ ಮೇಳ ನಡೆಯುತ್ತದೆ. ಈ ವೇಳೆ ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುತ್ತದೆ. ಎತ್ತುಗಳ ಓಟದಿಂದ ಆರಂಭಗೊಂಡ ಈ ಜಾತ್ರೆಯಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img