Wednesday, September 17, 2025

Janaspandhan News

HomeViral VideoIndian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!
spot_img
spot_img
spot_img

Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : 100% ಉಪಯೋಗ, 0% ವ್ಯರ್ಥ ; ಭಾರತೀಯ ಮಹಿಳೆ (indian-woman) ಯ ತಂತ್ರಕ್ಕೆ ನೆಟ್ಟಿಗರು ಶಾಕ್.! ಏನಿದು ಅಂತೀರಾ.? ಇಲ್ಲೇ ಇರೋದು ರಹಸ್ಯ.! ಈ ರಹಸ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲೋಬ್ಬ ಮಹಿಳೆ ಹಣ ಉಳಿಸಲು ವಸ್ತುಗಳನ್ನು ಹೇಗೆ ಬಳಸಬೇಕೆನ್ನುವದನ್ನು ಮಾಡಿ ತೋರಿಸಿದ್ದಾರೆ. ಅದರಲ್ಲೂ ಹಣ ಉಳಿಸುವಲ್ಲಿ ಮತ್ತು ವಸ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ತೋರಿಸಲು ಭಾರತೀಯ ಹೆಣ್ಮಕ್ಕಳಿಗೆ ವಿಶೇಷ ಪ್ರಾವೀಣ್ಯವಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 24 ರ ದ್ವಾದಶ ರಾಶಿಗಳ ಫಲಾಫಲ.!

ಆಹಾರ ಪದಾರ್ಥವಾಗಲಿ ಅಥವಾ ದಿನಸರಿ ಬಳಕೆಯ ವಸ್ತುಗಳಾಗಲಿ ಅವು ವ್ಯರ್ಥವಾಗದಂತೆ ಬಳಸುವ ಜಾಣ್ಮೆಯನ್ನು ಈ ಭಾರತೀಯ ನಾರಿ (indian-woman) ಯಿಂದ ಕಲಿಯುವುದು ತುಂಬಾ ಇದೆ. ಸದ್ಯ ಈ ಭಾರತೀಯ ನಾರಿ, ಮಾರುಕಟ್ಟೆಯಿಂದ ತಂದ ಪಾಕೇಟ್‌ನಿಂದ ಎಣ್ಣೆಯನ್ನು ಹೇಗೆ ತೆಗೆಯಬೇಕು ಮತ್ತು ಅದನ್ನು ಹೇಗೆಲ್ಲಾ ಬಳಸಬಹುದು ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.

ಪ್ರತಿ ಹನಿ ಎಣ್ಣೆ ವ್ಯರ್ಥವಲ್ಲ ಎಂಬ ಮಹಿಳೆಯ ಸ್ಪಷ್ಟ ಸಂದೇಶ :

ವೈರಲ್ ಆಗಿರುವ ವಿಡಿಯೋದಲ್ಲಿ, ಓರ್ವ ಭಾರತೀಯ ಮಹಿಳೆ (indian-woman) ಸಾಸಿವೆ ಎಣ್ಣೆ (Mustard oil) ಯ ಪ್ಯಾಕೆಟ್‌ನ್ನು ಸಂಪೂರ್ಣವಾಗಿ ಬಳಸುವ ಕ್ರಿಯೆಯನ್ನು ತೋರಿಸುತ್ತಾರೆ. ಮೊದಲಿಗೆ ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ ಒಳಗಿರುವ ಅಳಿದುಳಿದ ಎಣ್ಣೆಯನ್ನೂ ಸಹ ವ್ಯರ್ಥ ಮಾಡಿಲ್ಲ.

ಇದನ್ನು ಓದಿ : Papaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ ಪಡೆಯಿರಿ.!

ಎಣ್ಣೆಯನ್ನು ಡಬ್ಬಿಗೆ ಹಾಕಿದ ನಂತರ ಪ್ಯಾಕೆಟ್‌ನ್ನು ಕತ್ತರಿಸಿ ಅದರಲ್ಲಿ ಅಳಿದುಳಿದ ಎಣ್ಣೆಯಲ್ಲಿ ಮಹಿಳೆ ಚಪಾತಿ ಹಿಟ್ಟು ಕಲಿಸುತ್ತಾರೆ. ಇನ್ನು ಉಳಿದಿರಬಹುದೆಂದು ಅದೆ ಎಣ್ಣೆಯೊಂದಿಗೆ ಪತಿ ಮಕ್ಕಳಿಗೆ ತೈಲ ಮಸಾಜ್ ಮಾಡಲು ತಲೆ, ಕೈ, ಪಾದಗಳಲ್ಲಿ ಎಣ್ಣೆ ಉಜ್ಜುತ್ತಾರೆ, ಮಹಿಳೆಯ ಈ ರೀತಿಯ ವರ್ತನೆ ಕಂಡು ಮಕ್ಕಳು ಆಶ್ಚರ್ಯಚಕಿತರಾಗಿರುವುದನ್ನು ವಿಡಿಯೋದಲ್ಲಿ ಕಂಡುಬರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ :

ಈ ವಿಡಿಯೋ @Rawat_1199 ಎಂಬ “X” (ಹಳೆಯ ಟ್ವಿಟರ್)‌ನಲ್ಲಿ ಶೇರ್ ಆಗಿದ್ದು, “Bhartiya Nari Apna Kam Adhura Nahin chodte” ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ 361.7K ಗಿಂತ ಹೆಚ್ಚಿನ View ಪಡೆದುಕೊಂಡಿದೆ.

ಇದನ್ನು ಓದಿ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!

ಹಲವರು ಮಹಿಳೆಯ ಜಾಣ್ಮೆಗೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. “ಇದು ನಿಜಕ್ಕೂ ಶುದ್ಧ ಭಾರತೀಯ ನಾರಿ ಶಕ್ತಿ”, “ಉಳಿಸಿದ ಪ್ರತಿ ಪೈಸೆಯೂ ಗಳಿಸಿದ ಪ್ರತಿ ಪೈಸೆಯೇ!” ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಕುತೂಹಲದಿಂದ ಅಥವಾ ಟೀಕೆಯಿಂದ “ಇದು ಹೆಚ್ಚು ಆಗುತ್ತಿದೆ” ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ಭಾರತೀಯ ನಾರಿ (indian-woman) ಯ ವಿಡಿಯೋ :

ಪ್ರತಿಕ್ರಿಯೆಗಳ ತುಣುಕುಗಳು :
  • “ಈ ವಿಡಿಯೋ ನೋಡಿ ನಾನು ನನ್ನ ಅಜ್ಜಿಯನ್ನು ನೆನೆಸಿಕೊಂಡೆ!”
  • “ಇದು ನಾವೆಲ್ಲ ಕಲಿಯಬೇಕಾದ ಸಂಸ್ಕೃತಿಯ ಭಾಗ.”
  • “ಪ್ರತಿ ಪೀಳಿಗೆ ಹಿಂದಿನದಕ್ಕಿಂತ ವಿಚಿತ್ರವಾಗಿ ವರ್ತಿಸುತ್ತಿದೆ…”

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


KSRTC ಬಸ್‌ಗಳ ಮುಖಾಮುಖಿ ಢಿಕ್ಕಿ : 8 ಜನರಿಗೆ ಗಂಭೀರ ಗಾಯ.!

KSRTC

ಜನಸ್ಪಂದನ ನ್ಯೂಸ್, ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ನಡೆದ KSRTC ಬಸ್‌ಗಳ ನಡುವಿನ ಭೀಕರ ಮುಖಾಮುಖಿ ಅಪಘಾತದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಇಬ್ಬರು KSRTC ಬಸ್ ಚಾಲಕರ ಜೊತೆಗೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ಘಟನೆಯ ವೇಳೆಗೆ ಒಂದು ಬಸ್ ಬೆಂಗಳೂರುದಿಂದ ಮಂಗಳೂರಿಗೆ, ಮತ್ತೊಂದು ಬಸ್ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಶಿರಾಡಿಘಾಟ್ ರಸ್ತೆಯ ಮಾರನಹಳ್ಳಿ ಬಳಿ ಬಸ್‌ಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದವು.

ರಭಸದ ಢಿಕ್ಕಿಯಿಂದ ಒಂದು KSRTC ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments