Saturday, July 27, 2024
spot_img
spot_img
spot_img
spot_img
spot_img
spot_img

ರದ್ದಾದ ರೇಷನ್ ಕಾರ್ಡ್ ಪಟ್ಟಿ ಆನ್‌ಲೈನ್‌ನಲ್ಲಿ ಬಿಡುಗಡೆ ; ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿದೆಯಾ ಹೀಗೆ Check ಮಾಡಿ.!

spot_img

ಜನಸ್ಪಂದನ ನ್ಯೂಸ್‌, ಸರ್ಕಾರಿ ಸೌಲಭ್ಯಗಳು : ಕರ್ನಾಟಕ ಸರ್ಕಾರ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಿದೆಯಾ.? ಅಂತ ಅದನ್ನು ಈ ರೀತಿ ಚೆಕ್ ಮಾಡಿಕೊಳ್ಳಬಹುದು. ನೀವು ಕೂಡ ನಿಮ್ಮ ಹೆಸರನ್ನು ಈ ಲಿಸ್ಟ್ ನಲ್ಲಿ ಚೆಕ್ ಮಾಡಿಕೊಳ್ಳಿ. ರದ್ದಾಗಿರುವಂತಹ ರೇಷನ್ ಕಾರ್ಡ್ ಪಟ್ಟಿಯನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸಾವಿರಾರು ರೇಷನ್ ಕಾರ್ಡ್ ಗಳು ರದ್ದಾಗಿವೆ :

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಆ ರೇಷನ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಕೂಡ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿHealth : ಲಿಪ್ ಕಿಸ್ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಈ ಯೋಜನೆ ಲಾಭ ನಿಮಗೆ ದೊರೆಯಬೇಕಾದರೆ ರೇಷನ್‌ ಕಾರ್ಡ್‌ ಚಾಲ್ತಿ ಇರುವುದು ಕಡ್ಡಾಯ. ನಿಮ್ಮ ರೇಷನ್‌ ಕಾರ್ಡ್ ಏನಾದರೂ ಅಸ್ತಿತ್ವದಲ್ಲಿ ಇಲ್ಲ ಎಂದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಹಣ ಕೂಡ ಯೋಜನೆ ಮುಖಾಂತರ ಬರುವುದಿಲ್ಲ.

ಸರ್ಕಾರದ ಯೋಜನೆ ಈಗಾಗಲೇ ಸಾವಿರಾರು ಜನರಿಗೆ ದೊರೊಯದೆ ತೊಂದರೆ ಆಗಿದೆ. ಅದೇ ರೀತಿಯ ಸಮಸ್ಯೆ ನಿಮಗೂ ಕೂಡ ಆಗಿರಬಹುದು. ಅಥವಾ ಆಗದೇ ಕೂಡ ಇರಬಹುದು. ಏಕೆಂದರೆ ಪ್ರಸ್ತುತ ದಿನಗಳಲ್ಲಿ ರೇಷನ್ ಕಾರ್ಡ್‌ಗಳನ್ನು ಮಾಡಿಸಲು ಈಗಾಗಲೇ ಲಕ್ಷಾಂತರ ಜನರು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದ್ದಾರೆ. ಆ ಲಕ್ಷದಲ್ಲಿ ಕಡಿಮೆ ಮಟ್ಟದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್‌ಗಳು ಕೂಡ ವಿತರಣೆ ಆಗುತ್ತದೆ. ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರೇಷನ್ ಕಾರ್ಡ್‌ಗಳು ಕೂಡ ದೊರೆಯುವುದಿಲ್ಲ.

ಇದನ್ನು ಓದಿCollege ಕ್ಯಾಂಪಸ್‌ನಲ್ಲಿಯೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ಬರ್ಬರ ಹತ್ಯೆ.!

ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಜನರು ಒಂದೇ ಕುಟುಂಬದಲ್ಲಿದ್ದರೂ ಕೂಡ ಐದಾರು ರೇಷನ್ ಕಾರ್ಡ್‌ಗಳನ್ನು ಕೂಡ ಹೊಂದಿರುತ್ತಾರೆ. ಅಂತವರ ರೇಷನ್ ಕಾರ್ಡ್‌ಗಳು ಕೂಡ ಇತ್ತೀಚಿನ ದಿನಗಳಲ್ಲಿ ರದ್ದಾಗಿದೆ. ನಿಮಗೆ ಹಣ ಗ್ಯಾರಂಟಿ ಯೋಜನೆಗಳ ಮುಖಾಂತರ ಬರುತ್ತಿಲ್ಲವೆಂದರೆ ಈ ಒಂದು ಕಾರಣ ಕೂಡ ಆಗಿರಬಹುದು. ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ನಿಮಗೆ ಖಚಿತವಾಗಿ ತಿಳಿಯುತ್ತದೆ.

ನೀವು ಯಾವುದೇ ತಪ್ಪು ಮಾಡದೆ ರೇಷನ್ ಕಾರ್ಡ್ ರದ್ದಾಗಿದೆ ಎಂದರೆ, ಎಲ್ಲೋ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿ ನಿಮ್ಮ ರೇಷನ್ ಕೂಡ ರದ್ದಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನೀವು ಹೊಸ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ. ಯಾವುದೇ ತಪ್ಪು ಮಾಡದೆ ಇರುವಂತಹ ಕುಟುಂಬದ ರೇಷನ್ ಕಾರ್ಡ್‌ಗಳು ಮಾತ್ರ ಮತ್ತೊಮ್ಮೆ ರೇಷನ್ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನು ಓದಿ : Special news : ಶಾಂತ ಮನಸ್ಸು ಹೊಂದಿರುವ 4 ಟಾಪ್ ರಾಶಿಯವರು ಇವರೇ.!

ರದ್ದಾಗಿರುವ ರೇಷನ್ ಕಾರ್ಡ್‌ಗಳ ಲಿಸ್ಟ್‌ನ್ನು ಈ ರೀತಿ ಚೆಕ್ ಮಾಡಿ :

  • ಮೊದಲಿಗೆ ಈ ಒಂದು Click this link ಲಿಂಕನ್ನು ಕ್ಲಿಕ್ಕಿಸಿ ಆಹಾರ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿರಿ.
  • ನಂತರ ಬಲ ಅಥವಾ ಎಡ ಭಾಗದಲ್ಲಿ ಅಡ್ಡ ಗೆರೆಗಳು ಕಾಣಿಸುತ್ತವೆ. ಆ ಅಡ್ಡ ಗೆರೆಗಳ ಮೇಲೆ ಕ್ಲಿಕ್ಕಿಸಿ.
  • ಕ್ಲಿಕಿಸಿದ ನಂತರವೇ ಸಾಕಷ್ಟು ಹಲವಾರು ನಾನಾ ರೀತಿಯ ವಿವಿಧವಾದ ಹೆಸರಿನ ಆಯ್ಕೆಗಳು ಕಾಣುತ್ತವೆ.
  • ಅಲ್ಲಿ ನೀವು e-ration card ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಇದನ್ನು ಕ್ಲಿಕ್ಕಿಸಿದ ನಂತರವೇ ration card cancelled and suspended list ಎಂಬುದನ್ನು ನೀವು ನೋಡಿ ಕ್ಲಿಕ್ಕಿಸಬೇಕು.
  • ಬಳಿಕ ನಿಮ್ಮ ಜಿಲ್ಲೆ, ತಾಲೂಕು ಹೋಬಳಿ ಊರು ಎಲ್ಲವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಭರ್ತಿ ಮಾಡಬೇಕು.
  • ಈಗ ನಿಮ್ಮ ಮುಂದೆ ರೇಷನ್ ಕಾರ್ಡ್ ರದ್ದಾಗಿರುವಂತಹ ಪಟ್ಟಿ ಕೂಡ ಕಾಣುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಇದೆ ಎಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದು, ಈಗ ಅಸ್ತಿತ್ವದಲ್ಲಿ ಇಲ್ಲ ಎಂದರ್ಥ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img