ಗುರುವಾರ, ನವೆಂಬರ್ 27, 2025

Janaspandhan News

HomeCrime NewsKiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
spot_img
spot_img
spot_img

Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.

- Advertisement -

ಜನಸ್ಪಂದನ ನ್ಯೂಸ್‌, ಕಾನ್ಪುರ್‌ (ಉ.ಪ್ರ) : ಓರ್ವ ಮಾಜಿ ಪ್ರಿಯಕರ ತನ್ನ ಮಾಜಿ ಪ್ರೆಯಸಿಗೆ ಬಲವಂತವಾಗಿ ಮುತ್ತು (Kiss) ಕೊಡುವಾಗ ಕೋಪಗೊಂಡ ಪ್ರೇಯಸಿ ಆತನ ನಾಲಿಗೆಯನ್ನೇ ಕಚ್ಚಿ ಕತ್ತರಿಸಿ ಹಾಕಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಈ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಶಾಕ್ ಉಂಟುಮಾಡಿದೆ. ಇಲ್ಲಿ ಪ್ರೇಯಸಿ ಮತ್ತು ಆಕೆಯ ಮಾಜಿ ಪ್ರಿಯಕರ ಇಬ್ಬರೂ ವಿವಾಹಿತರಾಗಿದ್ದಾರೆ.

ಇದನ್ನು ಓದಿ : Biker ಗೆ ಡಿಕ್ಕಿ ಹೊಡೆದ ಲಾರಿ ; ಭೀಕರ ಘಟನೆಯ ವಿಡಿಯೋ ವೈರಲ್.

ಪ್ರೇಯಸಿ, ಮುತ್ತು (Kiss) ಕೊಡುವಾಗ ಪ್ರಿಯಕರ ನಾಲಿಗೆಯನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿ ಹಾಕಿರುವ ಪರಿಣಾಮ ಬಾಯಿಂದ ರಕ್ತಸ್ರಾವವಾಗುತ್ತಲೇ ಆತ ಕೆಳಗೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ದೌಡಾಯಿಸಿ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಿನ್ನಲೆ :

35 ವರ್ಷದ ವಿವಾಹಿತ ಚಂಪಿ ಎಂಬ ಉತ್ತರ ಪ್ರದೇಶದ ಕಾನ್ಪುರದ ದರಿಯಾಪುರ ಗ್ರಾಮದ ನಿವಾಸಿ ತನ್ನದೇ ಗ್ರಾಮದ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮಹಿಳೆಯ ಪೊಷಕರಿಗೆ ಈ ವಿಷಯ ತಿಳಿಯುತ್ತಿದಂತೆಯೇ ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದರು.

ಮಹಿಳೆಯ ಮದುವೆಯ ನಂತರವೂ ಸಹ ವಿವಾಹಿತ ಚಂಪಿ ಆಗಾಗ್ಗೆ ತನ್ನ ಮಾಜಿ ಪ್ರೆಯಸಿ ಹಾಗು ವಿವಾಹಿತೆಯನ್ನು ಭೇಟಿಯಾಗುತ್ತಿದ್ದ, ಅಷ್ಟೆ ಅಲ್ಲದೆ ಪ್ರೆಯಸಿಗೆ ತನ್ನೊಂದಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದ.

ಇದನ್ನು ಓದಿ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್‌ನಲ್ಲಿ Engineer ಹತ್ಯೆ.

ಮಾಜಿ ಪ್ರೇಯಸಿ ಕುಟುಂಬದ ಸಲುವಾಗಿ ಜೇಡಿಮಣ್ಣನ್ನು ಸಂಗ್ರಹಿಸಲು ಸೋಮವಾರ ಮಧ್ಯಾಹ್ನ ಸಮೀಪದ ಕೆರೆಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಮಾಜಿ ಪ್ರಿಯಕರ ಚಂಪಿ, ಒಂಟಿಯಾಗಿರುವ ಆಕೆಯನ್ನು ಆಕೆಯನ್ನು ಭೇಟಿ ಮಾಡಿ ಮಾತನಾಡಿಸಲು ಯತ್ನಿಸಿದ್ದಾನೆ.

ಆದರೆ ಮಹಿಳೆ ಅಂದರೆ ಮಾಜಿ ಗೆಳತಿ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ ಚಂಪಿ ಆಕೆಯನ್ನು ಬಲವಂತವಾಗಿ ಹಿಡಿದು ಚುಂಬಿಸಲು (Kiss) ಮುಂದಾಗಿದ್ದಾನೆ. ಆದರೆ ಪ್ರೇಯಸಿ ಇಷ್ಟವಿರದ ಕಾರಣ ಹಿಂದಕ್ಕೆ ಸರಿಯಲು ಮುಂದಾಗಿದ್ದಾಳೆ.

ಆದರೆ ಮಾಜಿ ಪ್ರಿಯಕರ ಆಕೆಯನ್ನು ಬಲವಂತಾಗಿ ತಬ್ಬಿಕೊಂಡು ಚುಂಬಿಸಲು (Kiss) ಯತ್ನಿಸುತ್ತಿದಂತೆಯೇ ಮಹಿಳೆ (ಪ್ರೇಯಸಿ) ಬಿಡಿಸಿಕೊಳ್ಳಲು ಸಾಧ್ಯವಾಗದೇ ಆತನ ನಾಲಿಗೆಯನ್ನೇ ತನ್ನ ಹಲ್ಲುಗಳಿಂದ ಕತ್ತರಿಸಿ ಹಾಕಿದ್ದಾಳೆ.

ಮುತ್ತು (Kiss) ಕೊಡುವಾಗ ಹುಲ್ಲುಗಳಿಂದ ನಾಲಿಗೆ ಕತ್ತರಿಸಿದ ಪರಿಣಾಮ ನೋವಿನಿಂದ ಚಂಪಿ ಜೋರಾಗಿ ಚಿರಾಡಿದ್ದಾನೆ. ಆತನ ಚಿರಾಟ ಕೇಳಿದ ಸ್ಥಳಿಯರು ಸ್ಥಳಕ್ಕಾಗಮಿಸಿ ನೋಡಿದಾಗ, ಆತ ರಕ್ತದ ಮಡುವಿನಲ್ಲಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ : ಆಕಸ್ಮಿಕ Snake ಮೇಲೆ ಹರಿದ ಬೈಕ್ – ಮುಂದೆನಾಯ್ತು? ವಿಡಿಯೋ ನೋಡಿ.!

ಉಪ ಪೊಲೀಸ್ ಆಯುಕ್ತ ದಿನೇಶ್ ತ್ರಿಪಾಠಿ ಪ್ರಕರಣವನ್ನು ದೃಢಪಡಿಸಿದ್ದಾರೆ ಮತ್ತು ಕಾನೂನು ಕ್ರಮ ಮುಂದುವರಿಸುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.


ಪತ್ನಿಯನ್ನೇ ಜೂಜಾಟಕ್ಕೆ ಇಟ್ಟ Husband ; ಕುಟುಂಬಸ್ಥರು ಸೇರಿ 8 ಜನರಿಂದ ಅತ್ಯಾಚಾರ.

husband-places-wife-betting-8-member-rape

ಜನಸ್ಪಂದನ ನ್ಯೂಸ್‌, ಬಾಗ್‌ಪತ್ (ಉತ್ತರ ಪ್ರದೇಶ) : ಬಾಗ್‌ಪತ್ ಮೂಲದ ಪತ್ನಿಯೋರ್ವಳು ತನ್ನ ಪತಿ (Husband) ಹಾಗೂ ಪತಿಯ ಕುಟುಂಬ ಸದಸ್ಯರ ವಿರುದ್ಧ ತೀವ್ರ ಆರೋಪಗಳನ್ನು ಮಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆ ಹೇಳುವಂತೆ, ಪತಿ (Husband) ಮದ್ಯಪಾನ ಮತ್ತು ಜೂಜಾಟದ ವ್ಯಸನಕ್ಕೆ ಒಳಗಾಗಿದ್ದು, ಮದುವೆಯಾದ ಕೂಡಲೇ ತನ್ನ ಮೇಲೆ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದ್ದನು ಎಂದಿದ್ದಾರೆ.

ಅಕ್ಟೋಬರ್ 24, 2024 ರಂದು ಮೀರತ್ ನ ಖಿವಾಯ್ ಗ್ರಾಮದ ಡ್ಯಾನಿಶ್ ಅವರೊಂದಿಗೆ ಮದುವೆಯಾಗಿದ್ದ ಈ ಮಹಿಳೆ, ಮದುವೆ ಬಳಿಕ ಪತಿ ಮತ್ತು ಪತಿ (Husband) ಯ ಕುಟುಂಬ ಸದಸ್ಯರಿಂದ ದೈಹಿಕ ಹಿಂಸೆ ಮತ್ತು ಕಿರುಕುಳ ಎದುರಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ : ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.

ಮಹಿಳೆ ಆರೋಪಿಸಿದಂತೆ, ಆಕೆಯ ಪತಿ (Husband) ಜೂಜಾಟದ ಸಮಯದಲ್ಲಿ ತನ್ನನ್ನು ಜೂಜುಕೋರರಿಗೆ ಪಣಕ್ಕಿಟ್ಟಿದ್ದನು. ಜೂಜಾಟದಲ್ಲಿ ಸೋತ ನಂತರ ತನ್ನ ಮೇಲೆ ಜೂಜುಕೋರರು ತಿಂಗಳುಗಟ್ಟಲೆ ಅತ್ಯಾಚಾರ, ಹಲ್ಲೆ, ಚಿತ್ರಹಿಂಸೆ ಮತ್ತು ಬಲವಂತದ ಗರ್ಭಪಾತಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.

ಪತಿ (Husband) ಜೂಜಾಟದಲ್ಲಿ ಸೋತ ನಂತರ ಉಮೇಶ್ , ಮೋನು, ಅನ್ಶುಲ್, ಪತಿಯ ಅಣ್ಣ ಶಾಹಿದ್, ಅತ್ತಿಗೆಯ ಪತಿ ಶೌಕೀನ್ ಮತ್ತು ಮಾವ ಯಾಮಿನ್ ಸೇರಿ 8 ಮಂದಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂತ್ರಸ್ತೆ ತಾವು ಗರ್ಭಿಣಿಯಾಗಿದ್ದಾಗ ಬಲವಂತದ ಗರ್ಭಪಾತಕ್ಕೆ ಒಳಗಾಗಿದ್ದು, ಬಳಿಕ ಕಾಲಿಗೆ ಆ್ಯಸಿಡ್ ಸುರಿಯಲು ಪ್ರಯತ್ನ ಮಾಡಿರುವ ಬಗ್ಗೆ ಆಕೆಯ ಹೇಳಿಕೆಯಲ್ಲಿ ಪ್ರಸ್ತುತವಾಗಿದೆ. ಈ ವೇಳೆ ಯಾರೋ ತಕ್ಷಣ ನೆರವಿಗೆ ಬಂದ ಹಿನ್ನಲೆಯಲ್ಲಿ ತಾನು ಬಚಾವಾಗಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಆಸ್ಪತ್ರೆಯಲ್ಲಿ ಕಂಬಳಿ ಹೊದ್ದು Couple ‘ಅಸಭ್ಯ ಕೃತ್ಯ’ ; ವಿಡಿಯೋ ವೈರಲ್‌ – ವಿವಾದ ಸೃಷ್ಟಿ.

ಮಹಿಳೆ ಈಗ ಬಾಗ್‌ಪತ್ ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ ಮತ್ತು ಪ್ರಕರಣದ ಸಂಬಂಧ FIR ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು, ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿ, ತಪ್ಪಿಗಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments