ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.
ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.
ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.
ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.
ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ
ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.
ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.
ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :
ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ವಿಡಿಯೋ :
Childhood cuteness overloaded! 😍
Kids in school are requesting their teacher ma’am to let them go home as they want to lie in their mother’s lap and have milk.
Sending 2–3 year-old kids to school in the name of LKG is not education.
This is the theft of childhood innocence.💔 pic.twitter.com/3jnLGHeXxo
— Suraj Kumar Bauddh (@SurajKrBauddh) December 1, 2025
Courtesy : Udayavavi
Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್, ಬ್ರೆಝಿಲ್ : ಬ್ರೆಝಿಲ್ (Brazil) ನ ಜೋವೊ ಪೆಸ್ಸೋವಾ ಮೃಗಾಲಯ (Zoo) ದಲ್ಲಿ 19 ವರ್ಷದ ಯುವಕನೊಬ್ಬ ಸಿಂಹದ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಘಟನೆಯ ಕ್ರೂರತೆಯನ್ನು ಕಂಡ ಜನ ಆಘಾತಗೊಂಡಿದ್ದಾರೆ.
ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ಯುವಕನು ಉದ್ದೇಶಪೂರ್ವಕವಾಗಿ ಮೃಗಾಲಯದ (Zoo) ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾನೆ. ಅವನು ಮರದ ಮೂಲಕ ಕೆಳಭಾಗಕ್ಕೆ ಇಳಿಯುತ್ತಿದ್ದಾಗ, ಹತ್ತಿರದಲ್ಲೇ ತಿರುಗಾಡುತ್ತಿದ್ದ ಸಿಂಹ ಅವನ ಚಲನವಲನವನ್ನು ಗಮನಿಸಿ ಕ್ಷಣಾರ್ಧದಲ್ಲೇ ಅವನ ಮೇಲೆ ಹಲ್ಲೆ ನಡೆಸಿತು.
ಇದನ್ನು ಓದಿ : ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ Dance ಮಾಡಿದ ವೈದ್ಯ ; ವಿಡಿಯೋ ವೈರಲ್.
ಅಕಸ್ಮಾತ್ ದಾಳಿಯಿಂದ ಭಯಗೊಂಡ ಯುವಕ ಮರವನ್ನು ಮತ್ತೆ ಏರಲು ಪ್ರಯತ್ನಿಸಿದರೂ, ಸಿಂಹದ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದಾಳಿಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸೆಕೆಂಡ್‌ಗಳಲ್ಲಿ ನೆಲಕ್ಕುರುಳಿದನು ಮತ್ತು ಗಂಭೀರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟನು. ಘಟನೆಯ ವೇಳೆ ಅಲ್ಲಿದ್ದ ಪ್ರವಾಸಿಗರು ಈ ಕ್ರೂರ ದೃಶ್ಯವನ್ನು ಕಣ್ಣು ಕಂಡು ಬೆಚ್ಚಿಬಿದ್ದರು ಮತ್ತು ಕೆಲವರು ಆತಂಕದಿಂದ ಕಿರುಚುತ್ತಿದ್ದರು. ವಿಡಿಯೋದಲ್ಲಿ ಜನರ ಗಾಬರಿಯಾಗಿ ಚಿರಾಡುವುದು ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ.
ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಘಟನೆಯ ನಂತರ ಮೃಗಾಲಯದ (Zoo) ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಯುವಕನನ್ನು ರಕ್ಷಿಸಲು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗೆ ಸಿಂಹ ಈಗಾಗಲೇ ಯುವಕನಿಗೆ ಮಾರಕ ಗಾಯಗಳನ್ನುಂಟು ಮಾಡಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿ ಯುವಕನು ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.
ಇದರ ನಡುವೆ, ಯುವಕನು ನಿರ್ಬಂಧಿತ ಮತ್ತು ಅಪಾಯಕರ ಪ್ರದೇಶಕ್ಕೆ ಏಕೆ ನುಗ್ಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃಗಾಲಯದ (Zoo) ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕೆಲವು ಪ್ರತ್ಯಕ್ಷದರ್ಶಿಗಳು, ಯುವಕನು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪ್ರವೇಶಿಸಿದ್ದರಿಂದ ಆತ ಯಾವುದೋ ಸಾಹಸ ಮಾಡಲು ಯತ್ನಿಸಿದ್ದಾನೆಂದು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣವಾದ ನಂತರವೇ ತಿಳಿದುಬರುವ ಸಾಧ್ಯತೆ ಇದೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ಈ ಘಟನೆ ನಂತರ, ಮೃಗಾಲಯದ (Zoo) ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹಲವರು ನಿರ್ಬಂಧಿತ ಪ್ರದೇಶಕ್ಕೆ ಯಾರಾದರೂ ಸುಲಭವಾಗಿ ಪ್ರವೇಶಿಸಬಲ್ಲ ಸ್ಥಿತಿ ಗಂಭೀರ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಝೂ (Zoo) ನಲ್ಲಿ ಸಿಂಹದ ದಾಳಿಯ ವಿಡಿಯೋ :
View this post on Instagram
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






