ಜನಸ್ಪಂದನ ನ್ಯೂಸ್, ಡೆಸ್ಕ್ : ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಸಂಬಂಧ (relationship) ಇಟ್ಟುಕೊಳ್ಳುವುದು ಈಗಂತೂ ಸಾಮಾನ್ಯವಾಗಿ ಬಿಟ್ಟಿದೆ.
ಅದೇ ರೀತಿ ಯುವಕನೋರ್ವ ತಾನು 8 ವರ್ಷಗಳ ಕಾಲ ಪ್ರೀತಿಸಿದ ಯುವತಿಗೆ (A young woman who loved for 8 years) ಮೋಸ ಮಾಡಿ ಇನ್ನೊಬ್ಬಳ ಜೊತೆ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದು, ಈತನ ಮೋಸದಾಟಕ್ಕೆ ಬೇಸತ್ತ ಗೆಳತಿ ಆತನ ಮರ್ಮಾಂಗವನ್ನೇ ಚಾಕುವಿನಿಂದ ಕತ್ತರಿಸಿ ಸೇಡು ತೀರಿಸಿಕೊಂಡ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ (Muzaffar city of Uttar Pradesh) ಇಂತದ್ದೊಂದು ಆಘಾತಕಾರಿ ಘಟನೆ ನಡೆದಿದ್ದು, ಯುವತಿಯೊಬ್ಬಳು ಲವ್ವರ್ ನ ಜನನಾಂಗವನ್ನು ಕತ್ತರಿಸಿ ಅದೇ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ (She tried to commit suicide) ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಪ್ರಕರಣದ ಆರೋಪಿ ಜಯೇಶ್ ಹಿಂಡಲಗಾ ಜೈಲಲ್ಲೇ ಆತ್ಮಹತ್ಯೆಗೆ ಯತ್ನ.!
ಯುವಕನೊಬ್ಬ ತಾನು 8 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಗೆ ವಂಚಿಸಿ (fraud) ಬೇರೆಯವಳನ್ನು ಮದುವೆಯಾಗಲು ಸಿದ್ಧನಾಗಿದ್ದ. ಈ ವಿಷಯ ತಿಳಿದ ಯುವತಿ ಮಾತನಾಡ ಮಾತನಾಡಬೇಕೆಂದು ಆತನನ್ನು ಕರೆಸಿಕೊಂಡಿದ್ದಾಳೆ. ಕಾರಿನಲ್ಲಿಯೇ ಕುಳಿತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಚಾಕು ತೆಗೆದು ಆತನ ಜನನಾಂಗವನ್ನು ಕತ್ತರಿಸಿದ್ದಾಳೆ. ಅಷ್ಟೇ ಅಲ್ಲದೆ ಅದೇ ಚಾಕುವಿನಿಂದ ತನ್ನ ಕೈ ಸಹ ಕೊಯ್ದುಕೊಂಡಿದ್ದಾಳೆ. ಘಟನೆಯ ಬಳಿಕ ಆ ಯುವತಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೋದಲ್ಲಿ ಗೆಳೆಯನ ಜನನಾಂಗವನ್ನು ಕತ್ತರಿಸಿದ ಯುವತಿಯನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ :
This Lady was having a love affair with a young man for 8 years. Madam got the news that the boyfriend wants to marry another girl, Called to meet. They were in the car for several hours. Suddenly Madam took out a knife and Chooped-off the lover's private part pic.twitter.com/PNgcmVacyx
— Ghar Ke Kalesh (@gharkekalesh) December 23, 2024
ಹಿಂದಿನ ಸುದ್ದಿ : Health : ಚಳಿಗಾಲದಲ್ಲಿ ನೆನಸಿದ ಒಂದು ಹಿಡಿ ಶೇಂಗಾ ತಿಂದ್ರೆ ಏನಾಗುತ್ತೆ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಶೇಂಗಾ (Peanuts) ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಪ್ರೋಟೀನ್, ಕ್ಯಾಲಿಯಂ, ಫೈಬರ್, ವಿಟಮಿನ್ ಎ, ವಿಟಮಿ ಬಿ1, ಬಿ3, ಮೆಗ್ನೇಸಿಯಂ, ಪೊಟ್ಯಾಸಿಯಂ, ಮತ್ತು ಆರೋಗ್ಯಕ ಕೊಬ್ಬುಗಳಿಂದ ಸಮೃದ್ಧವಾಗಿದೆ.
ಶೇಂಗಾ ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು (Polyunsaturated and monounsaturated fats) ಸಮೃದ್ಧವಾಗಿದೆ. ಇವು ಹೃದಯಕ್ಕೆ ಆರೋಗ್ಯಕರ ಕೊಬ್ಬುಗಳಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ (Lower bad cholesterol levels), ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನು ಓದಿ : C.T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!
ಶೇಂಗಾ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಈ ಶೇಂಗಾವನ್ನು ನೇರವಾಗಿ ಸೇವಿಸುವುದಕ್ಕಿಂತ ನೆನಸಿಟ್ಟು ತಿನ್ನುವುದರಿಂದ ಇನ್ನು ಹೆಚ್ಚು ಆರೋಗ್ಯ ಪ್ರಯೋಜನಗಳು ಪಡೆಯಬಹುದಾಗಿದೆ.
ಹಾಗಾದರೆ ಶೇಂಗಾವನ್ನು ನೆನಸಿಟ್ಟು (soaking peanuts) ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.? ಅಂತ ತಿಳಿಯೋಣ.
* ಶೇಂಗಾದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಕಾರಿಯಾಗಿವೆ.
* ಪ್ರತಿದಿನ ಬೆಳಿಗ್ಗೆ ನೆನೆಸಿದ ಶೇಂಗಾ ತಿನ್ನುವುದರಿಂದ ರಕ್ತ ಪರಿಚಲನೆ (blood circulation) ಸುಧಾರಿಸುವುದು.
ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!
* ಹಲವಾರು ರೋಗಗಳು ಮತ್ತು ಸೋಂಕುಗಳನ್ನು ನಿಯಂತ್ರಿಸಬಹುದಾಗಿದೆ (Diseases and infections can be controlled).
* ಶೇಂಗಾದಲ್ಲಿ ದೃಷ್ಟಿ ಸುಧಾರಣೆಗೆ (Vision improvement) ಸಹಾಯ ಮಾಡುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳಿವೆ.
* ಶೇಂಗಾ ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವೆಂದು ಹೇಳಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
* ನೆನಸಿದ ಶೇಂಗಾ ತಿನ್ನುವುದರಿಂದ ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸಬಹುದು.
* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೂಳೆಗಳು ಬಲವಾಗುತ್ತವೆ. ಅಲ್ಲದೇ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.