Saturday, July 13, 2024
spot_img
spot_img
spot_img
spot_img
spot_img
spot_img

ರೀಲ್ಸ್ ಮಾಡಲು ಹೋಗಿ ರಿಯಲ್ ಆಗಿ ಒದೆ ತಿಂದ ಯುವಕರು ; ನೀವು Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ನಿಟ್ಟಿನಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ.

ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ರೀಲ್ಸ್​ ಮಾಡಲು ಹೋಗಿ ಯುವಕರು ರಿಯಲ್ ಆಗಿ ಧರ್ಮಡೇಟು ತಿಂದಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ : ಪ್ರೀತಿ ವಿಷಯದಲ್ಲಿ ಈ 5 ರಾಶಿಗಳ ಹುಡುಗರು ತುಂಬಾನೇ ಕ್ರೇಜಿ ; ನೀವೂ ಈ ರಾಶಿಯವರಾ.?

ಘಟನೆಯು ಪಾಕಿಸ್ತಾನದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಯುವಕರ ಗುಂಪೊಂದು ಹಳಿ ಮೇಲೆ ಹಾದು ಹೋಗುವ ತೊರೆಗೆ ಅಡ್ಡಲಾಗಿ ಬೈಕ್​ ನಿಲ್ಲಿಸಿ ವೇಗವಾಗಿ ಬರುವ ರೈಲಿಗೆ ನೀರನ್ನು ಹಾರಿಸುವುದನ್ನು ನೋಡಬಹುದಾಗಿದೆ. ಟ್ರೈನ್​ ನಿಲ್ಲಿಸುವುದಿಲ್ಲ ಎಂದು ಭಾವಿಸಿ ಯುವಕರ ಗುಂಪು ಈ ರೀತಿ ಮಾಡಿದ್ದು, ಆಶ್ಚರ್ಯ ಎಂಬಂತೆ ರೈಲನ್ನು ನಿಲ್ಲಿಸಲಾಗುತ್ತದೆ.

ಕೂಡಲೇ ರೈಲಿನಲ್ಲಿದ್ದ ಪೊಲೀಸರು ಕೆಳಗಿಳಿದು ಬೈಕ್​ಅನ್ನು ವಶಕ್ಕೆ ಪಡೆದಿದ್ದು, ಪ್ರಯಾಣಿಕರು ಯುವಕರನ್ನು ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಪ್ರಯಾಣಿಕರಿಂದ ತಪ್ಪಿಸಿಕೊಂಡ ಯುವಕರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯುತ್ತಿರುವುದನ್ನು ನೋಡಬಹುದಾಗಿದೆ.

ಇದನ್ನು ಓದಿ : ಎನ್‌ಎಂಡಿಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ : ನೇರ ಸಂದರ್ಶನದ ಮೂಲಕ ನೇಮಕಾತಿ.!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈವರೆಗೆ 3.3 ಲಕ್ಷಕ್ಕೂ ಹೆಚ್ಚಿನ ವೀವ್ಸ್​ ಪಡೆದಿದೆ.

ಕಳೆದ ಕೆಲ ತಿಂಗಳಿನಿಂದ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರು ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (ಏಜೇನ್ಸಿಸ್)

spot_img
spot_img
- Advertisment -spot_img