Sunday, September 8, 2024
spot_img
spot_img
spot_img
spot_img
spot_img
spot_img
spot_img

Karnataka weather : ಕರ್ನಾಟಕದಲ್ಲಿ ಇಂದು (ದಿ.11) ಹವಾಮಾನ ಹೇಗಿದೆ ಗೋತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಂಗಳೂರು : ಇಂದು (ದಿ.11) ಗುರುವಾರದಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದು ಬಿಸಿಲು ಕಾಡಲಿದೆ. ಉತ್ತರ ಒಳನಾಡಿನ ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಕರ್ನಾಟಕ ಮಳೆ ಮುನ್ಸೂಚನೆ ವರದಿ ಹೇಳಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ಇರಲಿದ್ದು, ಬಿಸಿಲು ಕಾಡಲಿದೆ. ಈ ಕರಾವಳಿ ಜಿಲ್ಲೆಗಳಲ್ಲಿ ಒಣಹವೆಯ ತಾಪಮಾನ ಮತ್ತು ಆರ್ದ್ರತೆಯ ಕಾರಣ ಜನ ಸಂಕಟ ಅನುಭವಿಸಲಿದ್ದಾರೆ.

ಮೊಬೈಲ್‌ನಲ್ಲಿ ಮಾತನಾಡುತ್ತಾ ತರಕಾರಿ ಬದಲಿಗೆ ಹೆತ್ತ ಮಗುವನ್ನೇ ಫ್ರಿಡ್ಜ್‌ನಲ್ಲಿಟ್ಟ ಮಹಾತಾಯಿ ; ಭಯಾನಕ Video viral.!

ಇನ್ನುಳಿದಂತೆ, ಉತ್ತರ ಒಳನಾಡಿನ ಕೊಪ್ಪಳ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆ ಬೀಳಬಹುದು. ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮಳೆ ಬೀಳಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ತಿಳಿಸಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಹಗುರ ಮಳೆ ಬೀಳಬಹುದು.

ಗುಡುಗು ಮಿಂಚಿನ ಎಚ್ಚರಿಕೆಯನ್ನು ಹವಾಮಾನ ವರದಿ ನೀಡಿದೆ. ಇಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಒಣಹವೆ ಮತ್ತು ಬಿಸಿಗಾಳಿ ಮುಂದುವರಿದಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರುಗಳಲ್ಲಿ ಮಳೆ ಬೀಳಬಹುದು. ಬೇರಾವುದೇ ಎಚ್ಚರಿಕೆ ಇಲ್ಲ.

ಚಿರತೆ ಜೊತೆ Selfie ತೆಗೆದುಕೊಂಡ ಯುವಕ ; ಮುಂದೆನಾಯ್ತು, ಈ ವಿಡಿಯೋ ನೋಡಿ.!

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ, ಏಪ್ರಿಲ್ 18 ರ ತನಕ ಮಳೆ ಮುನ್ಸೂಚನೆ ವರದಿ ಲಭ್ಯವಾಗಿದ್ದು, ಏಪ್ರಿಲ್ 12, 13, 14, 17 ಮತ್ತು 18 ರಂದು ಕರ್ನಾಟಕ ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆ.

ಏಪ್ರಿಲ್‌ 10, 11, 15 & 16 ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಗುಡುಗು ಮಿಂಚು ಸಹಿತ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img