Saturday, July 27, 2024
spot_img
spot_img
spot_img
spot_img
spot_img
spot_img

ನಿಮ್ಮ ಮೊಬೈಲ್ Slow ಆಗಿದೆಯಾ.? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಮಾರ್ಟ್‌ ಫೋನ್‌ಗಳು ದಿನದ ಸಾಕಷ್ಟು ಕೆಲಸ ಕಾರ್ಯಗಳಿಗೆ ಆಧಾರವಾಗಿವೆ. ಹೀಗಾಗಿ ಅವುಗಳು ಎಲ್ಲರ ಬದುಕಿನ ಭಾಗ ಎನಿಸಿವೆ. ಆದರೆ, ಕೆಲವೊಮ್ಮೆ ಸ್ಮಾರ್ಟ್ ಫೋನ್‌ಗಳು (Smartphone) ಸ್ಲೋ ಆಗುತ್ತವೆ.

ನಿಮ್ಮ ಅಗತ್ಯ ಮತ್ತು ವೇಗಕ್ಕೆ ಸರಿಯಾಗಿ ನಿಮ್ಮ ಡಿವೈಜ್‌ ಸ್ಪಂದಿಸದೇ ಇರುವ ಸನ್ನಿವೇಶ ಎದುರಾಗುತ್ತದೆ. ಇದು ಸಹಜವಾಗಿಯೇ ಕಿರಿಕಿರಿಯನ್ನುಂಟು ಮಾಡುತ್ತದೆ.

ಇದನ್ನು ಓದಿ : Attack : ರಕ್ತ ಬರುವಂತೆ ಪೊಲೀಸರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು.!

ಆದರೆ, ನಮ್ಮ ಆಂಡ್ರಾಯ್ಡ್‌ ಫೋನ್‌ನ್ನು ವೇಗಗೊಳಿಸಲು (Speed) ಕೆಲವೊಂದು ಮಾರ್ಗಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಲೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಸಾಫ್ಟ್‌ವೇರ್‌ ಅಪ್‌ಡೇಟ್ :

ನಿಮ್ಮ ಆಂಡ್ರಾಯ್ಡ್‌ ಫೋನ್‌ನ ಸಾಫ್ಟ್‌ವೇರ್‌ ಅನ್ನು ಅಪ್‌ ಡೇಟ್‌ ಮಾಡಿಟ್ಟುಕೊಳ್ಳಿ. ಸಿಸ್ಟಮ್ ಅಪ್‌ಡೇಟ್ ಅನ್ನು ಸೆಟ್ಟಿಂಗ್ ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಹೋಗಿ ಚೆಕ್ ಮಾಡಿಕೊಳ್ಳಿ. ಇಲ್ಲಿ ಯಾವುದಾದರೂ ಅಪ್‌ಡೇಟ್‌ಗಳಿದ್ದರೆ ಇನ್‌ಸ್ಟಾಲ್ ಮಾಡಿಕೊಳ್ಳಿ.

ಫೋನ್ ರೀಸ್ಟಾರ್ಟ್ ಮಾಡಿ :

ವಾರಕ್ಕೆ ಒಮ್ಮೆಯಾದರೂ ನಿಮ್ಮ ಮೊಬೈಲ್ ಫೋನ್‌ ಅನ್ನು ರೀಸ್ಟಾರ್ಟ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಫೋನ್‌ ರೀಸ್ಟಾರ್ಟ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ ಪ್ರೋಸೆಸ್‌ಗಳನ್ನು ನಿಲ್ಲಿಸುತ್ತದೆ. ಇದು ನಿಮ್ಮ ಡಿವೈಜ್‌ ಉತ್ತಮ ಕಾರ್ಯಕ್ಷಮತೆ ತೋರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : ರದ್ದಾದ ರೇಷನ್ ಕಾರ್ಡ್ ಪಟ್ಟಿ ಆನ್‌ಲೈನ್‌ನಲ್ಲಿ ಬಿಡುಗಡೆ ; ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿದೆಯಾ ಹೀಗೆ Check ಮಾಡಿ.!

ಬ್ಯಾಕ್‌ಗ್ರೌಂಡ್ ಡಾಟಾ ಡಿಸೇಬಲ್ ಮಾಡಿ :

ಹಲವು ಆಪ್‌ಗಳು ಸಕ್ರಿಯವಾಗಿ ಬಳಕೆಯಲ್ಲಿ ಇಲ್ಲದ ಸಂದರ್ಭದಲ್ಲೂ ಬ್ಯಾಕ್‌ಗ್ರೌಂಡ್ ಡಾಟಾವನ್ನು ಬಳಸಿಕೊಳ್ಳುತ್ತವೆ. ಹೀಗಾಗಿ, ಬ್ಯಾಕ್‌ಗ್ರೌಂಡ್ ಡಾಟಾಗಳನ್ನು ಡಿಸೇಬಲ್ ಮಾಡಿಟ್ಟುಕೊಳ್ಳುವುದು ಉತ್ತಮ. ಸೆಟ್ಟಿಂಗ್‌ > ಆಪ್ಸ್‌>(ಆಪ್‌ ಹೆಸರುಗಳಿರುತ್ತವೆ) > ಮೊಬೈಲ್ ಡಾಟಾ ಮತ್ತು ಇಲ್ಲಿ ನೀವು ಆಯ್ಕೆ ಮಾಡಿದ ಆಪ್‌ನ `ಬ್ಯಾಕ್‌ಗ್ರೌಂಡ್ ಡಾಟಾ’ ಆಯ್ಕೆಯನ್ನು ಡಿಸೇಬಲ್ ಮಾಡಿ.

ಕ್ಯಾಶೆ ಕ್ಲಿಯರ್ ಮಾಡಿ :

ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ (Data clear) ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್‌ಗೆ > ಸ್ಟೋರೇಜ್ > ಕ್ಯಾಶೆಡ್‌ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್‌ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ.

ಫ್ಯಾಕ್ಟರಿ ರೀಸೆಟ್‌ ಮಾಡಿ :

ಈ ಎಲ್ಲಾ ಕ್ರಮಗಳ ಬಳಿಕವೂ ನಿಮ್ಮ ಫೋನ್‌ ಸ್ಲೋ ಆಗುತ್ತಿದ್ದರೆ ಕೊನೆಗೆ ಇರುವ ಆಯ್ಕೆ ಫ್ಯಾಕ್ಟರಿ ರೀಸೆಟ್ (Factory reset). ಫ್ಯಾಕ್ಟರಿ ರೀಸೆಟ್‌ನಿಂದ ನಿಮ್ಮ ಫೋನ್ ಹೊಸ ಆರಂಭವನ್ನು ಪಡೆಯುತ್ತದೆ. ಆದರೆ ಒಂದು ಪ್ರಮುಖ ಸಂಗತಿಯನ್ನು ನೆನಪಿಡಿ.

ಇದನ್ನು ಓದಿ : Health : ಲಿಪ್ ಕಿಸ್ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ನಿಮ್ಮ ಮೊಬೈಲ್‌ನಲ್ಲಿ ಇರುವ ಎಲ್ಲಾ ಡೇಟಾಗಳು ಅಳಿಸಿ ಹೋಗುತ್ತವೆ. ಇದನ್ನು ಮರೆಯಬೇಡಿ. ಹೀಗಾಗಿ, ಫ್ಯಾಕ್ಟರಿ ರೀಸೆಟ್ ಮಾಡಬೇಕೆಂದು ಬಯಸಿದರೆ ಮೊದಲು ಅಗತ್ಯವಾದ ಫೈಲ್‌ಗಳು ಮತ್ತು ಕಾಂಟ್ಯಾಕ್ಟ್‌ಗಳ ಬ್ಯಾಕಪ್ ಮಾಡಿಟ್ಟುಕೊಳ್ಳಿ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img