Sunday, September 8, 2024
spot_img
spot_img
spot_img
spot_img
spot_img
spot_img
spot_img

Karnataka weather : ಕರ್ನಾಟಕದಲ್ಲಿ ಇಂದು (ದಿ.14) ಹವಾಮಾನ ಹೇಗಿದೆ ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕಳೆದ ಎರಡು ದಿನಗಳಿಂದ ಕರ್ನಾಟಕ ವಿವಿಧೆಡೆ ಸುರಿಯುತ್ತಿರುವ ಮಳೆ ಬಿಸಿಲಿನಿಂದ ಹೈರಾಣಾಗಿಸಿದ್ದ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು (ದಿ.14) ರವಿವಾರ ಕೂಡ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧೆಡೆ ಮಳೆಯಾಗಲಿದ್ದು, ಎಲ್ಲೆಲ್ಲ ಮಳೆಯಾಗುತ್ತೆ? ಇಲ್ಲಿದೆ ವಿವರ.

ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಇದರ ಜೊತೆಗೆ ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ; ಕರಾವಳಿ ಕರ್ನಾಟಕ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ; ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಾದ ಬೀದರ್, ಗದಗ, ಕಲ್ಬುರ್ಗಿ ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಸೇರಿದಂತೆ ಇಂದು (ದಿ.14) ವ್ಯಾಪಕವಾಗಿ ಗುಡುಗು ಸಹಿತ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ಇದನ್ನು ಓದಿ : ಎದೆ ಮೇಲೆ ಫ್ಯಾನ್ ಇಟ್ಕೊಂಡು ಸೂಪರ್ ಕೂಲ್ ಎಂದ ಉರ್ಫಿ ; Video ವೈರಲ್.!

ರಾಜ್ಯದಲ್ಲಿ ಸಿಡಿಲಬ್ಬರಕ್ಕೆ ವಿವಿಧೆಡೆ ಮತ್ತಿಬ್ಬರು ಬಲಿಯಾಗಿದ್ದಾರೆ. ಒಟ್ಟು 4 ದಿನದಲ್ಲಿ ಮಳೆಯಿಂದ ಮೃತರಾದವರ ಸಂಖ್ಯೆ 5ಕ್ಕೇರಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿನ್ನೆಯೂ ಮಳೆಯಾಗಿದ್ದು, ಕರ್ನಾಟಕದ ಧಾರವಾಡ, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಸಕಲೇಶಪುರ, ಹಾವೇರಿ, ಬೀದರ್, ಹುಣಸೂರು, ದಾವಣಗೆರೆಯಲ್ಲಿ ಭೂಮಿ ತಂಪಾಗಿದೆ.

ನಿನ್ನೆ (ದಿ.13) ಕರ್ನಾಟಕದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿತ್ತು. ನಿನ್ನೆ ರಾತ್ರಿ 12 ಗಂಟೆಯ ತನಕ ಆಗುಂಬೆಯಲ್ಲಿ ಅತ್ತಧಿಕ 81ಮಿಮಿ ಮಳೆಯಾದರೆ, ಶಿವಮೊಗ್ಗ: 79.5ಮಿ.ಮೀ, ಉತ್ತರ ಕನ್ನಡ: 68ಮಿ.ಮೀ, ಕಲಬುರಗಿ: 67ಮಿ.ಮೀ, ಉಡುಪಿ: 64ಮಿ.ಮೀ, ವಿಜಯಪುರ: 57ಮಿ.ಮೀ, ಯಾದಗಿರಿ: 55ಮಿ.ಮೀ, ಮಳೆಯಾಗಿದೆ.

ಇದನ್ನು ಓದಿ : LS 2024 : ಪ್ರಚಾರಸಭೆಯಲ್ಲಿ ಕಲ್ಲು ತೂರಾಟ ; ಸಿಎಂ ‘ಜಗನ್’ಗೆ ಗಂಭೀರ ಗಾಯ.!

ಬಳ್ಳಾರಿ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ: 54.5ಮಿ.ಮೀ, ಧಾರವಾಡ: 52.5ಮಿ.ಮೀ, ರಾಯಚೂರು: 45ಮಿ.ಮೀ, ದಕ್ಷಿಣ ಕನ್ನಡ: 38.5ಮಿ.ಮೀ, ಹಾವೇರಿ: 37ಮಿ.ಮೀ, ದಾವಣಗೆರೆ: 35.5ಮಿ.ಮೀ, ಗದಗ: 29ಮಿ.ಮೀ, ಕೊಪ್ಪಳ: 27ಮಿ.ಮೀ, ಹಾಸನ: 19.5ಮಿ.ಮೀ, ಬಾಗಲಕೋಟೆ: 18.5ಮಿ.ಮೀ, ಬೆಳಗಾವಿ: 18ಮಿ.ಮೀ, ಬೀದರ್: 17.5ಮಿ.ಮೀ ಮಳೆಯಾಗಿತ್ತು.

ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img