Sunday, February 25, 2024
spot_img
spot_img
spot_img
spot_img
spot_img

ನೀನೆ ಬೇಕು, ನೀನೆ ಬೇಕು” ಅಂತ Aunty ಹಿಂದೆ ಬಿದ್ದ ಯುವಕ ; ಮುಂದೆನಾಯ್ತು.?

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರದಲ್ಲಿ ನೀನೆ ಬೇಕು, ನೀನೆ ಬೇಕು (Need you) ಎಂದು ಹಿಂದೆ ಬಿದ್ದ ಯುವಕನ ಕಾಟ ತಾಳಲಾರದೆ ಮಹಿಳೆ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಘಟನೆ ನಡೆದಿದೆ.

ಶೆರ್ವಿನ್ ಎಂಬಾತ ಸಿಂದೂರಿ ಎಂಬ ಮಹಿಳೆಯ ಹಿಂದೆ ಬಿದ್ದು ಪೀಡಿಸುತ್ತಿದ್ದಾನೆ.

ಕೆಲ ದಿನಗಳ ಹಿಂದೆಯಷ್ಟೇ ಶೆರ್ವಿನ್ ಮತ್ತು ಸಿಂದೂರಿ ಇಬ್ಬರು ಪರಿಚಯವಾಗಿದ್ದರು (Introduce). ಒಟ್ಟಿಗೆ ಇಬ್ಬರು ಒಡಾಡಿಕೊಂಡಿದ್ದರು. ಇಬ್ಬರ ಮಧ್ಯೆ ಪ್ರೀತಿ, ಪ್ರೇಮ ಕೂಡ ಚಿಗುರೊಡೆದಿತ್ತು ಎನ್ನಲಾಗಿದೆ.

ಹೋಟೆಲ್, ರೂಂ ಅಂತ ಎಲ್ಲ ಕಡೆ ಸುತ್ತಾಡಿಕೊಂಡಿದ್ದ ಜೋಡಿ ಶೆರ್ವಿನ್ ಖರ್ಚಿಗೆ ಆಗಾಗ ಸಿಂಧೂರಿ ಹಣ ನೀಡ್ತಿದ್ದಳು.

ಇದ್ದಕ್ಕಿದ್ದಂತೆ ಸಿಂದೂರಿ ಶೆರ್ವಿನ್ ದೂರ ಮಾಡಿದ್ದಳು. ಇದರಿಂದ ಕೋಪಗೊಂಡಿದ್ದ (Angry) ಶೆರ್ವಿನ್ ಹಲವಾರು ಬಾರಿ ಮನೆ, ಕಚೇರಿಗೆ ಹೋಗಿ ಜಗಳ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಇಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ, ಇತನ ಕಾಟ ತಾಳಲಾರದೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು (Complaint) ಸಿಂಧೂರಿ ನೀಡಿದ್ದಾಳೆ.

spot_img
- Advertisment -spot_img