ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಕಾಡು ಪ್ರಾಣಿಗಳ (Ex: Lion) ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ರಣಹದ್ದು, ಕಾಡಿನ ರಾಜ ಸಿಂಹ (Lion) ದ ಮೇಲೆಯೇ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
AI ಬಳಸಿ 36 ಮಹಿಳಾ ಸಹಪಾಠಿಗಳ ಅಶ್ಲೀಲ ಫೋಟೋ ತಯಾರಿಸಿದ ಆರೋಪ ; IT ವಿದ್ಯಾರ್ಥಿ ಅಮಾನತು.!
ಸಿಂಹ (Lion) ಸುಮ್ಮನೆ ಯಾವ ಪ್ರಾಣಿಯ ಮೇಲೂ ದಾಳಿ ಮಾಡುವುದಿಲ್ಲ. ಆಹಾರ ಬೇಕಾದಾಗ ಮಾತ್ರ ಬೇಟೆಯಾಡಿ ತಿನ್ನುವ ಸ್ವಭಾವ ಸಿಂಹ ಹೊಂದಿದೆ.
ಆದರೆ ರಣಹದ್ದು (vulture) ಏಕಾಏಕಿ ದೈತ್ಯ ಸಿಂಹದ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಂಹ ಮುಂದೆ ಸಾಗದಂತೆ ಸಮಯ ನೀಡದೆ ದಾಳಿ ನಡೆಸಿವೆ. ಆದರೆ ಹೆದರದ ಸಿಂಹ ಭಯಾನಕವಾಗಿ ಪ್ರತಿದಾಳಿ (counter attack) ನಡೆಸಿದೆ.
Woman : “ನನ್ನ ಗೆಳತಿಯಾಗು” ಎಂದು ಮಧ್ಯರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಎಳೆದಾಡಿದ ಯುವಕ.!
ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಯಾವುದೇ ವಿವರಗಳಿಲ್ಲ. ಕೆಲವರಿಗೆ ಇದು ಅಚ್ಚರಿ ಮೂಡಿಸಿದರೆ, ಇನ್ನು ಕೆಲವರು ಇದು AI ವಿಡಿಯೋ ಆಗಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಡಿನ ರಾಜ ಸಿಂಹ (Lion) ನ ವಿಡಿಯೋ ಇಲ್ಲಿದೆ ನೋಡಿ :
https://twitter.com/i/status/1912559611200315855
Khanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!

ಜನಸ್ಪಂದನ ನ್ಯೂಸ್, ಖಾನಾಪುರ (ಬೆಳಗಾವಿ ಜಿಲ್ಲೆ) : ಪ್ರೀತಿಯ ಹೆಸರಿನಲ್ಲಿ ಯುವಕನಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ ಬಾಲಕಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿರುವುದು ಬೆಳಕಿಗೆ ಬಂದಿದೆ.
ಮೃತಳನ್ನು ಖಾನಾಪುರ (Khanapur) ತಾಲೂಕಿನ ದೇವಲತ್ತಿ ಗ್ರಾಮದ ಅಶ್ವಿನಿ (17) ಎಂದು ಗುರುತಿಸಲಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ನಂದಳ್ಳಿ ಗ್ರಾಮದ ರತನ (26) ಎಂಬ ಯುವಕ ಕಳೆದ ಒಂದು ವರ್ಷದಿಂದ ಆಕೆಯನ್ನು ಸಂಪರ್ಕಿಸಿ ಪ್ರೀತಿಯ ಹೆಸರಿನಲ್ಲಿ ಒತ್ತಡ ಹಾಕುತ್ತಿದ್ದಾನೆಂಬ ಮಾಹಿತಿ ದೊರಕಿದೆ.
KKRTC : ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳ ನೇಮಕಾತಿ ; ಇಂದೇ ಅರ್ಜಿ ಸಲ್ಲಿಸಿ.!
ಆರೋಪಿಯು ಅನೇಕ ಬಾರಿ ಆಕೆಗೆ ಬೆದರಿಕೆ ಹಾಕಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನಸ್ಸಿಗೆ ಆಘಾತಗೊಂಡ ಅಶ್ವಿನಿ, ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಡಿವೈಎಸ್‌ಪಿ ವಿರೇಶ ಹಿರೇಮಠ, ಖಾನಾಪುರ (Khanapur) ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಐಪಿಸಿ 306 (ಆತ್ಮಹತ್ಯೆಗೆ ಪ್ರೇರಣೆ), 354(D) (ಸ್ತ್ರೀಯರ ಮೇಲೆ ಕಿರುಕುಳ), 506 (ಬೆದರಿಕೆ) ಹಾಗೂ ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ 2015 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
School : ಶಾಲೆಯೊಳಗೆ ಶಿಕ್ಷಕನ ಅನಾಚಾರ ವರ್ತನೆ ; ವಿದ್ಯಾರ್ಥಿಗಳಿಂದ ವಿಡಿಯೋ ವೈರಲ್.!
ಶವವನ್ನು ಶವಪರೀಕ್ಷೆಗಾಗಿ ಖಾನಾಪುರ (Khanapur) ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಖಾನಾಪುರ (Khanapur) ತಾಲೂಕಿನ ಸ್ಥಳೀಯರು ಈ ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದು, ಯುವತಿಯ ಜೀವಹಾನಿಗೆ ಕಾರಣರಾದ ಆರೋಪಿಗೆ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.






