ಜನಸ್ಪಂದನ ನ್ಯೂಸ್, ಡೆಸ್ಕ್ : ವೈಯಕ್ತಿಕ (Personal) ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಭ ಸುದ್ದಿ ನೀಡಿದ್ದಾರೆ.
50 ವರ್ಷದ ಮಾನ್ ಶೀಘ್ರದಲ್ಲೇ ತಂದೆಯಾಗಲಿದ್ದೇನೆ ಎಂದು ಗಣರಾಜ್ಯೋತ್ಸವದ (Republic Day) ದಿನ ಘೋಷಿಸಿಕೊಂಡಿದ್ದಾರೆ. ಅವರ 2ನೇ ಪತ್ನಿ ಗುರುಪ್ರೀತ್ ಕೌರ್ ಪ್ರಸ್ತುತ ಏಳು ತಿಂಗಳ ಗರ್ಭಿಣಿ ಎಂದು ಅವರು ತಿಳಿಸಿದ್ದಾರೆ.
ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ (University of Agriculture) ಆವರಣದಲ್ಲಿ ಮಾನ್ ಧ್ವಜಾರೋಹಣ ಮಾಡಿದರು. ಬಳಿಕ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಭಗವಂತ್ ಮಾನ್, ತಮ್ಮ ಪತ್ನಿ ಡಾ.ಗುರ್ ಪ್ರೀತ್ ಕೌರ್ ಗರ್ಭಿಣಿಯಾಗಿದ್ದು (Pregnant), ಮಾರ್ಚ್ ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪಂಜಾಬ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಭಗವಂತ್ ಮಾನ್ ಜುಲೈ 2022 ರಲ್ಲಿ ಡಾ. ಗುರುಪ್ರೀತ್ ಕೌರ್ ಅವರನ್ನು ವಿವಾಹವಾದರು. ಅವರು ಮಾನ್ ಅವರ ಎರಡನೇ ಪತ್ನಿ. ಅದಕ್ಕೂ ಮೊದಲು ಅವರು 2015ರಲ್ಲಿ ತಮ್ಮ ಮೊದಲ ಪತ್ನಿ ವಿಚ್ಛೇದನ (Divorce) ಪಡೆದಿದ್ದರು.