Wednesday, May 22, 2024
spot_img
spot_img
spot_img
spot_img
spot_img
spot_img

State news : ರಸ್ತೆಯಲ್ಲಿ ಅಟ್ಟಾಡಿಸಿ ರೌಡಿಶೀಟರ್ ಬರ್ಬರ ಹತ್ಯೆ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷಕ್ಕೆ (to an old grudge) ರೌಡಿಶೀಟರ್ ನನ್ನು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಕೊಲೆಯಾದ ರೌಡಿಶೀಟರ್ ಬಾಣಸವಾಡಿಯ ಆರ್‌. ಎಸ್‌. ಪಾಳ್ಯ ನಿವಾಸಿ ಕಾರ್ತಿಕೇಯನ್‌ (40) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಪತಿಯ ಕೈ-ಕಾಲು ಕಟ್ಟಿ ಸಿಗರೇಟ್‌ನಿಂದ ಪತಿಯ ಖಾಸಗಿ ಅಂಗ ಸುಟ್ಟ ಪತ್ನಿ ; ದೃಶ್ಯ CCTVಯಲ್ಲಿ ಸೆರೆ.!

ಕಾರ್ತಿಕೇಯನ್‌ ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ ನಾಲ್ಕೈದು ಬೈಕ್‌ಗಳಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು (criminals) ಕಾರ್ತಿಕೇಯನ್‌ ಮೇಲೆ ದಾಳಿ (attack) ನಡೆಸಿದ್ದಾರೆ.

ಆಗ ಪ್ರಾಣ ಉಳಿಸಿಕೊಳ್ಳಲು ಕಾರ್ತಿಕೇಯನ್‌ ಓಡಿದ್ದಾನೆ. ಆದರೂ ಬಿಡದ ಹಂತಕರು ನಡು ರಸ್ತೆಯಲ್ಲಿ ಅಟ್ಟಾಡಿಸಿ ಭೀಕರವಾಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಬಾಣಸವಾಡಿ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಕಾರ್ತಿಕೇಯನ್‌ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಕೋರ್ಟ್‌ ಮೂಲಕ ಕಾರ್ತಿಕೇಯನ್‌ ಅದನ್ನು ರದ್ದು ಪಡಿಸಿಕೊಂಡಿದ್ದ (was cancelled). ಬಳಿಕ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಇದನ್ನು ಓದಿ : ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!

ಇನ್ನು ಇತ್ತೀಚೆಗೆ ಕಾರ್ತಿಕೇಯನ್‌, ಕೆಲ ವಿವಾದಿತ ಜಾಗಗಳಿಗೆ (For disputed spaces) ಬೇಲಿ ಹಾಕಿಕೊಂಡಿದ್ದನು. ಇದರಿಂದಾಗಿ ಮೈಕಲ್‌ ಮಂಜು ಮತ್ತು ತಂಡದ ಜತೆ ಜಗಳ ಮಾಡಿಕೊಂಡಿದ್ದರು. ಅಲ್ಲದೆ, ಗನ್‌ ತೋರಿಸಿ ಮಂಜುಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಹೀಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಹತ್ಯೆಗೆ ನಿಖರ ಕಾರಣ (exact reason for the killing) ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.

spot_img
spot_img
spot_img
- Advertisment -spot_img