ಜನಸ್ಪಂದನ ನ್ಯೂಸ್, ಡೆಸ್ಕ್ : ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಟಾಂಬಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಭೀಕರ ತೀರ್ಪು ನೀಡಿದೆ. ಇನ್‌ಸ್ಟಾಗ್ರಾಮ್ (instagram-love) ಮೂಲಕ ಪರಿಚಯವಾದ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿಗೆ ಕಠಿಣ ಜೈಲು ಶಿಕ್ಷೆ.!
ಹೌದು, ಎಡತ್ತನಾಟ್ಟುಕರ ವಡಮ್ಮಣ್ಣಪುರಂ ನಿವಾಸಿ ಮೊಹಮ್ಮದ್ ಅಜಾಸ್ (21) ಗೆ 60 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.20,000/- ದಂಡವನ್ನು ವಿಧಿಸಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಟಾಂಬಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಕಠಿಣ ತೀರ್ಪು ನೀಡಿದೆ.
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?
ನ್ಯಾಯಾಲಯವು ದಂಡದ ಮೊತ್ತವನ್ನು ದೌರ್ಜನ್ಯಕ್ಕೊಳಗಾದ ಯುವತಿಗೆ ನೀಡುವಂತೆ ನಿರ್ದೇಶಿಸಿದೆ. 2021ರಲ್ಲಿ ಯುವತಿ ಮಣ್ಣಾರ್ಕಾಡ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ 24 ದಾಖಲೆಗಳು ಮತ್ತು 15 ಸಾಕ್ಷಿಗಳ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು.
ಶಾಸಕರ ವಿರುದ್ಧವೂ ಕ್ರಮ :
ಇದೇ ವೇಳೆ, ಪಾಲಕ್ಕಾಡ್ ಶಾಸಕರಾದ ರಾಹುಲ್ ಮಮ್‌ಕೂಟತಿಲ್ ವಿರುದ್ಧವೂ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿದೆ. ಮಹಿಳೆಯರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಾಗಿದ್ದು, ಡಿಜಿಪಿಗೆ ಸಲ್ಲಿಕೆಯಾದ ದೂರುಗಳ ಆಧಾರದ ಮೇಲೆ ತನಿಖೆ ಪ್ರಾರಂಭವಾಗಿದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮುಖ್ಯಮಂತ್ರಿ ಈ ಕುರಿತು ಸ್ಪಷ್ಟನೆ ನೀಡಿದ ನಂತರ, ಕ್ರೈಂ ಬ್ರಾಂಚ್ ಮಹಿಳೆಯರ ಹೇಳಿಕೆಗಳನ್ನು ಸಂಗ್ರಹಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಶಾಸಕರ ವಿರುದ್ಧ ಐಪಿಸಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Courtesy : Suvarna News
Liver : ಹಾಳಾದ ಲಿವರ್ ಗುಣಪಡಿಸಲು ನಿತ್ಯ 1 ಗ್ಲಾಸ್ ಈ ಪಾನೀಯ ಕುಡಿಯಿರಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಯಕೃತ್ತು (Liver) ದೇಹದ ಪ್ರಮುಖ ಅಂಗ. ದೇಹದಿಂದ ವಿಷಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಲಿವರ್ (Liver) ನಲ್ಲೂ ಕೊಳೆ ಮತ್ತು ವಿಷದ ಅಂಶಗಳು ಜಮಾಗುತ್ತವೆ. ಇದನ್ನು ಶುದ್ಧೀಕರಿಸಲು ಸರಳವಾದ ಮನೆಮದ್ದು ಶುಂಠಿ-ಪುದೀನಾ ನೀರು ಉತ್ತಮ ಆಯ್ಕೆ.
ಶುಂಠಿಯ ಲಾಭಗಳು :
- ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗೋಲ್ ಎಂಬ ಜೈವಿಕ ಅಂಶಗಳಿವೆ.
- ಲಿವರ್ (Liver) ನಲ್ಲಿ ಉರಿಯೂತ ಕಡಿಮೆ ಮಾಡಲು ಮತ್ತು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪುದೀನದ ಲಾಭಗಳು :
- ಪುದೀನಾದಲ್ಲಿ ಇರುವ ಮೆಂಥಾಲ್ ಜೀರ್ಣಾಂಗ ವ್ಯವಸ್ಥೆಗೆ ಶಾಂತಿ ನೀಡುತ್ತದೆ.
- ಲಿವರ್ (Liver) ನಲ್ಲಿ ಪಿತ್ತರಸ ಉತ್ಪಾದನೆ ಹೆಚ್ಚಿಸಿ ಕೊಬ್ಬು ಕರಗಿಸಲು ನೆರವಾಗುತ್ತದೆ.
- ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಲಿವರ್ ಕಾರ್ಯ ಸುಧಾರಿಸುತ್ತದೆ.
ಪ್ರತಿದಿನ ಕುಡಿಯುವುದರಿಂದ ಲಾಭ :
- ಲಿವರ್ (Liver) ಶುದ್ಧೀಕರಣ : ವಿಷ ಮತ್ತು ಕೊಳೆಯ ನಿವಾರಣೆ, ಕೊಬ್ಬಿನ ಲಿವರ್ ತಡೆಯಲು ಸಹಕಾರಿ.
- ಜೀರ್ಣಕ್ರಿಯೆ ಸುಧಾರಣೆ : ಅಜೀರ್ಣ, ಅನಿಲ, ಹೊಟ್ಟೆ ನೋವು ನಿವಾರಣೆ.
- ತೂಕ ನಿಯಂತ್ರಣ : ಚಯಾಪಚಯ ಕ್ರಿಯೆ ವೇಗಗೊಳಿಸಿ ತೂಕ ಇಳಿಸಲು ಸಹಾಯ.
- ರೋಗನಿರೋಧಕ ಶಕ್ತಿ ಹೆಚ್ಚಳ : ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ದೇಹ ಬಲಪಡುತ್ತದೆ.
- ಹೈಡ್ರೇಷನ್ : ದೇಹ ತಂಪಾಗಿ, ಬೇಸಿಗೆಯಲ್ಲಿ ತಾಜಾತನ ನೀಡುತ್ತದೆ.
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?
ಶುಂಠಿ-ಪುದೀನಾ ನೀರು ತಯಾರಿಸುವ ವಿಧಾನ :
ಬೇಕಾಗುವ ಸಾಮಗ್ರಿಗಳು :
- 1 ಇಂಚಿನ ಶುಂಠಿ ತುಂಡು.
- 10–15 ಪುದೀನ ಎಲೆಗಳು.
- 1 ಗ್ಲಾಸ್ ನೀರು.
- ½ ನಿಂಬೆ ರಸ.
- ಸ್ವಲ್ಪ ಕಪ್ಪು ಉಪ್ಪು.
ತಯಾರಿಸುವ ವಿಧಾನ :
- ಒಂದು ಪಾತ್ರೆಯಲ್ಲಿ ನೀರಿಗೆ ಶುಂಠಿ ತುಂಡು ಮತ್ತು ಪುದೀನ ಎಲೆ ಹಾಕಿ ಕುದಿಸಿ.
- ಅರ್ಧ ನೀರು ಉಳಿದಾಗ ಉರಿ ಆರಿಸಿ, ತಣ್ಣಗಾಗಲು ಬಿಡಿ.
- ಸೋಸಿ ಲೋಟಕ್ಕೆ ಸುರಿದು, ಬೇಕಿದ್ದರೆ ನಿಂಬೆ ರಸ ಮತ್ತು ಕಪ್ಪು ಉಪ್ಪು ಸೇರಿಸಿ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ.
Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!
👉 ಗಮನಿಸಿ : ಇದು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧಾರಿತವಾಗಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.