Thursday, September 19, 2024
spot_img
spot_img
spot_img
spot_img
spot_img
spot_img
spot_img

ಎನ್‌ಎಂಡಿಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ : ನೇರ ಸಂದರ್ಶನದ ಮೂಲಕ ನೇಮಕಾತಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತ ಸರ್ಕಾರದ ಒಂದು ಎಂಟರ್‌ಪ್ರೈಸ್‌ ಆಗಿರುವ ಎನ್‌ಎಂಡಿಸಿ ಲಿಮಿಟೆಡ್‌ (National Mineral Development Corporation Limited) ನಲ್ಲಿ ಅಗತ್ಯ ಇರುವ 197 ಅಪ್ರೆಂಟಿಸ್‌ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚಿಸಿದೆ.

ಈ ಹುದ್ದೆಗಳಿಗೆ ನೇರ ಸಂದರ್ಶನವನ್ನು ನಡೆಸುವ ಮೂಲಕ ಭರ್ತಿ ಮಾಡಲು ಉದ್ದೇಶಿಸಿದೆ. ಐಟಿಐ, ಡಿಗ್ರಿ, ಡಿಪ್ಲೊಮ ಪಾಸಾದವರಿಗೆ ಈ ಉದ್ಯೋಗಾವಕಾಶಗಳಿದ್ದು, ನಿರುದ್ಯೋಗಿ ಯುವಕ, ಯುವತಿಯರು ಅರ್ಜಿ ಸಲ್ಲಿಸಿ, ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಕೇಂದ್ರ ಕಾರ್ಮಿಕ & ಔದ್ಯೋಗಿಕ ಇಲಾಖೆಯ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅಪ್ರೆಂಟಿಸ್ ವಿಭಾಗ ಹುದ್ದೆಗಳ ಸಂಖ್ಯೆ
ಟ್ರೇಡ್‌ ಅಪ್ರೆಂಟಿಸ್ 147
ಗ್ರಾಜುಯೇಟ್‌ ಅಪ್ರೆಂಟಿಸ್ 40
ಟೆಕ್ನೀಷಿಯನ್ ಅಪ್ರೆಂಟಿಸ್ 10


ವಿದ್ಯಾರ್ಹತೆ  :

  • ಟ್ರೇಡ್‌ ಅಪ್ರೆಂಟಿಸ್ : ಮಷಿನಿಸ್ಟ್, ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್, ಮೆಕ್ಯಾನಿಕ್ ಮೋಟಾರು ವೆಹಿಕಲ್, ಇಲೆಕ್ಟ್ರೀಷಿಯನ್, ಕೋಪಾ ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು.
  • ಗ್ರಾಜುಯೇಟ್‌ ಅಪ್ರೆಂಟಿಸ್ : ಕೆಮಿಕಲ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಬ್ಯಾಚುಲರ್ ಆಫ್‌ ಫಾರ್ಮಸಿ, ಬಿಬಿಎ, ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೈನಿಂಗ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
  • ಟೆಕ್ನೀಷಿಯನ್ ಅಪ್ರೆಂಟಿಸ್ : ಸಿವಿಲ್/ಇಲೆಕ್ಟ್ರಿಕಲ್/ಮೆಕ್ಯಾನಿಕಲ್/ಮೈನಿಂಗ್ ವಿಷಯಗಳಲ್ಲಿ ಡಿಪ್ಲೊಮ ಪಾಸ್ ಮಾಡಿರಬೇಕು.

ಇದನ್ನು ಓದಿ : ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ 3 ವರ್ಷದ ಮಗು ; ಬೆಚ್ಚಿಬೀಳಿಸುವ ವಿಡಿಯೋ‌ ವೈರಲ್.!

ಯಾವ ಅಪ್ರೆಂಟಿಸ್‌ಗಳಿಗೆ ಯಾವಾಗ ಸಂದರ್ಶನ.?

  • ಟ್ರೇಡ್‌ ಅಪ್ರೆಂಟಿಸ್ : ಜುಲೈ 1, 2, 4, 5, 6, 2024 ರಂದು.
  • ಗ್ರಾಜುಯೇಟ್‌ ಅಪ್ರೆಂಟಿಸ್ : ಜುಲೈ 7, 8, 2024 ರಂದು.
  • ಟೆಕ್ನೀಷಿಯನ್ ಅಪ್ರೆಂಟಿಸ್ : ಜುಲೈ 09, 2024 ರಂದು.

ಈ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಕನಿಷ್ಠ 16 ವರ್ಷ ಪಾಸಾದವರು, ಗರಿಷ್ಠ 24 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಮೊದಲಿಗೆ ನ್ಯಾಷನಲ್ ಅಪ್ರೆಂಟಿಸ್‌ ಪೋರ್ಟಲ್ https://www.apprenticeshipindia.gov.in ಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಂಡು, ಮೊದಲು ಅನುಮತಿ ಪಡೆಯಬೇಕಿರುತ್ತದೆ.

ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ವಿಳಾಸ, ಹುದ್ದೆವಾರು ದಿನಾಂಕ, ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಕೆಳಗಿನ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.

ಇದನ್ನು ಓದಿ : RRB Recruitment : ರೈಲ್ವೆ ಇಲಾಖೆಯಲ್ಲಿ 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಎನ್‌ಎಂಡಿಸಿ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ರೂ.8,000-10,000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಪ್ರೆಂಟಿಸ್‌ ಹುದ್ದೆಗೆ ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಸಂದರ್ಶನ/ಮೆಡಿಕಲ್ ಟೆಸ್ಟ್‌ ನೆಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img