Wednesday, February 5, 2025
HomeJobಭಾರತೀಯ ಅಂಚೆ ಇಲಾಖೆಯಲ್ಲಿ ನೌಕರಿ ; ರೂ.19,900/- ಪ್ರತಿ ತಿಂಗಳು ವೇತನ.!
spot_img
spot_img
spot_img
spot_img

ಭಾರತೀಯ ಅಂಚೆ ಇಲಾಖೆಯಲ್ಲಿ ನೌಕರಿ ; ರೂ.19,900/- ಪ್ರತಿ ತಿಂಗಳು ವೇತನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಅಂಚೆ ಇಲಾಖೆ (Indian Postal Service) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ (Offline) ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. government job ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶ. 

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Website ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.! 

ಹುದ್ದೆಗಳ ವಿವರ :

  • ಹುದ್ದೆಯ ಹೆಸರು : ಸ್ಟಾಫ್ ಕಾರ್ ಡ್ರೈವರ್.
  • ಹುದ್ದೆಗಳ ಸಂಖ್ಯೆ : ಒಟ್ಟು ಹುದ್ದುಗಳು 25.

ಅರ್ಹತಾ ವಿವರ : 

  • ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ SSLC ಉತ್ತೀರ್ಣರಾಗಿರಬೇಕು.
  • ಅಭ್ಯರ್ಥಿಯು ಚಾಲನಾ ಪರವಾನಗಿಯನ್ನು ಹೊಂದಿರಬೇಕು ಮತ್ತು
  • ಕನಿಷ್ಠ ಮೂರು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.

ವಯಸ್ಸಿನ ಮಿತಿ : 

  • ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಿರಬಾರದು. 

ಇದನ್ನು ಓದಿ : ಹಾಡಹಗಲೇ ನಡು ರಸ್ತೆಯಲ್ಲಿಯೇ ಪತ್ನಿಯ ಹ*ತ್ಯೆಗೈ*ದ ಪತಿ ; reason.?

ವೇತನ ಶ್ರೇಣಿ :

ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ಕೇಂದ್ರ ವೇತನ ಆಯೋಗದ (CPC) ಪ್ರಕಾರ ಲೆವೆಲ್ 2 ವೇತನ ಶ್ರೇಣಿಯಲ್ಲಿ ತಿಂಗಳಿಗೆ ರೂ.19,900/-  ವೇತನವನ್ನು ನೀಡಲಾಗುತ್ತದೆ. 

ಆಯ್ಕೆ ಪ್ರಕ್ರಿಯೆ : 

  • ಆಯ್ಕೆಯು ಅರ್ಹತೆಯ ಪಟ್ಟಿ ಅಥವಾ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ. (ಅಭ್ಯರ್ಥಿಗಳು ಯಾವುದೇ ರೀತಿಯ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗಿಲ್ಲ). 

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 8, 2025.

ಅರ್ಜಿ ಕಳುಹಿಸಬೇಕಾದ ವಿಳಾಸ : 

ಅಭ್ಯರ್ಥಿಗಳು ತಮ್ಮ ಸಂಪೂರ್ಣ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ, “ದಿ ಸೀನಿಯರ್ ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, ನಂ. ವಿಳಾಸ : 37, ಗ್ರೀಮ್ಸ್ ರಸ್ತೆ, ಚೆನ್ನೈ – 600 006.”(“Should be sent to The Senior Manager, Mail Motor Service, No. Address : 37, Greams Road, Chennai – 600 006.”). ಗೆ ಕಳುಹಿಸಬೇಕು.

  • Note : ಅರ್ಜಿ ನಮೂನೆಯು ಕೊನೆಯ ದಿನಾಂಕದೊಳಗೆ ತಲುಪದಿದ್ದರೆ ಅಭ್ಯರ್ಥಿಯ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
  • ಈ ಅಭಿಯಾನದ ಮೂಲಕ, ಮಧ್ಯ ಪ್ರದೇಶದಲ್ಲಿ 1 ಹುದ್ದೆ, ಎಂಎಂಎಸ್ ಚೆನ್ನೈನಲ್ಲಿ 15 ಹುದ್ದೆಗಳು, ದಕ್ಷಿಣ ಪ್ರದೇಶದಲ್ಲಿ 4 ಹುದ್ದೆಗಳು ಮತ್ತು ಪಶ್ಚಿಮ ಪ್ರದೇಶದಲ್ಲಿ 5 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಐವರ ಸಾವು.!

ಜನಸ್ಪಂದನ ನ್ಯೂಸ್, ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ (Tinthani Village of Surpur Taluk) ಸಮೀಪ ಬೈಕಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಪುಟಾಣಿ ಮಕ್ಕಳ ಸಹಿತ ಒಂದೇ ಕುಟುಂಬದ ಐವರು (Five of the same family) ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತಿಂಥಣಿ ಗ್ರಾಮದ ಕಮಾನಿನ ಬಳಿ ಶ್ರೀರಂಗಪಟ್ಟಣ- ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!

ಮೃತಪಟ್ಟವರು ಆಂಜನೇಯ, ಪತ್ನಿ ಗಂಗಮ್ಮ ಹಾಗೂ ಮಕ್ಕಳಾದ ಹನುಮಂತ, ರಾಯಪ್ಪ, ಪವಿತ್ರಾ ಎಂದು ತಿಳಿದು ಬಂದಿದೆ.

ಸಾರಿಗೆ ಬಸ್‌ ಚಿಂಚೋಳಿ ಕಡೆ (From Lingasugur to Chincholi side) ತೆರಳುತ್ತಿದ್ದ ವೇಳೆ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಬರುತ್ತಿದ್ದ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಇದನ್ನು ಓದಿ : ವೆಸ್ಟರ್ನ್ ಉಡುಪಿನಲ್ಲಿ ಗ್ಲಾಮರಸ್ ಬೆಡಗಿಯಾದ ಮೋನಾಲಿಸಾ? ವಿಡಿಯೋ ವೈರಲ್.!

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!