ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಕಾಡಿನಲ್ಲಿ ಎಲ್ಲಾ ಕಾಡುಪ್ರಾಣಿಗಳನ್ನು ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವೇ ಪ್ರತಿ ಬಾರಿ ಬೇಟೆಯಾಡುವುದನ್ನು ನೋಡಿದ್ದೇವೆ.
ಆದರೆ ಸದ್ಯ social media ದಲ್ಲಿ ವೈರಲ್(Viral) ಆಗುತ್ತಿರುವ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ. ಏಕೆಂದ್ರೆ ಸಿಂಹವನ್ನೇ ಕಾಡಿನ ಒಂದು ಪ್ರಾಣಿ ಅಟ್ಟಾಡಿಸಿದೆ.
Read it : ಭೀಕರ ವಿಮಾನ ಅಪಘಾತ ; 65 ಕ್ಕೂ ಹೆಚ್ಚು ಸಾವು : ಭಯಾನಕ ವಿಡಿಯೋ ವೈರಲ್.!
ಹೌದು, viral ಆಗಿರೋ ವಿಡಿಯೋದಲ್ಲಿ ಕಾಡು ಎಮ್ಮೆಯನ್ನು ಬೇಟೆಯಾಡುವ ಉದ್ದೇಶದಿಂದ ಸಿಂಹವೊಂದು ದಾಳಿ ಮಾಡಿದೆ. ಆದರೆ ಇಲ್ಲಿ ಸಿಂಹದ ಮೇಲೆಯೇ ಕಾಡು ಎಮ್ಮೆ ಧಾವಿಸಿದ ಪರಿಣಾಮ ಸಿಂಹ ಎದ್ನೋ ಬಿದ್ನೋ ಅಂತ ಓಡಿ ಹೋಗಿದೆ.
ವಿಡಿಯೋದಲ್ಲಿ ಕಾಣುವಂತೆ ಸಿಂಹ ಬೇಟೆಯಾಡಲು ಕಾಡು ಎಮ್ಮೆ ಮೇಲೆ ದಾಳಿ ಮಾಡಿದೆ. ಸಿಂಹ ತನ್ನ ಗಂಟಲನ್ನು ಗಟ್ಟಿಯಾಗಿ ಹಿಡಿದಿದ್ದರು ಸಹ ತನ್ನೇಲ್ಲಾ ಶಕ್ತಿ ಪ್ರಯೋಗಿಸಿ ಸಿಂಹದ ಬಾಯಿಯಿಂದ ಕಾಡು ಎಮ್ಮೆ ತಪ್ಪಿಸಿಕೊಳ್ಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.
Read it : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!
ಗಾಯಗೊಂಡ ಕಾಡು ಎಮ್ಮೆ ರುದ್ರಾವತಾರ ತಾಳಿ ಸಿಂಹದ ಮೇಲೆ ಎರಗಿದೆ. ಕಾಡು ಎಮ್ಮೆಯ ಅವತಾರ ನೋಡಿ ಸಿಂಹ ಪ್ರಾಣ ಉಳಿದರೆ ಸಾಕು ಎಂದು ಓಡಿ ಹೋಗುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇಷ್ಟಾದರೂ ಕಾಡು ಎಮ್ಮೆಯ ಸಿಟ್ಟು ಕಮ್ಮಿಯಾಗದೇ ಸಿಂಹವನ್ನು ಅಟ್ಟಾಡಿಸಿಕೊಂಡು ಹೋಗುವುದನ್ನು ದೃಶ್ಯದಲ್ಲಿ ಕಾಣಬಹುದು.
Read it : C.T ರವಿ ಅರೆಸ್ಟ್ ಪ್ರಕರಣ : ಸಿಪಿಐ ಸಸ್ಪೆಂಡ್.!
ಈ ವಿಡಿಯೋವನ್ನು ಈಗಾಗಲೇ 5.9 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, “ಕಾಡು ಎಮ್ಮೆಯಿಂದ ಸಿಂಹದ ಗರ್ವಭಂಗ”ವನ್ನು ನೋಡಿದ ನೆಟ್ಟಿಗರು ಕಾಡು ಎಮ್ಮೆಯ ಶಕ್ತಿಯನ್ನು ಕೊಂಡಾಡಿದ್ದಾರೆ.
Bro was pissed off 😂😂😂 pic.twitter.com/qQTTH8WAPk
— The Instigator (@Am_Blujay) December 23, 2024